ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

By BK Ashwin  |  First Published May 9, 2023, 2:28 PM IST

ಲೈಫೈ ಅಥವಾ ಲೈಟ್ ಫಿಡೆಲಿಟಿ ಎನ್ನುವ ಈ ವ್ಯವಸ್ಥೆ ಮಿನುಗುವ ಬೆಳಕನ್ನು ಡಿಜಿಟಲ್ ಸಂಕೇತದಂತೆ ವರ್ತಿಸಲು ಬಳಸಿಕೊಂಡು, ಅತ್ಯಂತ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒಂದು ಕಾಲದಲ್ಲಿ ಸಂಪರ್ಕಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಪ್ರದೇಶಗಳಿಗೆ ತಲುಪಿಸಲು ನೆರವಾಗುತ್ತಿದೆ.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ಸಂಶೋಧಕ, ಸೋನಮ್ ವಾಂಗ್‌ಚುಕ್ ಅವರು ಲಡಾಖ್‌ನ ದೂರದ ಪ್ರದೇಶಗಳಲ್ಲಿ, ಪರ್ವತ ಪ್ರದೇಶಗಳಲ್ಲಿ, ಹಾಗೂ ಸವಾಲಿನ ಭೂಪ್ರದೇಶಗಳಲ್ಲಿ ಅಂತರ್ಜಾಲ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲು ಒಂದು ವಿನೂತನ ಪರಿಹಾರವನ್ನು ಆವಿಷ್ಕರಿಸಿದ್ದಾರೆ. ಲೈಫೈ (LiFi) ಅಥವಾ ಲೈಟ್ ಫಿಡೆಲಿಟಿ ಎನ್ನುವ ಈ ವ್ಯವಸ್ಥೆ ಮಿನುಗುವ ಬೆಳಕನ್ನು ಡಿಜಿಟಲ್ ಸಂಕೇತದಂತೆ ವರ್ತಿಸಲು ಬಳಸಿಕೊಂಡು, ಅತ್ಯಂತ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒಂದು ಕಾಲದಲ್ಲಿ ಸಂಪರ್ಕಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಪ್ರದೇಶಗಳಿಗೆ ತಲುಪಿಸಲು ನೆರವಾಗುತ್ತಿದೆ. ಈ ವಿನೂತನ ತಂತ್ರಜ್ಞಾನ ಹೇಗೆ ಕಾರ್ಯಾಚರಿಸುತ್ತದೆ ಮತ್ತು ಲಡಾಖಿನ ಪರ್ವತ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಯಲ್ಲಿ ಹೇಗೆ ಹೊಸ ಕ್ರಾಂತಿ ಉಂಟುಮಾಡಿದೆ ಎಂದು ಗಮನಿಸೋಣ.

Tap to resize

Latest Videos

ಬೆಳಕಿನ ಶಕ್ತಿಯನ್ನು ಬಳಸಿಕೊಳ್ಳುವುದು

ಲೈಫೈ ತಂತ್ರಜ್ಞಾನ ಸಾಂಪ್ರದಾಯಿಕವಾದ ಟೆಲಿಕಾಮ್ ಟವರ್‌ಗಳಿಗೆ ಸಮರ್ಥ ಬದಲಿ ಆಯ್ಕೆಯಾಗಿದ್ದು, ಕೇವಲ 100 ವ್ಯಾಟ್‌ಗಳಷ್ಟು ವಿದ್ಯುತ್ ಬಳಸಿಕೊಂಡು, ವೈರ್‌ಲೆಸ್ ಸಂವಹನ ಒದಗಿಸುತ್ತದೆ. ನವ್ ವೈರ್‌ಲೆಸ್ ಟೆಕ್ನಾಲಜಿ ಎಂಬ ಭಾರತೀಯ ಸಂಸ್ಥೆ ಈ ಲೈಫೈ ವ್ಯವಸ್ಥೆಗೆ ಹೊಸ ವೇಗ ತಂದಿದ್ದು, ಸಾಮಾನ್ಯವಾಗಿ ಸಂಪರ್ಕಕ್ಕೆ ಅಡ್ಡಿಯಾಗುವ ಪರ್ವತಗಳನ್ನೇ ಫೋನ್ ಟವರ್‌ಗಳ ರೂಪದಲ್ಲಿ ಬಳಸಿಕೊಳ್ಳುತ್ತದೆ.

