ಮಲಗಿದ್ದಾಗಲೂ ವಾಟ್ಸಪ್‌ನಿಂದ ಮೈಕ್ರೋಫೋನ್‌ ದುರ್ಬಳಕೆ: ಟ್ವೀಟರ್‌ ಸಿಬ್ಬಂದಿ ಫೋದ್‌ ದಬಿರಿ ಗಂಭೀರ ಆರೋಪ

By Anusha KbFirst Published May 11, 2023, 11:09 AM IST
Highlights

ರಾತ್ರಿ ನಾನು ಮಲಗಿದ್ದ ಹೊತ್ತಿನಲ್ಲೂ ವಾಟ್ಸಪ್‌ ನನ್ನ ಮೊಬೈಲ್‌ನ ಮೈಕ್ರೋಫೋನ್‌ ಅನ್ನು ತೆರೆಮರೆಯಲ್ಲೇ ಬಳಸುತ್ತಿದೆ ಎಂದು ಟ್ವೀಟರ್‌ ಸಂಸ್ಥೆಯ ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 


ನವದೆಹಲಿ: ರಾತ್ರಿ ನಾನು ಮಲಗಿದ್ದ ಹೊತ್ತಿನಲ್ಲೂ ವಾಟ್ಸಪ್‌ ನನ್ನ ಮೊಬೈಲ್‌ನ ಮೈಕ್ರೋಫೋನ್‌ ಅನ್ನು ತೆರೆಮರೆಯಲ್ಲೇ ಬಳಸುತ್ತಿದೆ ಎಂದು ಟ್ವೀಟರ್‌ ಸಂಸ್ಥೆಯ ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev chandrashekar), ಖಾಸಗಿತನ ಉಲ್ಲಂಘನೆಯ (Violetion of privecy) ಈ ಆರೋಪವನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ವಾಟ್ಸಪ್‌ (whatsapp) ಕೂಡಾ ಆರೋಪ ಮಾಡಿದ ವ್ಯಕ್ತಿ ಜೊತೆ ತಾನು ಸಂಪರ್ಕದಲ್ಲಿದ್ದು, ಸಮಸ್ಯೆ ಮೂಲವನ್ನು ಪತ್ತೆಹಚ್ಚುವ ಯತ್ನದಲ್ಲಿರುವುದಾಗಿ ಭರವಸೆ ನೀಡಿದೆ. ಅಮೆರಿಕದಲ್ಲಿ (US) ಟ್ವೀಟರ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಫೋದ್‌ ದಬಿರಿ (Fodh dabiri)ಶನಿವಾರ ಟ್ವೀಟ್‌ ಮಾಡಿದ್ದು ಅದರಲ್ಲಿ ‘ನಾನು ರಾತ್ರಿ ಮಲಗಿದ್ದ ಹೊತ್ತಿನಿಂದ ಬೆಳಗ್ಗೆ 6 ಗಂಟೆಗೆ ಏಳುವವರೆಗೂ ವಾಟ್ಸಪ್‌ ನನ್ನ ಮೈಕ್ರೋಫೋನ್‌ (Microphone) ಅನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಬಳಸಿಕೊಂಡಿದೆ. ಇಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್‌ 6.5 ಕೋಟಿ ವೀಕ್ಷಣೆ ಕಂಡಿದೆ. ಇಂಥ ಯತ್ನಗಳು ಭಾರತದಲ್ಲೂ ನಡೆದಿರಬಹುದು ಎಂದು ಕೆಲವರು ಶಂಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಾಜೀವ್‌ ಚಂದ್ರಶೇಖರ್‌, ‘ಇದು ಖಾಸಗಿತನದ ಉಲ್ಲಂಘನೆ. ಇದನ್ನು ಒಪ್ಪಲಾಗದು. ನಾವು ತಕ್ಷಣವೇ ಇದನ್ನು ಪರಿಶೀಲಿಸಲಿದ್ದೇವೆ ಮತ್ತು ಒಂದು ವೇಳೆ ಉಲ್ಲಂಘನೆಯಾಗಿದ್ದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಭರವಸೆ ನೀಡಿದ್ದಾರೆ.

ಅಪರಿಚಿತ ಅಂತಾರಾಷ್ಟ್ರೀಯ ಕರೆ ಹಾವಳಿ: ನಂಬರ್‌ ಬ್ಲಾಕ್‌ಗೆ ವಾಟ್ಸಾಪ್‌ ಸೂಚನೆ

ಕ್ರಮ- ವಾಟ್ಸಾಪ್‌:

ಮತ್ತೊಂದೆಡೆ ವಾಟ್ಸಪ್‌ ಸಂಸ್ಥೆ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪ ಮಾಡಿದ ವ್ಯಕ್ತಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಮೇಲ್ನೋಟಕ್ಕೆ ಇದು ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಬಗ್‌ ಇದ್ದಂತಿದೆ. ಈ ಕುರಿತು ನಾವು ಗೂಗಲ್‌ಗೆ ತನಿಖೆ ನಡೆಸಿ ಅದನ್ನು ಸರಿಪಡಿಸುವಂತೆ ಸೂಚಿಸಿದ್ದೇವೆ ಎಂದಿದೆ. ಅಲ್ಲದೆ ಬಳಕೆದಾರರಿಗೆ ಮೈಕ್ರೋಫೋನ್‌ ಮೇಲೆ ಪೂರ್ಣ ನಿಯಂತ್ರಣವಿದೆ ಎಂದು ಸ್ಪಷ್ಟಪಡಿಸಿದೆ.

ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಮತ್ತೊಂದು ಫೀಚರ್, ಮೆಸೇಜ್ ಎಡಿಟ್‌ಗೆ ಅವಕಾಶ!

 

click me!