ಅಬ್ಬಬ್ಬಾ... ಇನ್ಮುಂದೆ ನಿಮ್ಮ ಕನಸನ್ನೂ ರೆಕಾರ್ಡ್​ ಮಾಡ್ಬೋದು, ಮತ್ತೊಮ್ಮೆ ವೀಕ್ಷಿಸಲೂಬಹುದು!

By Suchethana D  |  First Published Sep 27, 2024, 3:46 PM IST

ನಮಗೆ ಬೀಳುವ ಎಷ್ಟೋ ಕನಸುಗಳು ಬೆಳಗಾಗುವುದರೊಳಗೆ ಮರೆತು ಹೋಗುತ್ತದೆ. ಆದರೆ ಕನಸನ್ನು ರೆಕಾರ್ಡ್​ ಮಾಡಿಟ್ಟುಕೊಳ್ಳಬಲ್ಲ ಹಾಗೂ ಅದನ್ನು ಮತ್ತೊಮ್ಮೆ ವೀಕ್ಷಿಸಲು ಸುಲಭವಾದಂಥ ಯಂತ್ರವೊಂದನ್ನು ಕಂಡುಹಿಡಿಯಲಾಗಿದೆ. ಏನಿದು ಮಷಿನ್​? 
 


ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಯಾರೂ ಕಲ್ಪನೆ ಮಾಡಿಕೊಳ್ಳದಂಥ ಸಾಧನೆಗಳನ್ನು ಸಂಶೋಧಕರು ಮಾಡುತ್ತಿದ್ದಾರೆ. ಇದಾಗಲೇ ಕೃತಕ ಬುದ್ಧಿಮತ್ತೆ ಎನ್ನುವುದು ನಂಬಲರ್ಹ ಕೆಲಸಗಳನ್ನು ಮಾಡುತ್ತಿದೆ. ಇದೇ ರೀತಿ ಮನುಷ್ಯರು ಮಾಡುವ ಕೆಲಸಗಳನ್ನೆಲ್ಲಾ ಯಂತ್ರಗಳೇ ಮಾಡಿ ಮನುಷ್ಯರಿಗೆ ಉದ್ಯೋಗವೇ ಇಲ್ಲದಂತೆ ಮಾಡುತ್ತದೆ ಎನ್ನುವ ಭಯವೂ ಹಲವರನ್ನು ಕಾಡುವುದು ಇದೆ. ಅಷ್ಟು ಮುಂದುವರೆದಿದೆ ತಂತ್ರಜ್ಞಾನ. ಆದರೆ ಇದೀಗ ಕುತೂಹಲವೆಂಬಂತೆ ಕನಸನ್ನು ಕೂಡ ರೆಕಾರ್ಡ್​ ಮಾಡಿಕೊಳ್ಳಬಲ್ಲ ಹಾಗೂ ಆ ಕನಸನ್ನು ಮತ್ತೊಮ್ಮೆ ಪ್ಲೇ ಮಾಡಿ ನೋಡಬಲ್ಲ ಯಂತ್ರವೊಂದನ್ನು ಕಂಡುಹಿಡಿಯಲಾಗಿದೆ! ವಿಚಿತ್ರ ಎನಿಸಿದರೂ ಇದು ಸತ್ಯವಾಗಿಸಿದ್ದಾರೆ ಜಪಾನ್​ನ ವಿಜ್ಞಾನಿಗಳು.

