ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ತಯಾರಿಸುವ ಹೆಗ್ಗಳಿಕೆ ಶ್ಯೋಮಿ ಕಂಪನಿಯದ್ದು. Redmi Note 3, Redmi Note 5 Pro ಗಳಂತಹ ಸೂಪರ್ ಹಿಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ನೀಡಿದ ಶ್ಯೋಮಿ ಈಗ Redmi Note 6 Proನ್ನು ಬಿಡುಗಡೆ ಮಾಡಿದೆ. ಹೇಗಿದೆ ಆ ಫೋನ್? ನೋಡೋಣ ಈ ಸ್ಟೋರಿಯಲ್ಲಿ...
2016 ರಲ್ಲಿ Redmi Note 3 ಮೊಬೈಲನ್ನು ಬಿಡುಗಡೆ ಮಾಡಿದ್ದೇ ತಡ, ಶ್ಯೋಮಿ ಬ್ರ್ಯಾಂಡ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯವಾಯಿತು. ವಿಶ್ವಾಸಾರ್ಹ ಹಾರ್ಡ್‌ವೇರ್, ಸೂಕ್ತ ಬೆಲೆ ಹಾಗೂ ಹೊಸ ಫೀಚರ್‌ಗಳಿಂದಾಗಿ ಶ್ಯೋಮಿ ಮೊಬೈಲ್ ಪ್ರಿಯರ ಮನಗೆದ್ದಿದೆ..
20,000 ರೂ. ಗಿಂತ ಕಡಿಮೆ ಬೆಲೆಯ ಫೋನ್‌ಗಳ ಪೈಕಿ ಶ್ಯೋಮಿಯ Redmi Note 5 Pro ಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಬಿಡುಗಡೆಯಾಗಿರುವ Redmi Note 6 Pro ಕೂಡಾ ಅಂತಹದ್ದೇ ನಿರೀಕ್ಷೆಗಳನ್ನು ಮೊಬೈಲ್ ಪ್ರಿಯರಲ್ಲಿ ಹುಟ್ಟುಹಾಕಿದೆ.
ಇದನ್ನೂ ಓದಿ: 5G, ಬರೋಬ್ಬರಿ 6 ಕ್ಯಾಮೆರಾ! ಮಾರುಕಟ್ಟೆಗೆ ಲಗ್ಗೆಯಿಡಲಿರುವ ಯಾವುದೀ ಮೊಬೈಲ್?
ನ.22 ಬಿಡುಗಡೆಯಾಗಿರುವ Redmi Note 6 Pro ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯವಿರುವ ಫೋನ್ ರೂ.13,999 ಗೆ ಲಭ್ಯವಿದ್ದರೆ, 6GB RAM ಮತ್ತು 64GB ಸ್ಟೋರೆಜ್ ಇರುವ ಫೋನ್ Rs 15,999ಕ್ಕೆ ಲಭ್ಯವಿದೆ.
ಎಂದಿನಂತೆ Redmi Note 6 Pro ಕೂಡಾ, ಫ್ಲಿಪ್‌ಕಾರ್ಟ್, Mi.com ಹಾಗೂ ಶ್ಯೋಮಿ ಸ್ಟೋರ್‌ಗಳಲ್ಲಿ ಲಭ್ಯವಿದ್ದು, ಕೆಂಪು, ನೀಲಿ, ಕಪ್ಪು ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಸಿಗುತ್ತದೆ.
Redmi Note 6 Pro ಬಹುತೇಕ Redmi Note 5 Proನಂತಿದ್ದು, ಕ್ಯಾಮೆರಾ ವಿಷಯದಲ್ಲಿ ಹೆಚ್ಚಿನ ಭಿನ್ನತೆಯಿದೆ. ಕ್ಯಾಮೆರಾಗಳೇ ಈ ಫೋನ್ ಬೆಲೆಗೆ ತಕ್ಕಂತಿದೆ. ವಿನ್ಯಾಸದಲ್ಲೂ ಈ ಎರಡು ಫೋನ್‌ಗಳು ಬಹಳಷ್ಟು ಸಾಮ್ಯತೆಗಳನ್ನು ಹೊಂದಿದೆ. ಈ ಎರಡೂ ಪೋನ್‌ಗಳನ್ನು ಜತೆಗಿಟ್ಟರೆ ಅವುಗಳಲ್ಲಿ 6 Pro ಯಾವುದು 5 Pro ಯಾವುದು ಎಂದು ಗುರುತಿಸುವುದು ಕಷ್ಟ.
Redmi Note 6 Pro ಫೀಚರ್ಸ್‌ಗಳು:
Redmi Note 6 Pro ನಲ್ಲಿ ಓಟ್ಟು ನಾಲ್ಕು ಕ್ಯಾಮೆರಗಳಿದ್ದು, ಎರಡು ಮುಂಭಾಗದಲ್ಲಿ, ಎರಡು ಹಿಂಭಾಗದಲ್ಲಿವೆ.
6.2 ಇಂಚು ಫುಲ್ ಎಚ್‌ಡಿ ನಾಟ್ಚ್‌ಡ್ ಡಿಸ್ಪ್ಲೇ ಹೊಂದಿದ್ದು, ಡ್ಯುಯೆಲ್ ವೋಲ್ಟ್ ತಂತ್ರಜ್ಞಾನ ಹೊಂದಿದೆ.
MIUI 10 ಆಧಾರಿತ Android 8.1 Oreo ಸಾಫ್ಟ್‌ವೇರ್‌ನ್ನು ಈ ಫೋನ್ ಹೊಂದಿದೆ.
Qualcomm Snapdragon 636 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಫಿಂಗರ್ ಪ್ರಿಂಟ್ ಅನ್‌ಲಾಕ್ ಸೌಲಭ್ಯ ಹೊಂದಿರುವ ಈ ಫೋನ್ ಫೇಸ್ ಅನ್‌ಲಾಕ್ ತಂತ್ರಜ್ಞಾನವನ್ನೂ ಹೊಂದಿದೆ.
ಏನೇ ಹೇಳಿ, ಕ್ಯಾಮೆರಾದ ಗುಣಮಟ್ಟದ ಬಗ್ಗೆ ಬೇರೆ ಮಾತಿಲ್ಲ ಎಂದು ವಿಶ್ಲೇಷಕರ ಅಭಿಪ್ರಾಯ. ಹಿಂಭಾಗದಲ್ಲಿ 12MP + 5MP ಕ್ಯಾಮೆರಾಗಳಿದ್ದು, ಮಂದ ಬೆಳಕಿನಲ್ಲೂ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿದೆ. ಮುಂಭಾಗದ ಮುಖ್ಯ ಕ್ಯಾಮೆರಾ 20MP ಇದ್ದು, ಇನ್ನೊಂದು 2MP ಇದೆ.