ಸಾಮಾಜಿಕ ಜಾಲತಾಣದಲ್ಲಿ ಧೂಳಿಬ್ಬಿಸಿದ ಸತ್ಯ ನಡೆಲ್ಲಾ ಹಳೆ ವಿಡಿಯೋ

By Anusha KbFirst Published Dec 28, 2022, 3:47 PM IST
Highlights

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಹೈದರಾಬಾದ್‌ನಲ್ಲಿ ಜನಿಸಿ ವಿಶ್ವದಾದ್ಯಂತ ಪ್ರಖ್ಯಾತಿ ಗಳಿಸಿರುವ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಹಳೆ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಹೈದರಾಬಾದ್‌ನಲ್ಲಿ ಜನಿಸಿ ವಿಶ್ವದಾದ್ಯಂತ ಪ್ರಖ್ಯಾತಿ ಗಳಿಸಿರುವ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಹಳೆ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1993ರ ವಿಡಿಯೋ ಇದಾಗಿದ್ದು, ಆಗ ನವಯುವಕನಾಗಿದ್ದ ಸತ್ಯ ನಡೆಲ್ಲಾ ಅವರು ಎಂಎಸ್ ಎಕ್ಸೆಲ್ ಬಗ್ಗೆ ಡೆಮೊ ತೋರಿಸುತ್ತಿರುವ ವಿಡಿಯೋ ಇದಾಗಿದೆ. ಸುಮಾರು 30 ವರ್ಷಗಳ ಹಳೆ ವಿಡಿಯೋ ಇದಾಗಿದ್ದು, ಆಗ ನವ ತರುಣನಾಗಿದ್ದ ಆದರೆ ಸಂಸ್ಥೆಯ ಮಧ್ಯಮ ಮಟ್ಟದ ಮ್ಯಾನೇಜರ್ ಆಗಿದ್ದ ಸತ್ಯ ನಡೆಲ್ಲಾ ಅವರನ್ನು ವಿಡಿಯೋದಲ್ಲಿ ಟೆಕ್ನಿಕಲ್ ಮಾರುಕಟ್ಟೆ ಮ್ಯಾನೇಜರ್ ಎಂದು ಪರಿಚಯಿಸಲಾಗಿದೆ. 

30 ವರ್ಷಗಳ ಈ ಹಳೆಯ ವಿಡಿಯೋಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರನ್ನು ಹೊಗಳಿದರೆ ಮತ್ತೆ ಕೆಲವರು ಅವರ ನಿರ್ಧಾರ ಮತ್ತು ಟ್ವೀಟ್‌ನ ಒಟ್ಟಾರೆ ಸನ್ನಿವೇಶವನ್ನು ಅವಲೋಕಿಸಿ ಇದು ಕೇವಲ ಬಂಡವಾಳಶಾಹಿ ಎಂದು ಟೀಕಿಸಿದರು. ಮತ್ತೆ ಕೆಲವರು ಆಗ ಸತ್ಯ ನಾಡೆಲ್ಲಾ ಅವರ ಇಂಗ್ಲೀಷ್ ಭಾಷೆಯ ಉಚ್ಚಾರ (accent) ಹೇಗಿತ್ತು ಎಂಬುದನ್ನು ತಮಾಷೆ ಮಾಡಿದ್ದಾರೆ. 