ಎಂಆರ್​ಐ ಮಷಿನ್​ ಇದಾಗಿದೆ. ಎಷ್ಟೋ ಬಾರಿ ಕನಸುಗಳು ನಮ್ಮ ನೆನಪಿನಲ್ಲಿ ಉಳಿಯುವುದೇ ಇಲ್ಲ. ಬೆಳಿಗ್ಗೆ ಆದ ತಕ್ಷಣ ಈ ಕನಸನ್ನು ಮನೆಯವರ ಬಳಿ ಹೇಳಬೇಕು ಎಂದು ಉತ್ಸುಕರಾಗಿ ಎದ್ದಿರುತ್ತೇವೆ. ಆದರೆ ಆ ಕನಸು ಹಲವು ಬಾರಿ ಅಲ್ಪಸ್ವಲ್ಪವೂ ನೆನಪು ಇರದಿದ್ದರೆ, ಕೆಲವು ಸಲ ಒಂದಿಷ್ಟು ಪಾರ್ಟ್​ ಮಾತ್ರ ನೆನಪು ಇರುತ್ತದೆ. ಅಯ್ಯೋ ಎಷ್ಟು ಚೆನ್ನಾಗಿತ್ತು ಕನಸು, ಅಬ್ಬಾ ಎಷ್ಟು ಭೀಕರವಾಗಿತ್ತು ಕನಸು, ನಿಮಗೂ ಹೇಳಬೇಕಿತ್ತು ಎಂದೆಲ್ಲಾ ಎಷ್ಟು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದೇ ಇಲ್ಲ. ಇದೀಗ ಆ ಕನಸನ್ನು ಇನ್ಮುಂದೆ ರೆಕಾರ್ಡ್​ ಮಾಡಿಕೊಳ್ಳಬಹುದಾದ ತಂತ್ರಜ್ಞಾನ ಕಂಡುಹಿಡಿಯಲಾಗಿದೆ. 

Tap to resize

Latest Videos

undefined

ದೃಷ್ಟಿ ಹೀನರೂ ಇನ್ಮುಂದೆ ನೋಡಬಲ್ಲರು! ಹುಟ್ಟು ಕುರುಡರ ಬಾಳಲ್ಲಿ ಎಲಾನ್​ ಮಸ್ಕ್​ ಬೆಳಕು

ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದ ನರವಿಜ್ಞಾನಿ ಡಾ. ಯುಕಿಯಾಸು ಕಮಿಟಾನಿ ನೇತೃತ್ವದ ತಂಡವು ಮೆದುಳಿನ ಚಿತ್ರಣವನ್ನು ರೂಪಿಸುವ ಎಂಆರ್​ಐ ಮಷಿನ್​ ಕಂಡುಹಿಡಿದಿದೆ.  ಮೆದುಳಿನಿಂದ ದೃಶ್ಯ ಚಿತ್ರಗಳನ್ನು ಡಿಕೋಡ್ ಮಾಡಲು ಮತ್ತು ಪುನರ್ನಿರ್ಮಿಸಲು MRI ತಂತ್ರಜ್ಞಾನವನ್ನು ಬಳಸುವ ಯಂತ್ರ ಇದಾಗಿದೆ.   ಹಲವಾರು ವರ್ಷಗಳಿಂದ ಈ ತಂಡ ಇದರ ಮೇಲೆ ಪ್ರಯೋಗ ಮಾಡುತ್ತಿದ್ದು, ಇದೀಗ ಯಶಸ್ವಿ ಕಂಡಿದೆ.  ಕನಸಿನ ರೆಕಾರ್ಡಿಂಗ್ ಯಂತ್ರವು ಕ್ರಿಯಾತ್ಮಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಅನ್ನು ಬಳಸುತ್ತದೆ, ಇದು ರಕ್ತದ ಹರಿವನ್ನು ಅಳೆಯುವ ಮೂಲಕ ಮೆದುಳಿನ ಚಟುವಟಿಕೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚುತ್ತದೆ.  ನೀವು ಕನಸು ಕಂಡಾಗ, ನರಗಳ ಚಟುವಟಿಕೆಯ ನಿರ್ದಿಷ್ಟ ಮಾದರಿಗಳು ನಿಮ್ಮ ಮೆದುಳಿನಲ್ಲಿ ಬೆಳಗುತ್ತವೆ, ಆ ಸಮಯದಲ್ಲಿ ಈ ಯಂತ್ರವು ಚಿತ್ರಗಳನ್ನು ಸಂಸ್ಕರಿಸುತ್ತದೆ.  ಎಫ್‌ಎಂಆರ್‌ಐ ಯಂತ್ರವು ಈ ಮಾದರಿಗಳನ್ನು ಸೆರೆಹಿಡಿಯುತ್ತದೆ ಮತ್ತು ಸುಧಾರಿತ ಕೃತಕ ಬುದ್ಧಿಮತ್ತೆ  ಅಲ್ಗಾರಿದಮ್‌ಗಳನ್ನು  ದೃಶ್ಯ ನಿರೂಪಣೆಗಳಾಗಿ ಡಿಕೋಡ್ ಮಾಡಲು ಬಳಸಲಾಗುತ್ತದೆ.

