Jio Down: ಹಲವು ಗಂಟೆಗಳ ಕಾಲ ದೇಶಾದ್ಯಂತ ಡೌನ್‌ ಆಗಿದ್ದ ಜಿಯೋ ಸೇವೆ ಮತ್ತೆ ವಾಪಸ್‌..!

By BK Ashwin  |  First Published Dec 28, 2022, 12:44 PM IST

ಡೌನ್‌ಡಿಕೆಕ್ಟರ್‌ನ ಲೈವ್ ಔಟ್‌ಟೇಜ್ ಮ್ಯಾಪ್‌ ಪ್ರಕಾರ, ಜಿಯೋ ಸ್ಥಗಿತವು ದೆಹಲಿ, ಕೋಲ್ಕತ್ತಾ, ಮುಂಬೈ, ಚಂಡೀಗಢ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಹಲವಾರು ನಗರಗಳ ಮೇಲೆ ಪರಿಣಾಮ ಬೀರಿದೆ ಎಂದೂ ವರದಿಯಾಗಿದೆ.


ರಿಲಯನ್ಸ್ ಜಿಯೋ (Reliance Jio) ಸರ್ವರ್‌ಗಳು ಬೆಂಗಳೂರು (Bengaluru) ಸೇರಿ ಬಹುತೇಕ ದೇಶಾದ್ಯಂತ (Country Wide) ಹಲವು ಗಂಟೆಗಳ ಕಾಲ ಸೇವೆ ಡೌನ್‌ (Outage) ಆಗಿತ್ತು. ಈ ಕಾರಣದಿಂದ  ಬಳಕೆದಾರರು (Users) ಬುಧವಾರ ಬೆಳಗ್ಗೆ ಇಂಟರ್ನೆಟ್‌ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಇನ್ನು, ಹಲವರು ನಿನ್ನೆ ರಾತ್ರಿಯಿಂದಲೂ ಇಂಟರ್ನೆಟ್‌ ಸೇವೆ ಇಲ್ಲ, ಕಸ್ಟೋಮರ್‌ ಕೇರ್‌ನವರು (Customer Care) ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ (Twitter) ದೂರಿದ್ದಾರೆ. ಆದರೆ, ಸದ್ಯ ಜಿಯೋ ಇಂಟರ್‌ನೆಟ್‌ ಸೇವೆ ಮತ್ತೆ ಮರಳಿದ್ದು, ಗ್ರಾಹಕರು ನಿರಾಳರಾಗಿದ್ದಾರೆ ಎಂದು ಹೇಳಲಾಗಿದೆ. 

ಇಂಟರ್ನೆಟ್ ಸೇವೆಗಳನ್ನು ಟ್ರ್ಯಾಕ್‌ ಮಾಡುವ ಡೌನ್‌ಡಿಕೆಕ್ಟರ್‌ ಜಿಯೋದ ಬ್ರಾಡ್‌ಬ್ಯಾಂಡ್ ಮತ್ತು ಇಂಟರ್ನೆಟ್ ಸೇವೆಗಳನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ ಬಗ್ಗೆ ಮಾಹಿತಿ ನೀಡಿದೆ. ಭಾರತೀಯ ಕಾಲಮಾನ ಬೆಳಗ್ಗೆ 10 ಗಂಟೆ ವೇಳೆಗೆ ಟ್ವಿಟ್ಟರ್‌ನಲ್ಲಿ ಜಿಯೋ ಸೇವೆ ಸ್ಥಗಿತ ವರದಿಗಳು ಬರಲು ಪ್ರಾರಂಭವಾಗಿತ್ತು. ಆದರೆ, ದೇಶಾದ್ಯಂತ ಸೇವೆಗಳ ಮೇಲೆ ಪರಿಣಾಮ ಬೀರುವ ಸರ್ವರ್ ಸಮಸ್ಯೆಯನ್ನು ಕಂಪನಿಯು ಸರಿಪಡಿಸಿದ ಕಾರಣ, ಸುಮಾರು 11:30 ಗಂಟೆಗೆ ಜಿಯೋ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪುನಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.

Latest Videos

undefined

ಇದನ್ನು ಓದಿ: ಗ್ರಾಹಕರಿಗೆ Xiaomi ಹಾಗೂ ಜಿಯೋ ಕೊಡುಗೆ, ಟ್ರೂ 5ಜಿ ಸೇವೆಗಾಗಿ ಒಪ್ಪಂದ!

Unable to contact on care number as call is getting disconnected. Please respond asap as my jio fiber is not working.

