ಇದು ತೀರ ಖಾಸಾ: ನಮ್ಮ ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ ನಾಸಾ!

By Web Desk  |  First Published Sep 12, 2019, 1:33 PM IST

ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ ನಾಸಾ| ವಿಕ್ರಮ್ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧನೆಗೆ ನಾಸಾ ಯತ್ನ| ಜೆಟ್ ಪ್ರೊಪಲ್ಷನ್ ಲ್ಯಾಬರ್ಟರಿ ಮೂಲಕ ವಿಕ್ರಮ್ ಲ್ಯಾಂಡರ್‌ಗೆ ಸಂದೇಶ ರವಾನೆ| ವಿಕ್ರಮ್ ಲ್ಯಾಂಡರ್‌ಗೆ ಹಲೋ ಸಂದೇಶ ಕಳುಹಿಸಿದ ನಾಸಾದ ಡೀಪ್ ಸ್ಪೇಸ್ ಆಂಟೆನಾಗಳು|


ವಾಷಿಂಗ್ಟನ್(ಸೆ.12): ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್‌ ಜೊತೆ ಮರು ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ.

"

Tap to resize

Latest Videos

undefined

ಈ ಮಧ್ಯೆ ನಾಸಾದ ಡೀಪ್-ಸ್ಪೇಸ್ ಆಂಟೆನಾಗಳು ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ್ದು, ಸಂಪರ್ಕ ಸಾಧನೆಗೆ ನಾಸಾ ಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿದೆ.

ಹೌದು, ವಿಕ್ರಮ್ ಲ್ಯಾಂಡರ್ ಮರು ಸಂಪರ್ಕಕ್ಕೆ ಇದೀಗ ನಾಸಾ ಕೈಜೋಡಿಸಿದ್ದು ,ತನ್ನ ಡೀಪ್-ಸ್ಪೇಸ್ ಆಂಟೆನಾಗಳಿಂದ ನೌಕೆಗೆ ಸಂದೇಶ ರವಾನಿಸಿದೆ. ಜೆಟ್ ಪ್ರೊಪಲ್ಷನ್ ಲ್ಯಾಬರ್ಟರಿಮೂಲಕ ವಿಕ್ರಮ್ ಲ್ಯಾಂಡರ್‌ಗೆ ಸಂದೇಶ ಕಳುಹಿಸಲಾಗಿದ್ದು, ಸಿಗ್ನಲ್ ಸಿಗುವ ನಿರೀಕ್ಷೆಯಲ್ಲಿರುವುದಾಗಿ ನಾಸಾ ಭರವಸೆ ವ್ಯಕ್ತಪಡಿಸಿದೆ.

ಸೆ.20-21ರ ಬಳಿಕ ವಿಕ್ರಮ್ ಲ್ಯಾಂಡರ್ ಸೋಲಾರ್ ಪೆನೆಲ್'ಗಳು ಕಾರ್ಯ ಸ್ಥಗಿತಗೊಳಿಸಲಿದ್ದು, ಇದರೊಳಗಾಗಿ ನೌಕೆಯೊಂದಿಗೆ ಸಂಪರ್ಕ ಸಾಧನೆಗೆ ಸತತ ಪ್ರಯತ್ನ ಮುಂದುವರೆದಿದೆ.

click me!