ಇದನ್ನು ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ಹಿಮಾಲಯದ ಕಠಿಣ ಸನ್ನಿವೇಶಗಳಲ್ಲಿ ಕಾರ್ಯಾಚರಿಸುವಂತೆ ಮಾಡಲು, ವಾಂಗ್‌ಚುಕ್ ಅವರು ಈ ವ್ಯವಸ್ಥೆಯನ್ನು ಹೊರಗಿನ ವಿಪರೀತ ತಂಪಿನಿಂದ ಕಾಪಾಡಿ, ಪವರ್ ಬ್ಯಾಂಕಿನ ಆಂತರಿಕ ತಾಪಮಾನವನ್ನು 15 ಡಿಗ್ರಿ ಸೆಲ್ಸಿಯಸ್‌ಗಳಲ್ಲಿ ಕಾಪಾಡಿಕೊಳ್ಳಲು ಅನುಕೂಲವಾಗುವಂತಹ ಕವಚದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಲೇಸರ್‌ನಿಂದ ಸಂಪರ್ಕದ ತನಕ

ಈ ವಿನೂತನ ವ್ಯವಸ್ಥೆಯಲ್ಲಿ, ಪರ್ವತದ ಮೇಲ್ಭಾಗದಲ್ಲಿ ಲೇಸರ್ ಟ್ರಾನ್ಸ್‌ಮಿಟರ್ ಅನ್ನು ಅಳವಡಿಸಲಾಗುತ್ತದೆ. ಈ ಲೇಸರ್ ನೂತನ ತಂತ್ರಜ್ಞಾನದ ಪ್ರಧಾನ ಅಂಗವಾಗಿದೆ. ಇದು ರೇಡಿಯೋ ಸಂಕೇತಗಳನ್ನು ಮಿನುಗುವ ಲೇಸರ್ ಕಿರಣಗಳಾಗಿ ಪರಿವರ್ತಿಸುತ್ತದೆ. ಇದು 3.5 ಕಿಲೋಮೀಟರ್ ದೂರದಲ್ಲಿರುವ ಜಿಯೋ ಟವರ್‌ನಿಂದ ಆಪ್ಟಿಕಲ್ ಸಂಕೇತಗಳನ್ನು ಪಡೆದುಕೊಂಡು, ಲೇಸರ್ ಮೂಲಕ ಹತ್ತು ಕಿಲೋಮೀಟರ್ ತನಕ ದೂರದಲ್ಲಿರುವ ರಿಸೀವರ್‌ಗಳಿಗೆ 10ಜಿಬಿಪಿಎಸ್ ಬ್ಯಾಂಡ್‌ವಿಡ್ತ್‌ನಲ್ಲಿ ಮಾಹಿತಿಯನ್ನು ರವಾನಿಸುತ್ತದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಈ ರಿಸೀವರ್ ಒಂದು ಸ್ಥಳೀಯ ಟೆಲಿಕಾಮ್ ಟವರ್‌ಗೆ ಸಂಪರ್ಕ ಸಾಧಿಸಿ, ಆ ಮೂಲಕ ಹಳ್ಳಿಗಳಲ್ಲಿ, ಪರ್ವತ ಪ್ರದೇಶಗಳಲ್ಲಿ ತಡೆರಹಿತವಾದ, ನಗರ ಪ್ರದೇಶಗಳ ವೇಗದ ಅಂತರ್ಜಾಲ ಸಂಪರ್ಕ ಒದಗಿಸುತ್ತದೆ. ಈ ಲೈಫೈ ತಂತ್ರಜ್ಞಾನ ಬಳಕೆದಾರರಿಗೆ ಕನಿಷ್ಠ 400 ಎಂಬಿಪಿಎಸ್ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸುತ್ತದೆ. ಇದಕ್ಕಾಗಿ ನೆಲವನ್ನು ಅಗೆದು, ಫೈಬರ್ ಸಂಪರ್ಕವನ್ನು ಅಳವಡಿಸುವ ಅಗತ್ಯವೂ ಇರುವುದಿಲ್ಲ.

