Shah Rukh Khan; ನಾನು ರಾತ್ರಿ ಬ್ಯಾಟ್‌ಮ್ಯಾನ್ ಬೆಳಗ್ಗೆ ಸೂಪರ್‌ಮ್ಯಾನ್; 'ಪಠಾಣ್' ಸ್ಟಾರ್ ಹೇಳಿಕೆ ವೈರಲ್

By Shruthi Krishna  |  First Published Dec 28, 2022, 1:38 PM IST

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ರಾತ್ರಿ ಬ್ಯಾಟ್‌ಮ್ಯಾನ್ ಬೆಳಗ್ಗೆ ಸೂಪರ್‌ಮ್ಯಾನ್ ಅಂತ ಹೇಳಿದ್ದಾರೆ. 


ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಸಿನಿಮಾದಿಂದ ಬ್ರೇಕ್ ಪಡೆದಿದ್ದರು. ಅನೇಕ ವರ್ಷಗಳ ಬಳಿಕ ಶಾರುಖ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಶಾರುಖ್ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಗ್ಯಾಪ್‌ನ ಬಳಿಕ ಶಾರುಖ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪಠಾಣ್ ಸಿನಿಮಾ ಜೊತೆಗೆ ಜವಾನ್, ದುನ್ಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶಾರುಖ್ ಸಂದರ್ಶನದಲ್ಲಿ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆಗ ರಾತ್ರಿ ಬ್ಯಾಟ್‌ಮ್ಯಾನ್ ಆಗಿರ್ತೀನಿ, ಬೆಳಗ್ಗೆ ಸೂಪರ್‌ಮ್ಯಾನ್ ಆಗುತ್ತೇನೆ ಎಂದು ಇಂಟ್ರಸ್ಟಿಂಗ್ ಹೇಳಿಕೆ ನೀಡಿದ್ದಾರೆ. 

ಪಠಾಣ್ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವ ಶಾರುಖ್ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣಲಿದೆ ಎಂದು ಹೇಳಿದ್ದಾರೆ. ಇನ್ನೂ ಲಿಯಾನ್; ದಿ ಪ್ರೊಫೆಷನಲ್ ರೀತಿಯ ಸಿನಿಮಾಗಳನ್ನು ಮಾಡುವ ಆಸೆ ಇದೆ ಎಂದು ಶಾರುಖ್ ಖಾನ್ ಬಹಿರಂಗ ಪಡಿಸಿದ್ದಾರೆ. 'ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ. ಒಳ್ಳೆಯ ಹುಡುಗ, ಕೆಟ್ಟ ಹುಡುಗ, ಸಂತೋಷದ ವ್ಯಕ್ತಿ, ಪ್ರೀತಿಸುವ ವ್ಯಕ್ತಿ, ಫೈಟಿಂಗ್ ಮಾಡುವ ವ್ಯಕ್ತಿ ಎಲ್ಲಾ ಮಾಡಲು ಬಯಸುತ್ತೇನೆ' ಎಂದು ಹೇಳಿದರು. 

ಮದುವೆ ಇದೆ ದಯವಿಟ್ಟು 'ಪಠಾಣ್' ಸಿನಿಮಾ ಪೋಸ್ಟ್‌ಪೋನ್ ಮಾಡಿ; ಅಭಿಮಾನಿ ಮನವಿಗೆ ಶಾರುಖ್ ರಿಯಾಕ್ಷನ್ ವೈರಲ್

Tap to resize

Latest Videos

undefined

'ಈ ವರ್ಷ ನನಗೆ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಯಾಕೆಂದರೆ ನಾನು ಪಠಾಣ್ ಮಾಡಿದ್ದೇನೆ. ನಾನು ಇಲ್ಲಿಗೆ ಬಂದು 32 ವರ್ಷಗಳಾಗಿದೆ. ಈಗ ಈ ಆಕ್ಷನ್ ಸಿನಿಮಾ ಮಾಡಿದ್ದೇನೆ. 57ನೇ ವಯಸ್ಸಿನಲ್ಲಿ ನಾನು ಇದನ್ನು ಮಾಡಿದ್ದೇನೆ. ನಾನು ಯಾವಾಗಲು ದಕ್ಷಿಣ ಭಾರತದ ಸಿನಿಮಾಗಳ ಪ್ರಕಾರ ಮಾಡಲು ಬಯಸುತ್ತೇನೆ. ವಿಭಿನ್ನವಾದ ಸಿನಿಮಾವಾಗಿದೆ. ಅದೇ ಜವಾನ್ ಸಿನಿಮಾ. ನಾನು ಯಾವಾಗಲೂ ರಾಜ್ ಕುಮಾರ್ ಹಿರಾನಿ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ. ನಾನು 3 ಈಡಿಯಟ್ಸ್ ಮತ್ತು ಮುನ್ನಾ ಭಾಯ್ MBBSನಲ್ಲಿ ಕೆಲಸ ಮಾಡಬೇಕಿತ್ತು. ಆಗಿರಲಿಲ್ಲ. ಕೊನೆಗೂ ಈಗ ಸಂಭವಿಸಿದೆ' ಎಂದು ಹೇಳಿದರು. 

'ಯಶ್ ಈಸ್ ವಾವ್...'; ಶಾರುಖ್ ಖಾನ್ ರಿಯಾಕ್ಷನ್‌ಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಫಿದಾ

'ನಾನು ಲಿಯಾನ್; ದಿ ಪ್ರೊಫೆಷನಲ್ ರೀತಿಯ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ. ವಯಸ್ಸಾದ ಶಾಂತ ವ್ಯಕ್ತಿ, ಗ್ರೇ ಹೇರ್ ಇರುವ ರೀತಿ ಸಿನಿಮಾ ಮಾಡಬೇಕು. ನಾನು ಪಾತ್ರಗಳನ್ನು ತೆಗೆದುಕೊಳ್ಳುವುದಿಲ್ಲ, ನಾನು ಕಥೆಯನ್ನು ಬಯಸುತ್ತೇನೆ. ನಾನು ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತೇನೆ. ನಾನು ರಾತ್ರಿ ಬ್ಯಾಟ್‌ಮ್ಯಾನ್, ಬೆಳಗ್ಗೆ ಸೂಪರ್ ಮ್ಯಾನ್, ಮಧ್ಯಾಹ್ನ ಸ್ಪೈಡರ್ ಮ್ಯಾನ್. ಹಾಗಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತೇನೆ' ಎಂದು ಹೇಳಿದರು. 

click me!