ಇಸ್ರೋದ ವಿಕ್ರಮ್ ಲ್ಯಾಂಡರ್ ಪತ್ತೆಗಾಗಿ ಶ್ರಮಿಸುತ್ತಿರುವ ನಾಸಾ| ಚಂದ್ರನ ದಕ್ಷಿಣ ಧ್ರುವ ಶೋಧಿಸಲಿರುವ ನಾಸಾದ ಲುನಾರ್ ರಿಕನ್ನಾಯಸೆನ್ಸ್ ಆರ್ಬಿಟರ್| ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳ ಗುರುತಿಸುವ ಸಾಧ್ಯತೆ| ಈ ಬಾರಿ ವಿಕ್ರಮ್ ಲ್ಯಾಂಡರ್ ಸಿಗುವ ಭರವಸೆ ವ್ಯಕ್ತಪಡಿಸಿದ ನಾಸಾ| ವಿಕ್ರಮ್ ಲ್ಯಾಂಡರ್ ಪತ್ತೆಗೆ ಇಸ್ರೋದೊಂದಿಗೆ ಕೈಜೋಡಿಸಿದ ನಾಸಾ|
ವಾಷಿಂಗ್ಟನ್(ಅ.15): ಚಂದ್ರನ ದಕ್ಷಿಣ ಧ್ರುವದಲ್ಲಿ ಬಿದ್ದಿರುವ ಇಸ್ರೋದ ವಿಕ್ರಮ್ ಲ್ಯಾಂಡರ್‌ನ್ನು ಶತಾಯಗತಾಯ ಹುಡುಕಿ ಕೊಡುವುದಾಗಿ ನಾಸಾ ವಾಗ್ದಾನ ಮಾಡಿದೆ. ಅದರಂತೆ ಇಂದು ನಾಸಾದ ಲುನಾರ್ ರಿಕನ್ನಾಯಸೆನ್ಸ್ ಆರ್ಬಿಟರ್(LRO) ವಿಕ್ರಮ್ ಲ್ಯಾಂಡರ್ ಹುಡುಕಾಟ ನಡೆಸಲಿದೆ.
ಚಂದ್ರನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ LRO, ಇಂದು ದಕ್ಷಿಣ ಧ್ರುವದ ಮೇಲೆ ಹಾದು ಹೋಗಲಿದ್ದು, ಈ ವೇಳೆ ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳವನ್ನು ಅದು ಗುರುತಿಸುವ ಸಾಧ್ಯತೆ ದಟ್ಟವಾಗಿದೆ.
undefined
ಕಳೆದ ಸೆ.17ರಂದು ಇದೇ ಪ್ರದೇಶದ ಮೇಲೆ ಹಾದು ಹೋಗಿದ್ದ LRO, ಇದೀಗ ಮತ್ತೆ ದಕ್ಷಿಣ ಧ್ರುವವನ್ನು ಪ್ರದಕ್ಷಿಣೆ ಹಾಕಲಿದೆ. ಈ ವೇಳೆ ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳ ಗುರುತಿಸುವ ಸಾಧ್ಯತೆ ದಟ್ಟವಾಗಿದೆ ಎಂದು ನಾಸಾ ಭರವಸೆ ವ್ಯಕ್ತಪಡಿಸಿದೆ.
ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಪತ್ತೆಗೆ ನಾಸಾ ಕೈಜೋಡಿಸಿದ್ದು, ಲ್ಯಾಂಡರ್ ಬಿದ್ದಿರುವ ಸ್ಥಳವನ್ನು ನಿರಂತರವಾಗಿ ಶೋಧಿಸುತ್ತಲೇ ಇದೆ. ಇದೀಗ ಮತ್ತೆ LRO ಚಂದ್ರನ ದಕ್ಷಿಣ ಧ್ರುವವನ್ನು ಸುತ್ತಲಿದ್ದು, ಲ್ಯಾಂಡರ್ ಸಿಗುವ ವಿಶ್ವಾಸವಿದೆ.
ಕಳೆದ ಬಾರಿ ಈ ಭಾಗದಲ್ಲಿ ಕತ್ತಲ ಆವರಿಸಿದ್ದು, ಚಂದ್ರನ ಮೇಲ್ಮೈ ದೂಳು ಸುತ್ತಲು ಆವರಿಸಿದ ಪರಿಣಾಮ ಲ್ಯಾಂಡರ್ ಪತ್ತೆ ಸಾಧ್ಯವಾಗಿರಲಿಲ್ಲ. ಇದೀಗ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕು ಹರಡಿದ್ದು, ಸ್ವಚ್ಛ ಪರಿಸರದಲ್ಲಿ ಲ್ಯಾಂಡರ್ ಪತ್ತೆಯಾಗುವ ಸಾಧ್ಯತೆ ದಟ್ಟವಾಗಿದೆ.