ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಬಳಕೆದಾರರಿಗೆ ಪ್ರತಿ ದಿನ ಹೊಸ ಹೊಸ ಫೀಚರ್ಸ್ ನೀಡುತ್ತಿದೆ. ಇದೀಗ ಬಳಕೆದಾರರ ಬಹುಬೇಡಿಕೆಯ ಎಡಿಟ್ ಫೀಚರ್ ಪರಿಚಯಿಸಿದೆ. ಈ ಮೂಲಕ ಬಳಕೆದಾರರು ಕಳುಹಿಸಿದ ಮೆಸೇಜ್ ಎಡಿಟ್ ಮಾಡಲು ಸಾಧ್ಯವಿದೆ. ಈ ಫೀಚರ್ಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮೇ.09): ವ್ಯಾಟ್ಸ್ಆ್ಯಪ್ ಬಳಕೆದಾರರ ಬಹುಬೇಡಿಕೆ ಇದೀಗ ಈಡೇರಿದೆ. ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ. ವ್ಯಾಟ್ಸ್ಆ್ಯಪ್ ಮೆಸೇಜ್ ಇದೀಗ ಎಡಿಟ್ ಮಾಡಲು ಸಾಧ್ಯ. ಹೊಸ ಫೀಚರ್‌ನಲ್ಲಿ ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವ ಅವಕಾಶವನ್ನು ನೀಡಿದೆ. WABetaInfo ಪ್ರಕಾರ ನೂತನ ಫೀಚರ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಸದ್ಯ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ನೂತನ ಫೀಚರ್ ಲಭ್ಯವಾಗಲಿದೆ. ಮೆನು ಆಪ್ಶನ್ ಕ್ಲಿಕ್ ಮಾಡಿ ಎಡಿಟ್ ಮೆಸೇಜ್ ಕ್ಲಿಕ್ ಅಡಿಯಲ್ಲಿ ನೂತನ ಫೀಚರ್ ಲಭ್ಯವಿದೆ.
ಟೆಕ್ಸ್ಟ್ ಸಂದೇಶಗಳನ್ನು ಎಡಿಟ್ ಮಾಡುವ ಅವಕಾಶವನ್ನು ವ್ಯಾಟ್ಸ್ಆ್ಯಪ್ ನೀಡಿದೆ. ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಲು ಅವಕಾಶ ನೀಡಿದೆ. ಒಂದೇ ಮೆಸೇಜನ್ನು ಎಷ್ಟು ಬಾರಿ ಬೇಕಾದರು ಎಡಿಟ್ ಮಾಡಬಹುದು. ಆದರೆ ಸಂದೇಶಗಳ ಮೂಲ ಹಾಗೂ ಭದ್ರತಾ ದೃಷ್ಟಿಯಿಂದ ತಪ್ಪಾಗಿರುವ ಪದಗಳನ್ನು ಎಡಿಟ್ ಮಾಡಬಹುದು. ಸಂಪೂರ್ಣ ಸಂದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ.
undefined
ಚಾಟ್ ಲಾಕ್ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್, ಸಂದೇಶ ಕಾಣದಂತೆ ಪ್ರೈವೇಟ್ ಮಾಡಲು ಅವಕಾಶ!
ಬಳಕೆದಾರರು ಕಳುಹಿಸಿದ ಟೆಕ್ಸ್ಟ್ ಸಂದೇಶಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಎಡಿಟ್ ಆಯ್ಕೆ ನೀಡಲಾಗಿದೆ. ಎಡಿಟ್ ಮೂಲಕ ಪದಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ. ಆದರೆ ಒಂದು ಬಾರಿ ಕಳುಹಿಸಿದ ಸಂದೇಶದ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್ ಲಭ್ಯವಿದೆ. ವ್ಯಾಟ್ಸ್ಆ್ಯಪ್ ಇದೀಗ ತಂದಿರುವ ಎಡಿಟ್ ಫೀಚರ್ ಹಲವು ವರ್ಷಗಳ ಬೇಡಿಕೆಯಾಗಿತ್ತು. ಬಳಕೆದಾರರು ಸಂದೇಶಗಳನ್ನು ಎಡಿಟ್ ಮಾಡುವ ಫೀಚರ್ಸ್ ಬೇಕು ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಇತ್ತೀಚೆಗೆ ಟ್ವಿಟರ್ ಕೂಡ ಎಡಿಟ್ ಆಯ್ಕೆ ನೀಡಿದೆ. ಇದೀಗ ವ್ಯಾಟ್ಸ್ಆ್ಯಪ್ ಸಂದೇಶಗಳಿಗೆ ಎಡಿಟ್ ಆಪ್ಶನ್ ನೀಡಿದೆ.
ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಇದೀಗ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ. ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಚಾಟ್ ಲಾಕ್ ಫೀಚರ್ ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಚಾಟ್ ಮೆಸೇಜ್‌ಗಳನ್ನು ಲಾಕ್ ಮಾಡುವ ಅವಕಾಶವಿದೆ. ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿರುವ ಮೆನುವಿನಲ್ಲಿ ಚಾಟ್ ಲಾಕ್ ಫೀಚರ್ ನೀಡಲಾಗಿದೆ. ಯಾವ ಚಾಟ್ ಲಾಕ್ ಆಗಬೇಕು ಅನ್ನೋದನ್ನು ಆಯ್ಕೆ ಮಾಡಿಕೊಂಡು ಲಾಕ್ ಚಾಟ್ ಫೀಚರ್ ಕ್ಲಿಕ್ ಮಾಡಿದರೆ ಸಂಪೂರ್ಣ ಚಾಟ್ ಲಾಕ್ ಆಗಿದೆ. ಇದು ಇತರರಿಗೆ ಕಾಣದಂತೆ ಪ್ರೈವೇಟ್ ಆಗಲಿದೆ. ಹೀಗೆ ಲಾಕ್ ಮಾಡಿದ ಚಾಟ್‌ಗಳು ಪ್ರತ್ಯೇಕ ಚಾಟ್ ಲಾಕ್ ಫೋಲ್ಡರ್‌ನಲ್ಲಿ ಲಭ್ಯವಾಗಲಿದೆ. ಫೋನ್ ಯಾರೇ ಬಳಕೆ ಮಾಡಿದರೂ ಲಾಕ್ ಮಾಡಿದ ಚಾಟ್‌ಗಳು ಇತರರಿಗೆ ಕಾಣಿಸುವುದಿಲ್ಲ. ಈ ಚಾಟ್ ಲಾಕ್ ಫೋಲ್ಡರ್‌ನ್ನು ಫಿಂಗರ್ ಪ್ರಿಂಟ್ ಲಾಕ್ ಮೂಲಕ ತೆರೆದು ನೋಡಬಹುದು.
ಬಳಕೆದಾರರ ಭದ್ರತೆಗೆ 3 ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸಾಪ್
ವ್ಯಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ರೀಡ್ ಲೇಟರ್ ಹೊಸ ಫೀಚರ್ ಶೀಘ್ರವೇ ಲಭ್ಯವಾಗಲಿದೆ. ರೀಡ್ ಲೇಟರ್ ಫೀಚರ್ ಕೂಡ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಅಮೇಲೆ ಓದುವ ಈ ಫೀಚರ್ ಕೂಡ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ ಪ್ರಸಕ್ತ ಬಳಕೆದಾರರು ತಾವು ತಕ್ಷಣವೇ ಓದಲು ಬಯಸದ ಚಾಟ್‌ಗಳನ್ನು ಆರ್ಚಿವ್‌್ಡ ಚಾಟ್ಸ್‌ನಲ್ಲಿ ಸಂಗ್ರಹಿಸಬಹುದಿತ್ತು. ಆದರೆ ಹೊಸ ಸಂದೇಶಗಳು ಬಂದಾಗಲೆಲ್ಲಾ ಅದು ಮೊಬೈಲ್‌ನಲ್ಲಿ ಪಾಪಪ್ ಆಗುತ್ತಲೇ ಇತ್ತು. ಹೀಗಾಗಿ ಆರ್ಚಿವ್‌್ಡ ಚಾಟ್ಸ್‌ನ ಮೂಲ ಉದ್ದೇಶ ಸಾಕಾರಗೊಂಡಿರಲಿಲ್ಲ. ಹೀಗಾಗಿ ಇದೀಗ ‘ರೀಡ್ ಲೇಟರ್’ ಎಂಬ ಹೊಸ ವ್ಯವಸ್ಥೆಯೊಂದನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಕಲ್ಪಿಸಿಕೊಡಲು ಮುಂದಾಗಿದೆ.
ಒಮ್ಮೆ ಬಳಕೆದಾರರು ಈ ಆಪ್ಷನ್ ಅನ್ನು ಆಯ್ಕೆ ಮಾಡಿಕೊಂಡರೆ, ಮುಂದೆ ಅದರಿಂದ ಹೊರಗೆ ಬರುವವರೆಗೂ, ಮೊಬೈಲ್‌ಗೆ ಬರುವ ಸಂದೇಶಗಳೆಲ್ಲವೂ ‘ರೀಡ್ ಲೇಟರ್’ ವಿಭಾಗದಲ್ಲಿ ಸೇವ್ ಆಗಿರುತ್ತದೆ. ಬಳಿಕ ಗ್ರಾಹಕರು ತಮಗೆ ಸಾಧ್ಯವಾದ ಸಮಯದಲ್ಲಿ ಅವುಗಳನ್ನು ಓದಿಕೊಳ್ಳಬಹುದು.