Netflix New Price: ಮನೋರಂಜನೆ ನಿಮ್ಮ ಕೈಯಲ್ಲಿ, ಬರೀ ₹149!

By Suvarna NewsFirst Published Dec 14, 2021, 3:40 PM IST
Highlights

*Netflix ಬಳಕೆದಾರರಿಗೆ ಗುಡ್‌ ನ್ಯೂಸ್‌
*ಚಂದಾದಾರಿಕೆ ಯೋಜನೆಗಳ ಬೆಲೆಗಳ ಕಡಿತ
*ಮೊಬೈಲ್‌ ಪ್ಲ್ಯಾನ್‌ ಈಗ ಕೇವಲ ₹149ಗೆ ಲಭ್ಯ
*ಇಲ್ಲಿದೆ ಉಳಿದ ಪ್ಲ್ಯಾನ್‌ಗಳ ಡಿಟೇಲ್ಸ್!

ನವದೆಹಲಿ (ಡಿ. 14): ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ (OTT Platform Netflix) ತನ್ನ ಚಂದಾದಾರಿಕೆ ದರದಗಳನ್ನು ಪರಿಕಷ್ಕರಿಸಿದೆ. ನೆಟ್‌ಫ್ಲಿಕ್ಸ್  ಹೊಸ ಪ್ಯಾಕ್‌ಗಳು ಅಗ್ಗವಾಗಿದ್ದು ಭಾರತೀಯ ಓಟಿಟಿ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಸ್ಟ್ರೀಮಿಂಗ್ ದೈತ್ಯ ಈಗ ದೇಶದಲ್ಲಿ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸುವ ಪ್ರಯತ್ನದಲ್ಲಿ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಕಡಿತಗೊಳಿಸಿದೆ. 2016 ರಲ್ಲಿ ತನ್ನ ಸೇವೆಗಳನ್ನು ನೀಡಲು ಪ್ರಾರಂಭಿಸಿದ ನಂತರ ನೆಟ್‌ಫ್ಲಿಕ್ಸ್ ತನ್ನ ಚಂದಾದಾರಿಕೆ ಯೋಜನೆಗಳ (Subscription Plans) ಬೆಲೆಗಳನ್ನು ಮೊದಲ ಬಾರಿಗೆ ಕಡಿಮೆ ಮಾಡಿದೆ. 

ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ದರಗಳನ್ನು ಹೆಚ್ಚಿಸಿದ ಸಮಯದಲ್ಲಿ, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಯೋಜನೆಗಳ ಕಡಿಮೆ ಬೆಲೆಯು ಬಳಕೆದಾರರ ಜೇಬಿಗೆ ಕತ್ತರಿ ಬೀಳುವುದನ್ನು ಕೊಂಚ ತಪ್ಪಿಸಲಿದೆ. ಅಮೆಜಾನ್ ಪ್ರೈಮ್ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಭಾರತದಲ್ಲಿ ಅಮೆಝಾನ್‌ ಪ್ರೈಮ್‌  ಸದಸ್ಯತ್ವದ ಹೊಸ ಬೆಲೆಯಲ್ಲಿ  ₹500 ಏರಿಕೆಯಾಗಿದೆ. ನೆಟ್‌ಫ್ಲಿಕ್ಸ್ ಹೊಸ ಪ್ಲ್ಯಾನ್ಸ ಈ ರೀತಿ ಇವೆ

 

Aap se convince ho gaye ya hum aur bole? 👀 are here, which means you can now watch Netflix on any device at ₹199 and on your mobile at ₹149! pic.twitter.com/zdHrPlTJhi

— Netflix India (@NetflixIndia)

 

Mobile Plan: ₹149

ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್‌ನ ಬೆಲೆಯನ್ನು ರೂ 199 ರಿಂದ ರೂ 149 ಕ್ಕೆ ಇಳಿಸಲಾಗಿದೆ. ಮೊಬೈಲ್ ಪ್ಲಾನ್ ಬಳಕೆದಾರರಿಗೆ ಫೋನ್‌ ಅಥವಾ ಟ್ಯಾಬ್ಲೆಟ್‌ಗಳಲ್ಲಿ 480p ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. 

Basic Plan: ₹199

ಬೇಸಿಕ್‌ ಪ್ಲ್ಯಾನ್ ಬಳಕೆದಾರರಿಗೆ  ಒಂದೇ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಅಥವಾ ಟೆಲಿವಿಷನ್‌ನಲ್ಲಿ‌ ವಿಡಿಯೋ ಸ್ಟ್ರೀಮ್‌ ಮಾಡಲು ಅನುಮತಿಸುತ್ತದೆ. ಈ ಬೇಸಿಕ್‌ ಪ್ಲ್ಯಾನ್ ಬೆಲೆ ಈಗ 199 ರೂ. ಈ ಯೋಜನೆಯು ಮೊದಲು 499 ರೂ ಗೆ ಲಭ್ಯವಿತ್ತು. 