— Saurabh (@saurabhmalh0tra)

ಡೌನ್‌ಡಿಕೆಕ್ಟರ್‌ ಪ್ರಕಾರ, ಜಿಯೋ ಸ್ಥಗಿತ ಪ್ರಕರಣಗಳು ಬೆಳಗ್ಗೆ 10 ಗಂಟೆಗೆ ದೇಶದಲ್ಲಿ ಹೆಚ್ಚಾಗಲು ಪ್ರಾರಂಭಿಸಿದವು. ಬೆಳಗ್ಗೆ 11:05 ರ ಹೊತ್ತಿಗೆ, 300 ಕ್ಕೂ ಹೆಚ್ಚು ಬಳಕೆದಾರರು ಜಿಯೋ ಸಂಪರ್ಕದಲ್ಲಿ ತೀವ್ರ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಸುಮಾರು 59 ಪ್ರತಿಶತ ಬಳಕೆದಾರರು ಮೊಬೈಲ್ ಇಂಟರ್ನೆಟ್ ಸಂಪರ್ಕದ ಸಮಸ್ಯೆಗಳ ಬಗ್ಗೆ ದೂರಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಐಫೋನ್ ಬಳಕೆದಾರರಿಗೆ ಗುಡ್ ನ್ಯೂಸ್, ಅನ್‌ಲಿಮಿಟೆಡ್ ಡೇಟಾ ಜೊತೆ ಜಿಯೋ ಟ್ರು 5ಜಿ ಸೇವೆ ಲಭ್ಯ!

ಇನ್ನು, ಡೌನ್‌ಡಿಕೆಕ್ಟರ್‌ನ ಲೈವ್ ಔಟ್‌ಟೇಜ್ ಮ್ಯಾಪ್‌ ಪ್ರಕಾರ, ಜಿಯೋ ಸ್ಥಗಿತವು ದೆಹಲಿ, ಕೋಲ್ಕತ್ತಾ, ಮುಂಬೈ, ಚಂಡೀಗಢ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಹಲವಾರು ನಗರಗಳ ಮೇಲೆ ಪರಿಣಾಮ ಬೀರಿದೆ ಎಂದೂ ವರದಿಯಾಗಿದೆ. ಇತ್ತೀಚಿನ ಜಿಯೋ ಸ್ಥಗಿತದ ಬಗ್ಗೆ ತಮ್ಮ ಆತಂಕ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ಹಲವಾರು ಬಳಕೆದಾರರು ಟ್ವಿಟ್ಟರ್‌ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಇಂಟರ್ನೆಟ್ ಪ್ರವೇಶದೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದರೆ, ಕೆಲವರು ಕಂಪನಿಯ ಗ್ರಾಹಕ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಿದರು.

Jio fiber down ecen coustumer care is also not taking call

— Shyamal Kaushik (@shyamal_AAP)

ಇದೀಗ, ಜಿಯೋ ಸೇವೆಗಳು ದೇಶಾದ್ಯಂತ ಪುನಾರಂಭಗೊಳ್ಳಲು ಪ್ರಾರಂಭಿಸಿದೆ. ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳನ್ನು ಯಾವುದೇ ತೊಂದರೆಯಿಲ್ಲದೆ ಬಳಸುವುದನ್ನು ಪುನಾರಂಭಿಸಲು ಸಾಧ್ಯವಾಗುತ್ತದೆ ಎಂದು ಸದ್ಯ ಹೇಳಬಹುದು. 

My Jio broadband is down, getting no support from Customer Care. What speed are you talking about ?

— Ar. Debaditya (@ar_Debaditya)

‘ಟ್ರೂ 5G’ ಅನುಭವ ನೀಡಲು ರಿಲಯನ್ಸ್ ಜಿಯೋ ಜೊತೆ ಶಿಯೋಮಿ ಇಂಡಿಯಾ ಒಪ್ಪಂದ..!
ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಿಯೋಮಿ ಇಂಡಿಯಾ, ತನ್ನ ಗ್ರಾಹಕರಿಗೆ ‘ಟ್ರೂ 5G’ ಅನುಭವ ನೀಡಲು ರಿಲಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಶಿಯೋಮಿ ಮತ್ತು ರೆಡ್‌ಮೀ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಡೆರಹಿತ ಟ್ರೂ 5ಜಿ ಸಂಪರ್ಕ ಪಡೆಯುವುದಕ್ಕೆ ಮತ್ತು ಅಡಚಣೆಯಿಲ್ಲದ ವಿಡಿಯೋಗಳನ್ನು ಸ್ಟ್ರೀಮ್ ಮಾಡಲು, ಹೆಚ್ಚಿನ ರೆಸಲ್ಯೂಶನ್ ವಿಡಿಯೋ ಕರೆಗಳನ್ನು ಆನಂದಿಸಲು ಮತ್ತು ಸಾಧನಗಳಲ್ಲಿ ಕಡಿಮೆ ಲೇಟೆನ್ಸಿ ಗೇಮಿಂಗ್ ಆಡಲು ಅನುವು ಮಾಡಿಕೊಡುತ್ತದೆ. ಜಿಯೋ ಟ್ರೂ 5G ಸ್ಟ್ಯಾಂಡಲೋನ್ (SA) ನೆಟ್‌ವರ್ಕ್ ಸಂಪರ್ಕಿಸಲು ಬಳಕೆದಾರರು ತಮ್ಮ ಶಿಯೋಮಿ ಮತ್ತು ರೆಡ್‌ಮೀ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಲ್ಲಿ ಆದ್ಯತೆಯ ನೆಟ್‌ವರ್ಕ್ ಪ್ರಕಾರವನ್ನು 5G ಎಂದು ಬದಲಾಯಿಸಬೇಕಾಗುತ್ತದೆ. 

click me!