ಅಗ್ಗ ಅಂದ್ರೆ ಇಷ್ಟೊಂದು ಅಗ್ಗನಾ! ಅದ್ಯಾವಾ ಸ್ಮಾರ್ಟ್ ಫೋನಪ್ಪಾ?

By Web Desk  |  First Published Mar 7, 2019, 7:41 PM IST

ಸ್ಮಾರ್ಟ್‌ಫೋನ್ ಬಳಕೆದಾರರ ಅವಶ್ಯಕತೆಗಳು ಬೇರೆ ಬೇರೆ.  ಒಬ್ಬರ ಅವಶ್ಯಕತೆ ಲಕ್ಷಾಂತರ ರೂ. ಬೆಳೆಬಾಳುವ ಫೋನಿನಲ್ಲಿ ಪೂರ್ತಿಯಾದರೆ, ಇನ್ನೊಬ್ಬರಿಗೆ ಸಾವಿರಾರು ರೂ. ಹ್ಯಾಂಡ್ ಸೆಟ್ ಸಾಕು. Lava ಕಂಪನಿಯು ಅಗ್ಗದ ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ವಿವರ...


ಭಾರತೀಯ ಹ್ಯಾಂಡ್‌ಸೆಟ್‌ ಕಂಪೆನಿ ಲಾವಾ,  Z40 ಆವೃತ್ತಿ ಮೊಬೈಲನ್ನು ಬಿಡುಗಡೆ ಮಾಡಿದೆ. 

2250 mAh ಬ್ಯಾಟರಿ ಸಾಮರ್ಥ್ಯವಿರುವ ಈ ಫೋನ್‌ನ ಸೌಂಡ್‌ ಗುಣಮಟ್ಟ ಬಹಳ ಚೆನ್ನಾಗಿದೆ, ಎಂಬುವುದು ಕಂಪನಿಯ ಭರವಸೆ. ಸಹಜವಾಗಿ ಮ್ಯೂಸಿಕ್ ಪ್ರಿಯರಿಗೆ ಇದು ಆಕರ್ಷಿಸುವ ವಿಚಾರ.  

Tap to resize

Latest Videos

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಭೀಕರ ಕೊಲೆ: Opportunity ಕಳೆದುಕೊಂಡ ಅಂಗಾರಕ!

Lava Z40 ಫೋನಿನಲ್ಲಿ ಆ್ಯಂಡ್ರಾಯ್ಡ್ 8.1 ಒರಿಯೊ ಆಪರೇಟಿಂಗ್ ಸಿಸ್ಟಮ್ ಇದ್ದು, 1 GB RAM ಹಾಗೂ 8 GB ROM ಇದೆ. 64 GBಯವರೆಗೂ ಸ್ಟೋರೇಜ್‌ ಸೌಲಭ್ಯವಿದೆ. ಈ ಫೋನ್ ಕಪ್ಪು ಹಾಗೂ ಗೋಲ್ಡನ್‌ ಕಲರ್‌ನಲ್ಲಿ ಲಭ್ಯವಿದೆ.

ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ಬಳಸುವವರಿಗೆ ಹೇಳಿಮಾಡಿಸಿದ ಮೊಬೈಲ್‌ ಇದು. ಎಲ್ಲ ಆಪ್ಷನ್‌ಗಳೂ ಸರಳವಾಗಿವೆ. ಬೇಗ ಸ್ಮಾರ್ಟ್‌ಫೋನ್ ಬಳಕೆಯನ್ನು ಕಲಿಯಬಹುದು. 

2GB ಫ್ರಂಟ್‌ ಕ್ಯಾಮೆರಾ ಹಾಗೂ 2GB ಮೇನ್‌ ಕ್ಯಾಮೆರಾ ಇದರಲ್ಲಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ₹3499 ರು. ಮಾತ್ರ!

ಇದನ್ನೂ ಓದಿ: ಭಾರತದ ಮೊಬೈಲ್‌ ಡೇಟಾ ವಿಶ್ವದಲ್ಲೇ ಅಗ್ಗ!

click me!