ಇಸ್ರೋದ ಮಂಗಳಯಾನ ಯೋಜನೆಗೆ ಭರ್ತಿ ಐದು ವರ್ಷ| ಮಂಗಳ ಗ್ರಹ ಅಧ್ಯಯನದಲ್ಲಿ ನಿರತವಾಗಿರುವ ಇಸ್ರೋದ ಮಾಮ್ ನೌಕೆ| ಕೇವಲ ಆರು ತಿಂಗಳ ಯೋಜನೆಯಾಗಿದ್ದ ಮಂಗಳಯಾನ| ಎರಡು ಟೆರಾ ಬೈಟ್’ನಷ್ಟು ಡೇಟಾ ರವಾನಿಸಿರುವ ಮಾಮ್ ನೌಕೆ| ಇನ್ನೂ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಲಿರುವ ಮಾಮ್|
ನವದೆಹಲಿ(ಸೆ.25): ಮಂಗಳ ಗ್ರಹ ಅಧ್ಯಯನದಲ್ಲಿ ನಿರತವಾಗಿರುವ ಇಸ್ರೋದ ಮಂಗಳಯಾನ ಯೋಜನೆಗೆ ಭರ್ತಿ ಐದು ವರ್ಷ ಸಂದಿವೆ.
ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮಂಗಳ ಗ್ರಹವನ್ನು ಸುತ್ತುತ್ತಿರುವ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್(ಮಾಮ್), ಈಗಾಗಲೇ ಎರಡು ಟೆರಾ ಬೈಟ್’ನಷ್ಟು ಡೇಟಾವನ್ನು ರವಾನಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
undefined
ಕೇವಲ ಆರು ತಿಂಗಳ ಯೋಜನೆಯಾಗಿದ್ದ ಮಂಗಳಯಾನ, ತನ್ನ ಸಾಮರ್ಥ್ಯದ ಪರಿಣಾಮವಾಗಿ ಐದು ವರ್ಷಗಳನ್ನು ಪೂರೈಸಿದ್ದು ಇನ್ನೂ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಶಿವನ್ ತಿಳಿಸಿದ್ದಾರೆ.
ಮಾಮ್ ನೌಕೆ ಮಂಗಳ ಗ್ರಹದ ನೈಸರ್ಗಿಕ ಉಪಗ್ರಹಗಳಾದ ಫೊಬೋಸ್ ಮತ್ತು ಡಿಮೋಸ್ ಫೋಟೋಗಳನ್ನು ಕೂಡ ಕ್ಲಿಕ್ಕಿಸಿದ್ದು, ಗ್ರಹದ ಅಧ್ಯಯನ ಅತ್ಯಂತ ಕರಾರುವಕಕಾಗಿ ಸಾಗಿದೆ ಎಂದು ಶೀವನ್ ಸ್ಪಷ್ಟಪಡಿಸಿದ್ದಾರೆ.
ಮಂಗಳ ಗ್ರಹದಲ್ಲಿ ಉಂಟಾಗುವ ಧೂಳಿನ ಬಿರುಗಾಳಿ ನೂರಾರು ಕಿ.ಮೀ ಮೇಲೆ ವ್ಯಾಪಿಸುತ್ತದೆ ಎಂಬುದನ್ನು ಮಾಮ್ ಪತ್ತೆ ಹಚ್ಚಿದೆ ಎಂದು ಇಸ್ರೋ ಮಾಹಿತಿ ನೀಡಿದೆ.