ಭಾರತೀಯ ಬಳಕೆದಾರರಿಗೆ ಸುಗ್ಗಿ, ಆಕರ್ಷಕ ಫೀಚರ್‌ಗಳುಳ್ಳ Oneplus 7T ಬಿಡುಗಡೆ!

By Web Desk  |  First Published Sep 27, 2019, 1:22 PM IST

Oneplus ಕಂಪನಿಯು ಹೊಸ ಮೊಬೈಲ್‌ ಫೋನ್| ಹೊಸ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಮೇಲ್ದರ್ಜೆಗೇರಿಸಿದ ಕ್ಯಾಮೆರಾ ಸೆಟಪ್| ಭಾರತೀಯ ಬಳಕೆದಾರರಿಗೆ ಸುಗ್ಗಿ, ಆಕರ್ಷಕ ಫೀಚರ್‌ಗಳುಳ್ಳ Oneplus 7T ಬಿಡುಗಡೆ!


ನವದೆಹಲಿ[ಸೆ.27]: ಪ್ರೀಮಿಯರ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ Oneplus ಕಂಪನಿಯು ಹೊಸ ಮೊಬೈಲ್‌ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ Oneplus 7T ಸ್ಮಾರ್ಟ್‌ಫೋನನ್ನು ಲೋಕಾರ್ಪಣೆ ಮಾಡಲಾಯಿತು. ಹೊಸ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಮೇಲ್ದರ್ಜೆಗೇರಿಸಿದ ಕ್ಯಾಮೆರಾ ಸೆಟಪ್ ಈ ಹೊಸ ಫೋನ್‌ನ ವಿಶೇಷತೆಗಳಾಗಿವೆ. 

ಭಾರತದಲ್ಲಿ ಪ್ರೀಮಿಯರ್ ಸ್ಮಾರ್ಟ್‌ಫೋನ್‌ಗಳ ಪೈಕಿ ಮೊದಲ ಸ್ಥಾನದಲ್ಲಿರುವ Oneplus, ಹೈದರಾಬಾದ್‌ನಲ್ಲಿ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಕೇಂದ್ರವನ್ನು ಹೊಂದಿದೆ. ಈ ವರ್ಷ ಭಾರತದಲ್ಲಿ ಒಂದು ಸಾವಿರ ಕೋಟಿ ರೂ. ಹಣ ಹೂಡುವುದಾಗಿ ಕಂಪನಿಯು ಈ ಸಂದರ್ಭದಲ್ಲಿ ಪ್ರಕಟಿಸಿತು.

Tap to resize

Latest Videos

undefined

ಅಷ್ಟೇ ಅಲ್ಲ, ಮೊಬೈಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ, ನಿಮ್ಮ ಮನೆ ಬಾಗಿಲಿಗೆ 2 Hours Repair Service ನ್ನು ಕಂಪನಿಯು ಪರಿಚಯಿಸಿದೆ. ವಿಶೇಷವೆಂದರೆ, ಈ ಸೇವೆ ಮೊದಲು ಆರಂಭವಾಗುವುದು ಬೆಂಗಳೂರಿನಲ್ಲಿ! ಮುಂದಿನ ಹಂತದಲ್ಲಿ ದೇಶದ ಇತರ ಆರು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವ ಯೋಜನೆಯೂ ಇದೆ ಎಂದು ಕಂಪನಿಯು ಹೇಳಿದೆ.

ಬಿಡುಗಡೆಯಾಗಿರುವ Oneplus 7T ವಿನ್ಯಾಸದಲ್ಲಿ ಇತರ ಫೋನ್‌ಗಳಿಗಿಂತ ವಿಭಿನ್ನವಾಗಿದೆ. ಮ್ಯಾಟ್ ಫಿನಿಶಿಂಗ್ ಪ್ಯಾನೆಲ್ ಹೊಂದಿರುವ ಈ ಫೋನ್‌ ಕೇವಲ 8.1mm ದಪ್ಪ ಇದೆ. 

