1G, 2G, 3G, 4G ಆಯ್ತು ಈಗ 5G ಯುಗ. ಜಾಗತಿಕ ರಂಗದಲ್ಲಿ ಹೊಸ ಕ್ರಾಂತಿಗೆ 5G ಇಂಟರ್ನೆಟ್ ಸೇವೆ ಮುನ್ನುಡಿ ಬರೆಯಲಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಇನ್ಮುಂದೆ 5G ಫೋನ್‌ಗಳದ್ದೇ ಭರಾಟೆ ಕಂಡುಬರಲಿದೆ. ಮೊಬೈಲ್ ಲೋಕದ ದಿಗ್ಗಜ Xiaomi ತನ್ನ 5G ಫೋನ್‌ನ ಡೆಮೋ ಕೂಡಾ ಕೊಟ್ಟಿದೆ.
ಭಾರತದಲ್ಲೀಗ 5G ಫೋನ್‌ಗಳದ್ದೇ ಚರ್ಚೆ. 2020ರಲ್ಲಿ ಭಾರತದಲ್ಲಿ 5G ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಹಳೆಯ 3G/4G ಫೋನ್ ಗಳು 5G ಸೇವೆಯನ್ನು ಸಪೋರ್ಟ್ ಮಾಡಲ್ಲ.
ಜನಪ್ರಿಯ ಮೊಬೈಲ್ ತಯಾರಕ, Xiaomi ಈಗಾಗಲೇ ಬೀಜಿಂಗ್‌ನಲ್ಲಿ 5G ಫೋನ್‌ನ ಡೆಮೋ ನೀಡಿದೆ. Xiaomi ಬಿಡುಗಡೆ ಮಾಡಲಿರುವ ನೂತನ Mi Mix 3 ಮೊಬೈಲ್ ಫೋನ್, ಬಹಳ ಸ್ಪೀಡ್ ಇರುವ 5G ಇಂಟರ್ನೆಟ್ ಸೇವೆ ಬಳಸಲು ಪೂರಕವಾಗಿದೆ.
undefined
Qualcomm Snapdragon 855 ಪ್ರೊಸೆಸರ್ ಹೊಂದಿರುವ ಈ ಫೋನ್, ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರಲಿದೆ. X50 5G ಮಾಡೆಮನ್ನು ಈ ಫೋನ್ ಹೊಂದಿರಲಿದ್ದು, 2Gbps ಡೌನ್‌ಲೋಡ್ ಸ್ಪೀಡ್ ಹೊಂದಿದೆ. Mi Mix 3 ಫೋನ್‌ನ 5G ಆವೃತ್ತಿಯು ಯುರೋಪ್ ದೇಶಗಳಲ್ಲಿ ಮುಂದಿನ ವರ್ಷಾರಂಭದಲ್ಲೇ ಲಭ್ಯವಾಗಲಿದೆ ಎಂದು ‘ದಿ ವರ್ಜ್’ ವರದಿ ಮಾಡಿದೆ.
ಇದನ್ನೂ ಓದಿ: 5G, ಬರೋಬ್ಬರಿ 6 ಕ್ಯಾಮೆರಾ! ಮಾರುಕಟ್ಟೆಗೆ ಲಗ್ಗೆಯಿಡಲಿರುವ ಯಾವುದೀ ಮೊಬೈಲ್?
ಇದನ್ನೂ ಓದಿ: 5G ಇಂಟರ್ನೆಟ್ ಹೇಗಿರುತ್ತೆ?
1981ರಲ್ಲಿ 1G ಬಂದ ಒಂದು ದಶಕದ ನಂತರ ಅಂದರೆ 1992ರಲ್ಲಿ 2G ಸೇವೆ ಆರಂಭವಾಯಿತು. 2001ರಲ್ಲಿ 3G ಸೇವೆ ಪ್ರಾರಂಭಿಸಲಾಯಿತು. ಮೊಬೈಲ್ ದೂರ ಸಂಪರ್ಕ ತಂತ್ರಜ್ಞಾನದ ವಿಷಯದಲ್ಲಿ ಭಾರತ ತುಂಬಾ ಹಿಂದುಳಿದಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ 5ಜಿ ಸೇವೆ ನೀಡುವುದಾಗಿ ಭಾರ್ತಿ ಏರ್‌ಟೆಲ್ ಈಗಾಗಲೇ ಘೋಷಿಸಿದೆ.
ಇದನ್ನೂ ಓದಿ:ರಿಲಯನ್ಸ್ ಜಿಯೋದಿಂದ 5ಜಿ ಸೇವೆ
5ನೇ ಜನರೇಷನ್ ಮೊಬೈಲ್ ನೆಟ್‌ವರ್ಕ್ ಅಥವಾ 5ನೇ ಜನರೇಷನ್ ವೈರ್‌ಲೆಸ್. ಸರಳವಾಗಿ ಹೇಳುವುದಾದರೆ 5G, ಈಗಿನ 4G LTEಗಿಂತ ಸಾವಿರಪಟ್ಟು ವೇಗ ಹೊಂದಿರಲಿದೆ. ಈಗ 5G ತಂತ್ರಜ್ಞಾನದಡಿ 2 GBಯ ಒಂದು ಸಿನಿಮಾ ಡೌನ್’ಲೋಡ್ ಮಾಡಲು ಬರೋಬ್ಬರಿ ಒಂದು ಗಂಟೆ ಬೇಕು. ಆದರೆ, 5ಜಿ ತಂತ್ರಜ್ಞಾನದಡಿ ಒಂದೇ ಸೆಕೆಂಡ್ ಸಾಕು.