ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!

Published : Sep 23, 2019, 06:18 PM IST
ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!

ಸಾರಾಂಶ

ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಹೊಸ ಹೊಸ ವ್ಯವಸ್ಥೆಗಳು ಜಾರಿಗೆ ಬರುತ್ತವೆ. ಜೊತೆಗೆ, ಅವುಗಳ ಬಳಕೆ ಹೇಗಾಗ್ಬೇಕು? ಹೇಗಾಗಬಾರದು? ಅದನ್ನು ಯಾರು ಬಳಸಬೇಕು? ಯಾರು ಬಳಸಬಾರದು? ಎಷ್ಟರ ಮಟ್ಟಿಗೆ ಬಳಸ್ಬೇಕು? ಎಂಬಿತ್ಯಾದಿ ವಿಚಾರಗಳೂ ಚರ್ಚೆಗೀಡಾಗುತ್ತಿವೆ. ಅಂತಹದ್ದೇ ಒಂದು ಪ್ರಶ್ನೆಯನ್ನು ಹುಟ್ಟುಹಾಕುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ಹೊರಟಿದೆ....  

ಭಾರತವು ವಿಶ್ವದ ಅತೀ ದೊಡ್ಡ ಚಹರೆ ಗುರುತು (ಫೇಶಿಯಲ್ ರಿಕಗ್ನಿಷನ್ ) ವ್ಯವಸ್ಥೆಯನ್ನು ಸ್ಥಾಪಿಸಲು ಹೊರಟಿದೆ.  ಆ ಮೂಲಕ ದೇಶದಲ್ಲಿ ಸರ್ವಿಲಿಯನ್ಸ್ ಕಂಪನಿಗಳಿಗೆ ದೊಡ್ಡ ಅವಕಾಶ ತೆರೆದು ಕೊಳ್ಳಲಿದೆ. ಇನ್ನೊಂದು ಕಡೆ ಪ್ರೈವೆಸಿ ಹಕ್ಕು ಹೋರಾಟಗಾರರ ಕೆಂಗಣ್ಣಿಗೆ ಈ ಯೋಜನೆ ಗುರಿಯಾಗುವುದರಲ್ಲಿ ಸಂಶಯವಿಲ್ಲ. ಚೀನಾದಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.

ದೇಶಾದ್ಯಂತ ಸರ್ವೇಕ್ಷಣಾ ಕ್ಯಾಮೆರಾಗಳ ಮೂಲಕ ದಾಖಲಾದ ಎಲ್ಲಾ ಮಾಹಿತಿಯನ್ನು ಒಂದೆಡೆ ಸಂಗ್ರಹಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಮುಂದಿನ ತಿಂಗಳು ಬಿಡ್ ಕರೆಯಲಿದೆ. ಈ ವ್ಯವಸ್ಥೆಯಲ್ಲಿ ಪಾಸ್ ಪೋರ್ಟ್, ಫಿಂಗರ್ ಪ್ರಿಂಟ್ ನಂತಹ ಎಲ್ಲಾ ಮಾಹಿತಿಗಳು ಒಂದಕ್ಕೊಂದು ಲಿಂಕ್ ಆಗುವುದರಿಂದ, ಪೊಲೀಸರಿಗೆ ಕ್ರಿಮಿನಲ್ ಗಳನ್ನು, ನಾಪತ್ತೆಯಾದ ವ್ಯಕ್ತಿಗಳನ್ನು ಮತ್ತು ಮೃತದೇಹಗಳ ಗುರುತು ಹಿಡಿಯಲು ಸುಲಭವಾಗಲಿದೆ.

ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪೊಲೀಸ್ ಪಡೆಗೆ ಈ ಮೂಲಕ ಬಲ ತುಂಬಲಿದೆ ಎಂಬುವುದು ಸರ್ಕಾರದ ಲೆಕ್ಕಾಚಾರ. ಭಾರತದಲ್ಲಿ ಸರಾಸರಿ 724 ನಾಗರಿಕರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾನೆ. ಜಾಗತಿಕ ಸರಾಸರಿಗೆ ಹೋಲಿಸಿದರೆ ಇದು ಬಹಳ ಕಡಿಮೆ.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್‌ ಪತನಗೊಂಡಿದ್ದು ಹೇಗೆ? ಬಯಲಾಯ್ತು ಕಾರಣ

ಖಾಸಗಿ ಸರ್ವೇಕ್ಷಣಾ ಕಂಪನಿಗಳಿಗೂ ಈ ಹೊಸ ವ್ಯವಸ್ಥೆ ದೊಡ್ಡ ವರವಾಗಿ ಪರಿಣಮಿಸಲಿದೆ. ಒಂದು ಅಂದಾಜಿನ ಪ್ರಕಾರ ಫೇಶಿಯಲ್ ರಿಕಗ್ನಿಷನ್ ಉದ್ಯಮವು 2024ರ ಹೊತ್ತಿಗೆ 4.3 ಬಿಲಿಯನ್ ಡಾಲರ್ ವರೆಗೆ ತಲುಪಲಿದೆ.

ಡೇಟಾ ಸುರಕ್ಷತೆ ಮತ್ತು ಖಾಸಗಿತನ ಕಾಪಾಡಲು ಸಮರ್ಪಕವಾದ  ಕಾನೂನುಗಳಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