 ಈ ಯಂತ್ರದ ಬಗ್ಗೆ ತಂಡ ಕೆಲವೊಂದು ಮಾಹಿತಿಗಳನ್ನು ನೀಡಿದೆ: ನೀವು ನಿದ್ರಿಸುವಾಗ ಅಥವಾ ಕೆಲವು ದೃಶ್ಯ ಸನ್ನಿವೇಶಗಳನ್ನು ಸರಳವಾಗಿ ಕಲ್ಪಿಸಿಕೊಂಡಾಗ, MRI ಸ್ಕ್ಯಾನರ್ ಮೆದುಳಿನ ದೃಷ್ಟಿಗೋಚರ ಕಾರ್ಟೆಕ್ಸ್‌ನಿಂದ ನೈಜ-ಸಮಯದ ಡೇಟಾವನ್ನು ಸೆರೆಹಿಡಿಯುತ್ತದೆ. ಈ ಸಂಕೇತಗಳು ನಿದ್ರೆ ಅಥವಾ ಕಲ್ಪನೆಯ ಸಮಯದಲ್ಲಿ ನಿಮ್ಮ ಮನಸ್ಸು ನಿರ್ಮಿಸುತ್ತಿರುವ ಚಿತ್ರಗಳನ್ನು ಪ್ರತಿನಿಧಿಸುತ್ತವೆ. MRI ಡೇಟಾವನ್ನು ಈ ಮಾದರಿಗಳನ್ನು ಗುರುತಿಸಲು ಮತ್ತು ಅರ್ಥೈಸಲು ತರಬೇತಿ ಪಡೆದ AI ಮಾದರಿಗೆ ನೀಡಲಾಗುತ್ತದೆ. ಕಾಲ ಕ್ರಮೇಣ, AI ಮೆದುಳಿನ ಚಟುವಟಿಕೆಯನ್ನು ನಿರ್ದಿಷ್ಟ ಚಿತ್ರಗಳಿಗೆ ಹೊಂದಿಸುತ್ತದೆ.   ಒಮ್ಮೆ AI ನರಗಳ ಡೇಟಾವನ್ನು ಡಿಕೋಡ್ ಮಾಡಿದರೆ, ಅದು ಕನಸಿನ ದೃಷ್ಟಿಗೋಚರ ಅಂದಾಜನ್ನು ಉತ್ಪಾದಿಸುತ್ತದೆ. ಇದರಿಂದಾಗಿ ನಿಮ್ಮ ಕನಸಿನ ಸ್ಪಷ್ಟ ಚಿತ್ರಣ ದೊರೆಯಲಿದೆ.  ಸದ್ಯ ತಂತ್ರಜ್ಞಾನವು ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ, ಮೆದುಳು ಹೇಗೆ ಕನಸುಗಳನ್ನು ನಿರ್ಮಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಗಮನಾರ್ಹ ಪ್ರಗತಿಯಾಗಿದೆ. ಇದು ಸಂಪೂರ್ಣ ಯಶಸ್ವಿಯಾಗಲಿದೆ ಎಂದಿದ್ದಾರೆ ಸಂಶೋಧಕರು! 

ಗುದದ್ವಾರದಿಂದ ಹೀಗೆ ಉಸಿರಾಡ್ಬೋದಂತೆ ನೋಡಿ! ನೊಬೆಲ್​ ಪ್ರಶಸ್ತಿ ಗೆದ್ದ ವಿಜ್ಞಾನಿಗಳ ವಿಡಿಯೋ ವೈರಲ್​

click me!