ಡಿಸ್ಪ್ಲೇ:

Oneplus 7T ಫೋನ್ ಫ್ಲುಯಿಡ್ ಎಚ್‌ಡಿ ಡಿಸ್ಪ್ಲೇ ಹೊಂದಿದ್ದು, ಬಳಕೆದಾರರಿಗೆ ಇನ್ನಷ್ಟು ಉತ್ತಮ ಅನುಭವ ಒದಗಿಸುತ್ತದೆ.  ಬ್ರೈಟ್ಸ್ನೆಸ್, ಗೇಮಿಂಗ್‌ಗಾಗಿ ಅನಿಮೇಶನ್ ಆಪ್ಟಿಮೈಝೇಶನ್, ಓದಲು ಕ್ರೋಮಾಟಿಕ್ ರಿಡಿಂಗ್ ಮೋಡ್‌ನ್ನು ಈ ಫೋನ್‌ನಲ್ಲಿ ಪರಿಚಯಿಸಲಾಗಿದೆ.

ಕ್ಯಾಮೆರಾ:

ಸೂಪರ್ ಸ್ಟೇಬಲ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ನಡೆಯುತ್ತಾ, ಆಟ ಆಡುತ್ತಲೂ ಫೋಟೋ ತೆಗೆಯಬಹುದು. ಪೋಟ್ರೈಟ್ ಮೋಡ್, ಅಲ್ಟ್ರಾ ವೈಡ್ಯಾಂಗಲ್, ಸೂಕ್ಷ್ಮ ವಸ್ತುಗಳ ಫೋಟೋ ತೆಗೆಯಲು (ಮ್ಯಾಕ್ರೋ ಫೋಟೋಗ್ರಫಿ) ಮ್ಯಾಕ್ರೋ ಲೆನ್ಸ್,  ಅಲ್ಟ್ರಾ ವೈಡ್ ನೈಟ್‌ ಸ್ಕೇಪ್ ಫೀಚರ್‌ಗಳು ಈ ಫೋನಿನಲ್ಲಿವೆ.

ಉತ್ತಮ ಕಾರ್ಯಕ್ಷಮತೆಗಾಗಿ Qualcomm Snapdragon 855 Plus  ಚಿಪ್‌ಸೆಟ್ ಹೊಂದಿದೆ. Android 10  ಆಪರೇಟಿಂಗ್ ಸಿಸ್ಟಮ್ ಹೊಂದಿದ ಮೊದಲ ಫೋನ್‌ ಎಂಬ ಹೆಗ್ಗಳಿಕೆಗೆ Oneplus 7T ಪಾತ್ರವಾಗಿದೆ. ಆ ಮೂಲಕ ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.

ಭಾರತೀಯ ಬಳಕೆದಾರರಿಗೆ ಸುಗ್ಗಿ

ಭಾರತೀಯ ಬಳಕೆದಾರರಿಗೆಂದೇ ಕೆಲವು ಫೀಚರ್‌ಗಳನ್ನು Oneplus 7T ಒಳಗೊಂಡಿದೆ. ಕ್ರಿಕೆಟ್ ಸ್ಕೋರ್, ಅಚ್ಚುಕಟ್ಟಾದ ಫೋಟೋ ಗ್ಯಾಲರಿ, 55 ಜಿಬಿ ಉಚಿತ ಕ್ಲೌಡ್ ಸ್ಟೋರೆಜ್ ಸೌಲಭ್ಯ, ವೈಯುಕ್ತಿಕ ಬದುಕು ಮತ್ತು ಕೆಲಸದ ಜಂಜಾಟಗಳ ನಡುವೆ ಸಮತೋಲನ ಕಾಪಾಡಲು ಪ್ರತ್ಯೇಕ ಆ್ಯಪ್ ವಿಂಗಡಣೆ ಮತ್ತಿತರ ಫೀಚರ್‌ಗಳನ್ನು ಹೊಂದಿದೆ.

ಓನ್‌ಪ್ಲಸ್ ಪೇ

ಇದೇ ವೇಳೆ ಒನ್‌ಪ್ಲಸ್ ಪೇ ಡಿಜಿಟಲ್ ವ್ಯಾಲೆಟ್ ಸೇವೆಯನ್ನು ಆರಂಭಿಸುವುದಾಗಿ ಕಂಪನಿ ಸಂಸ್ಥಾಪಕ ಪೀಟ್ ಲೌ ಪ್ರಕಟಿಸಿದ್ದಾರೆ.

ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!