ಪ್ಲುಟೋ 'ಗ್ರಹ'ಚಾರ ಬದಲು?: ಅದೊಂದು ಗ್ರಹ ಎಂದ ನಾಸಾ ಮುಖ್ಯಸ್ಥ!

By nikhil vk  |  First Published Nov 6, 2019, 5:24 PM IST

ಪ್ಲುಟೋವನ್ನು ಗ್ರಹ ಅಂತಿದ್ದಾರೆ ನಾಸಾ ಮುಖ್ಯಸ್ಥ| ಪ್ಲುಟೋವನ್ನು ಗ್ರಹ ಎಂದು ಕರೆದ ಜಿಮ್ ಬ್ರಿಡ್‌ಸ್ಟೇನ್| ಪ್ಲುಟೋ ರಚನೆಯೇ ಅತ್ಯಂತ ಕ್ಷಿಷ್ಟಕರವಾಗಿದೆ ಎಂದ ಜಿಮ್ ಬ್ರಿಡ್‌ಸ್ಟೇನ್| 'ಗ್ರಹದ ಮೇಲ್ಮೈಯಲ್ಲಿ ಜೈವಿಕ ಅಂಶಗಳನ್ನು ನ್ಯೂ ಹೊರೈಜನ್ ನೌಕೆ ಪತ್ತೆ ಹಚ್ಚಿದೆ'| ವಿಧ ಸ್ತರದ ವಾತಾವರಣ ಕೂಡ ಪ್ಲುಟೋದಲ್ಲಿ ಪತ್ತೆಯಾಗಿದೆ ಎಂದ ನಾಸಾ ಮುಖ್ಯಸ್ಥ| ಪ್ಲುಟೋವನ್ನು ಪರಿಪೂರ್ಣ ಗ್ರಹ ಎಂದು ಕರೆಯಲು ಅಡ್ಡಿಯಿಲ್ಲ ಎಂದ ಜಿಮ್ ಬ್ರಿಡ್‌ಸ್ಟೇನ್|


ವಾಷಿಂಗ್ಟನ್(ನ.06): ಪ್ಲುಟೋವನ್ನು ಸೌರಮಂಡಲದ ಕುಟುಂಬದಿಂದ ಹೊರಗಿಟ್ಟು ದಶಕಗಳೇ ಉರುಳಿವೆ. ನೀನು ಗ್ರಹಕಾಯ ಅಲ್ಲ, ಸೌರಮಂಡಲದ ಸಂಸಾರದಲ್ಲಿ ನೀನಿರಬೇಡ ಎಂದು ಪ್ಲುಟೋವನ್ನು ಹೊರಗಿಡಲಾಗಿದೆ.

ಈ ಕ್ಷುದ್ರ ಗ್ರಹದಲ್ಲಿ ಸಮುದ್ರವಿದೆಯಂತೆ

Tap to resize

Latest Videos

undefined

ಆದರೆ ನಾಸಾ ಮುಖ್ಯಸ್ಥ ಜಿಮ್ ಬ್ರಿಡ್‌ಸ್ಟೇನ್ ಪ್ಲುಟೋವನ್ನು ಗ್ರಹ ಎಂದು ಕರೆದು ಮತ್ತೆ ಚರ್ಚೆಗೆ ನಾಂದಿ ಹಾಡಿದ್ದಾರೆ. ಪ್ಲುಟೋ ರಚನೆಯೇ ಅತ್ಯಂತ ಕ್ಷಿಷ್ಟಕರವಾಗಿದ್ದು, ಇದನ್ನು ಗ್ರಹ ಅಲ್ಲ ಎಂದು ಪರಿಗಣಿಸದಿರಲು ಸಾಧ್ಯವಿಲ್ಲ ಎಂದು ಜಿಮ್ ಪ್ರತಿಪಾದಿಸಿದ್ದಾರೆ.

ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

ಪ್ಲುಟೋ ಆಂತರ್ಯದಲ್ಲಿ ಸಾಗರವಿದ್ದು, ಗ್ರಹದ ಮೇಲ್ಮೈಯಲ್ಲಿ ಜೈವಿಕ ಅಂಶಗಳನ್ನು ನ್ಯೂ ಹೊರೈಜನ್ ನೌಕೆ ಪತ್ತೆ ಹಚ್ಚಿದೆ. ಅಲ್ಲದೇ ವಿವಿಧ ಸ್ತರದ ವಾತಾವರಣ ಕೂಡ ಪ್ಲುಟೋದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಪರಿಪೂರ್ಣ ಗ್ರಹ ಎಂದು ಕರೆಯಲು ಅಡ್ಡಿಯಿಲ್ಲ ಎಂದು ನಾಸಾ ಮುಖ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.

My favorite soundbyte of the day that probably won't make it to TV. It came from NASA Administrator Jim Bridenstine. As a Pluto Supporter, I really appreciated this. pic.twitter.com/NdfQWW5PSZ

— Cory Reppenhagen (@CReppWx)

ಜಾಗತಿಕ ಸಂಸ್ಥೆಯಿಂದ ಭಾರತೀಯ ವಿಜ್ಞಾನಿಗೆ ‘ಬಾಹ್ಯಾಕಾಶ’ದಲ್ಲಿ ಗೌರವ!

2006ರಲ್ಲಿ ಪ್ಲುಟೋ ಗಾತ್ರದಷ್ಟೇ ಇರುವ ಇತರ ಗ್ರಹಕಾಯಗಳನ್ನು ಪತ್ತೆ ಹಚ್ಚಿದ ಪರಿಣಾಮ, ಆ ಗ್ರಹವನ್ನು ಸೌರಮಂಡಲದ ಗಗ್ರಹಳ ಪಟ್ಟಿಯಿಂದ ಹೊರಗಿಡಲಾಯಿತು. ಈ ಹಿನ್ನೆಲೆಯಲ್ಲಿ ಸೌರಮಂಡಲದ ಗ್ರಹಗಳ ಸಂಖ್ಯೆ 9 ರಿಂದ 8ಕ್ಕೆ ಇಳಿಯಿತು.

click me!