Standard Plan: ₹499

ಬಳಕೆದಾರರಿಗೆ ಹೈ ಡೆಫಿನಿಷನ್‌ನಲ್ಲಿ ವೀಡಿಯೊಗಳನ್ನು (HD Video) ಸ್ಟ್ರೀಮ್ ಮಾಡಲು ಅನುಮತಿಸುವ ಸ್ಟ್ಯಾಂಡರ್ಡ್ ಚಂದಾದಾರಿಕೆ ಯೋಜನೆಯು ಈಗ ಭಾರತದಲ್ಲಿ 499 ರೂ. ಸಿಗಲಿದೆ ಈ ಯೋಜನೆಯು ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ವಿಭಿನ್ನ ಸಾಧನಗಳಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಸ್ಟ್ಯಾಂಡರ್ಡ್ ಪ್ಲಾನ್ ಈ ಹಿಂದೆ ರೂ 649 ಆಗಿತ್ತು. 

Premium Plan: ₹649

ರೂ 799 ಗೆ ಲಭ್ಯವಿದ್ದ ಪ್ರೀಮಿಯಂ ಪ್ಲಾನ್‌  ಈಗ ಬಳಕೆದಾರರಿಗೆ ಕೇವಲ ರೂ 649 ಸಿಗಲಿದೆ. ಪ್ರೀಮಿಯಂ ಯೋಜನೆಯು ಬಳಕೆದಾರರಿಗೆ 4K+HDR ನಲ್ಲಿ ವೀಡಿಯೊಗಳನ್ನು ಬ್ರೌಸ್ ಮಾಡಲು ಅನುಮತಿಸುತ್ತದೆ. ಪ್ರೀಮಿಯಂ ಯೋಜನೆಯು  ಒಂದೇ ಸಮಯದಲ್ಲಿ ನಾಲ್ಕು ವಿಭಿನ್ನ ಸಾಧನಗಳಲ್ಲಿ ವಿಡಿಯೋ ವೀಕ್ಷಿಸಲು ಬಳಕೆದಾರರಿಗೆ ಅನುಮತಿಸುತ್ತದೆ.

ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸ್ವಯಂ-ಅಪ್‌ಗ್ರೇಡ್

MoneyControl ಪ್ರಕಾರ, Netflix ಸಹ ಡಿಸೆಂಬರ್ 14 ರಿಂದ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸ್ವಯಂ-ಅಪ್‌ಗ್ರೇಡ್ ವೈಶಿಷ್ಟ್ಯವನ್ನು ಹೊರತರುತ್ತಿದೆ. ನೆಟ್‌ಫ್ಲಿಕ್ಸ್ ಇಂಡಿಯಾದ ವೈಸ್‌ ಪ್ರೆಸಿಡೆಂಟ್ (ಕಂಟೆಂಟ್) ಮೋನಿಕಾ ಶೆರ್ಗಿಲ್ (Monika Shergill), "ಅಸ್ತಿತ್ವದಲ್ಲಿರುವ ಬಳಕೆದಾರರು ತಮ್ಮ ಯೋಜನೆಯನ್ನು ಸ್ವಯಂ-ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದಾಹರಣೆಗೆ, ನೀವು ಬೇಸಿಕ್‌ ಯೋಜನೆಯಲ್ಲಿ ಸಕ್ರಿಯರಾಗಿದ್ದರೆ, ನೀವು ಅಪ್‌ಗ್ರೇಡ್ ಅನ್ನು ನಿರಾಕರಿಸಬಹುದು ಮತ್ತು ರಿಯಾಯಿತಿ ದರದಲ್ಲಿ ಹೊಸ ಯೋಜನೆಯನ್ನು ಪಡೆಯಬಹುದು. ನೆಟ್‌ಫ್ಲಿಕ್ಸ್ ಹಳೆಯ ಮತ್ತು ಹೊಸ ದರಗಳು ಈ ರೀತಿ ಇವೆ

ಅಂತಿಮವಾಗಿ ಅದರ ಕಡಿಮೆ ಬೆಲೆಗಳೊಂದಿಗೆ ಹೆಚ್ಚಿನ ಚಂದಾದಾರರನ್ನು ಆಕರ್ಷಿಸಲು ನೆಟ್‌ಫ್ಲಿಕ್ಸ್  ಸಿದ್ಧವಾಗಿದೆ. ಕುತೂಹಲಕಾರಿಯಾಗಿ, ಅಮೆಜಾನ್ ಪ್ರೈಮ್ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದೆ. ಇದರಿಂದ ಅಮೆಜಾನ್‌ ಬಳಕೆದಾರರು ನೆಟ್‌ಫ್ಲಿಕ್ಸನತ್ತ ಮುಖ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ:

1) Amazon Prime Membership: ದುಬಾರಿಯಾಗಲಿದೆ ಅಮೆಝಾನ್ ಪ್ರೈಮ್‌ : 999‌ ಆಫರ್‌ಗೆ ಇಂದು ಕೊನೆಯ ದಿನ!

2) Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

3) Tesla CEO Elon Musk ಪ್ರತಿಷ್ಠಿತ ಟೈಮ್‌ ಮ್ಯಾಗಝೀನ್ ವರ್ಷದ ವ್ಯಕ್ತಿ!

click me!