ಮನೆಯಿಂದ ಕೆಲಸ ಮಾಡ್ತಿರುವವರು ಸೋಮಾರಿಗಳಾ?: Microsoft ಸಿಇಒ ಏನ್ ಹೇಳಿದ್ರು ನೋಡಿ

ಅದೇನೆ ಇರಲಿ ದ್ವೇಷಿಸುವವರು ದ್ವೇಷಿಸುತ್ತಲೇ ಇರಲಿ. ಆದರೆ ಮೈಕ್ರೋಸಾಫ್ಟ್‌ನ ಮಧ್ಯಮ ಮಟ್ಟದ ಮ್ಯಾನೇಜರ್ ಒಬ್ಬರು ಆದರ ಉನ್ನತ ಸ್ಥಾನಕ್ಕೆ ಏರುತ್ತಾ ಸಾಗಿ ಕಾರ್ಪೋರೇಟ್ (corporate) ವಲಯದಲ್ಲಿ ಯಶಸ್ಸಿನ ಜೊತೆ, ಅದಕ್ಕೆ ಅಗತ್ಯವಾಗಿದ್ದ ಸಮಯದಲ್ಲಿ ಅದರ ಪೋಷಕರಾದ ವಿಚಾರವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದರಲ್ಲೂ ಮುಖ್ಯವಾಗಿ ಸತ್ಯ ನಡೆಲ್ಲಾ ಅವರು ಬಿಲ್‌ ಗೇಟ್ಸ್ (Bill Gates) ಹಾಗೂ ಸ್ಟೀವ್ ಬಲ್ಮೇರ್ (Steve Balmer) ಅವರಿಂದ ಅಧಿಕಾರ ವಹಿಸಿಕೊಂಡಾಗಿನಿಂದಲೂ ಮೈಕ್ರೋಸಾಫ್ಟ್ (Microsoft) ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. 

ಸತ್ಯ ನಾಡೆಲ್ಲಾ (Satya Nadella) ಅವರು ಹೈದರಾಬಾದ್‌ನಲ್ಲಿ(Hyderabad) 1967 ರ ಆಗಸ್ಟ್ 19 ರಂದು ಸಂಸ್ಕೃತ ಶಿಕ್ಷಕಿ (Sanskrit teacher) ಪ್ರಭಾವತಿ ಮತ್ತು 1962ರ ಬ್ಯಾಚ್‌ನ ಐಎಎಸ್ ಅಧಿಕಾರಿ ಬುಕ್ಕಪುರಂ (Bukkapuram) ನಡೆಲ್ಲಾ ದಂಪತಿ ಮಗನಾಗಿ ಜನಿಸಿದರು. ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ (Begumpet) ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಲ್ಲಿ (Hyderabad Public School) ತನ್ನ ಶಾಲಾ ಶಿಕ್ಷಣವನ್ನು ಪೂರೈಸಿದ ಅವರು 1988ರಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (Manipal Institute of Technology) ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

Zain Nadella Passes Away: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾಗೆ ಪುತ್ರ ವಿಯೋಗ!

ನಂತರ ಕಂಪ್ಯೂಟರ್ ಸೈನ್ಸ್‌ನಲ್ಲಿ(Computer Science) ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಾಗೆ ತೆರಳಿದ ಅವರು ನಂತರ 1997ರಲ್ಲಿ ಎಂಬಿಎ (MBA) ಮಾಡಿದರು. 1992 ರಲ್ಲಿ ಮೈಕ್ರೋಸಾಫ್ಟ್‌ಗೆ ಸೇರುವ ಮೊದಲು, ಸತ್ಯ ನಾಡೆಲ್ಲಾ ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು . 2014ರಲ್ಲಿ ನಡೆಲ್ಲಾ ಅವರನ್ನು ಕಂಪನಿಯ ಹೊಸ ಸಿಇಒ ಎಂದು ಘೋಷಿಸಲಾಯಿತು, ಅವರು ಅಲ್ಲಿ ತಮ್ಮ ವೃತ್ತಿಜೀವನದ ಸುಮಾರು 3 ದಶಕಗಳನ್ನು ಕಳೆದರು. ನಡೆಲ್ಲಾ ಅವರು ‘ಹಿಟ್ ರಿಫ್ರೆಶ್’ ಎಂಬ ಪುಸ್ತಕವನ್ನು ಬರೆದಿದ್ದು, 2022ರಲ್ಲಿ  ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು (Padma Bhushan) ಗೆದ್ದಿದ್ದಾರೆ.

Today, he's the CEO of a $1.8 trillion company.

In 1993, he was just another middle manager doing Excel demos.

Satya Nadella worked at Microsoft for 22 years.

He climbed the ladder.

And is worth ~$700 million today.

There are many ways to win. pic.twitter.com/SBMhuT0Awz

— Brandon Arvanaghi 🐱 (@arvanaghi)

 

click me!