ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

By Web Desk  |  First Published Dec 9, 2018, 12:27 PM IST

ಆ್ಯಂಡ್ರಾಯಿಡ್ ತಂತ್ರಜ್ಞಾನ ಮೊಬೈಲ್ ಲೋಕದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿದೆ. ಆದರೆ, ಅವುಗಳೂ ವೈರಸ್ ಹಾವಳಿಯಿಂದ ಮುಕ್ತವಲ್ಲ. ವೈರಸ್ ಇದೆಯೆನ್ನಲಾಗಿರುವ  22 ಆ್ಯಪ್ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ  ತೆಗೆದು ಹಾಕಿದೆ.


ಆ್ಯಂಡ್ರಾಯಿಡ್ ಪೋನ್ ಬಳಕೆದಾರರು ಬೆಚ್ಚಿಬೀಳುವಂತಹ ಸುದ್ದಿ ಇದು. ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 22 ಆ್ಯಪ್‌ಗಳನ್ನು ತೆಗೆದುಹಾಕಿದೆ.  22 ಆ್ಯಪ್‌ಗಳಲ್ಲಿ ವೈರಸ್ ಹಾವಳಿ ಇದೆ ಎಂದು ಸೋಫಸ್ ಎಂಬ ಸೈಬರ್ ಸೆಕ್ಯುರಿಟಿ ಕಂಪನಿ ಬಹಿರಂಗಪಡಿಸಿದ ಬೆನ್ನಲ್ಲೇ ಗೂಗಲ್ ಈ ಕ್ರಮ ಕೈಗೊಂಡಿದೆ. 2 ಮಿಲಿಯನ್ ಕ್ಕಿಂತಲೂ ಹೆಚ್ಚು ಬಳಕೆದಾರರು ಆ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ.

ಆ ಆ್ಯಪ್‌ಗಳಲ್ಲಿ ವೈರಸ್/ಮೇಲ್‌ವೇರ್‌ಗಳಿಗೆ, ಬಳಕೆದಾರರನ್ನು ವಂಚಿಸುವ ಮೂಲಕ ಅವರಿಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯವಿದೆ. 

Tap to resize

Latest Videos

ಈ ಆ್ಯಪ್‌ಗಳು ಬಳಕೆದಾರರ ಫೋನ್‌ ಬ್ಯಾಟರಿಯನ್ನು ಅನಗತ್ಯವಾಗಿ ಬಳಸುವುದಲ್ಲದೇ, ಬ್ಯಾಗ್ರೌಂಡ್‌ನಲ್ಲಿ ತಮ್ಮ ಸರ್ವರ್ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುತ್ತಿರುತ್ತವೆ. ಆ ಆ್ಯಪ್‌ಗಳ ಸರ್ವರ್‌ಗಳು ಕೂಡಾ ವಿಶ್ವಾಸಾರ್ಹವಲ್ಲವೆಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ವಾಟ್ಸಪ್‌ನಲ್ಲಿ ಈ ಫೋಟೋ ಕಳುಹಿಸಿದ್ರೆ ಅಕೌಂಟ್ ಬ್ಲಾಕ್!

ನೇರವಾಗಿ ಹೇಳುವುದಾದರೆ ಆ 22 ಆ್ಯಪ್‌ಗಳು ಫೋನಿನಲ್ಲಿ ಇಲ್ಲದೇ ಇದ್ದರೇ ಒಳಿತು.  ಈ ಬಗ್ಗೆ ಸೋಫೊಸ್ ಗೂಗಲ್‌ಗೆ ವರದಿ ಮಾಡಿದ ಬೆನ್ನಲ್ಲೇ ಆ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಇಂತಹ ವಂಚಕ ಅಥವಾ ವೈರಸ್ ಇರುವ ಆ್ಯಪ್‌ಗಳನ್ನು ತೆಗೆದು ಹಾಕಲಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ಲೀನ್ ಮಾಸ್ಟರ್ ಎಂಬ ಜನಪ್ರಿಯ ಆ್ಯಪ್‌ನ್ನು ತೆಗೆದುಹಾಕಲಾಗಿತ್ತು.

ಆ 22 ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿವೆಯೇ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲಿದೆ ಪಟ್ಟಿ...

1.Sparkle FlashLight

2.Snake Attack

3. Math Solver

4. ShapeSorter

5. Tak A Trip

6. Magnifeye

7. Join Up

8. Zombie Killer

9. Space Rocket

10. Neon Pong

11. Just Flashlight

12. Table Soccer

13. Cliff Diver

14. Box Stack

15. Jelly Slice

16. AK Blackjack

17. Color Tiles

18. Animal Match

19. Roulette Mania

20. HexaFall

21. HexaBlocks

22. PairZap  
 

click me!