ಪ್ರತಿಕೂಲ ಹವಾಮಾನವನ್ನು ಎದುರಿಸುವುದು

ಇಂತಹ ಸವಾಲಿನ ವಾತಾವರಣದಲ್ಲಿ, ದುರ್ಗಮ ಪ್ರದೇಶಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ನಿರ್ವಹಣೆ ನಡೆಸಲು, ವಾಂಗ್‌ಚುಕ್ ಅವರು ಒಂದು ಸುಲಭ ಉಪಾಯವನ್ನು ಸೂಚಿಸಿದ್ದಾರೆ. ಅದೆಂದರೆ, ಇಲ್ಲಿನ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿರುವ ಸ್ಥಳೀಯರಿಗೆ ತರಬೇತಿ ನೀಡಿ, ಅವರೇ ಈ ತಂತ್ರಜ್ಞಾನದ ನಿರ್ವಹಣೆ ನೋಡಿಕೊಳ್ಳುವಂತೆ ಮಾಡುವುದು. ಇದು ಅಂತರ್ಜಾಲ ವ್ಯವಸ್ಥೆ ಸುಲಲಿತವಾಗುವಂತೆ ಮಾಡುವುದು ಮಾತ್ರವಲ್ಲದೆ, ಸ್ಥಳೀಯ ಜನರನ್ನು ಸಬಲೀಕರಣಗೊಳಿಸುತ್ತದೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ದಟ್ಟವಾದ ಮಂಜು ಲೈಫೈ ಸಿಗ್ನಲ್ ಸಾಮರ್ಥ್ಯವನ್ನು ಕಡಿಮೆಗೊಳಿಸಬಹುದು. ಆದರೆ ಹಿಮಾಲಯದ ಎತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿ ಬಿಸಿಲಿದ್ದು, ಸ್ಪಷ್ಟ ವಾತಾವರಣವಿರುತ್ತದೆ. ಆದ್ದರಿಂದ ಹಿಮಾಲಯದಲ್ಲಿ ಇಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿಲ್ಲ. ವಾಂಗ್‌ಚುಕ್ ಅವರು ಈ ವ್ಯವಸ್ಥೆಯು ಹಿಮಪಾತವನ್ನೂ ಎದುರಿಸುವಂತೆ ನಿರ್ಮಿಸಿದ್ದು, ಜಾರುವ ಹಿಮ ಸೌರ ಫಲಕದಿಂದ ಬಿದ್ದು ಹೋಗುತ್ತದೆ. ಆಪ್ಟಿಕಲ್ ಘಟಕಗಳನ್ನು ಸಂರಕ್ಷಿಸಲು ಫಲಕಗಳನ್ನು ಅಳವಡಿಸಲಾಗುತ್ತದೆ.

ಲೈಫೈ ಹಿಂದಿನ ವಿಜ್ಞಾನ

ಜರ್ಮನ್ ವಿಜ್ಞಾನಿ ಹರಾಲ್ಡ್ ಹಾಸ್ ಅವರು ಪ್ರಸ್ತಾಪಿಸಿರುವ ಲೈಫೈ ತಂತ್ರಜ್ಞಾನ ಡೇಟಾವನ್ನು ಬೆಳಕಿನ ರೂಪದಲ್ಲಿ ಸಾಗಿಸುತ್ತದೆ. ಇದು ಸಂಪರ್ಕ ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಅತ್ಯಂತ ವೇಗದ, ವೈರ್‌ಲೆಸ್ ಸಂವಹನ ಒದಗಿಸಲು ನೆರವಾಗುತ್ತದೆ. ವೈಫೈಗೆ ಹೋಲಿಸಿದರೆ, ಲೈಫೈ ತಂತ್ರಜ್ಞಾನದಲ್ಲಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಇದ್ದು, ಬಳಕೆಗೆ ಸುಲಭ, ಸಮರ್ಥ ಮತ್ತು ಸುರಕ್ಷಿತವಾಗಿದೆ. ಲೈಫೈ ತಂತ್ರಜ್ಞಾನವನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದ್ದು, ಬೀದಿ ದೀಪ, ಸ್ವಯಂಚಾಲಿತ ಕಾರ್ ಹೆಡ್ ಲೈಟ್‌ಗಳಲ್ಲಿ ಬಳಕೆಯಾಗಬಹುದು.

ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

ಲೈಫೈ ತಂತ್ರಜ್ಞಾನಕ್ಕೆ ಅಂತರ್ಜಾಲ ವ್ಯವಸ್ಥೆಯನ್ನು ಕ್ರಾಂತಿಕಾರಕಗೊಳಿಸಬಲ್ಲ ಸಾಮರ್ಥ್ಯವಿದೆ. ಇದು ಅತ್ಯಂತ ವೇಗದ, ಸುರಕ್ಷಿತವಾದ ಮತ್ತು ಸಮರ್ಥ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸುತ್ತದೆ. ಲಡಾಖ್‌ನಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದ್ದು, ಇದು ದೂರ, ದುರ್ಗಮ ಪ್ರದೇಶಗಳಲ್ಲಿನ ಡಿಜಿಟಲ್ ಅಂತರವನ್ನು ತಗ್ಗಿಸಬಲ್ಲದು. ಅದರೊಡನೆ ಲೈಫೈ ತಂತ್ರಜ್ಞಾನ ಶಿಕ್ಷಣ, ಆರೋಗ್ಯ ಹಾಗೂ ವ್ಯವಹಾರಗಳಲ್ಲಿ ಹೊಸ ಸಾಧ್ಯತೆಗಳನ್ನು ತರಬಲ್ಲದು. ಹೆಚ್ಚಿನ ಅಭಿವೃದ್ಧಿ ಮತ್ತು ಬಳಕೆಯ ಮೂಲಕ, ಲೈಫೈ ಮುಂದಿನ ದಿನಗಳಲ್ಲಿ ವೈರ್‌ಲೆಸ್ ಸಂವಹನದಲ್ಲಿ ಮೇಲ್ಪಂಕ್ತಿ ಹಾಕಿ, ಸಂಪರ್ಕಿತ ಭವಿಷ್ಯದಲ್ಲಿ ಮಿನುಗುತಾರೆಯಾಗಬಹುದು.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

click me!