Ryugu ಕ್ಷುದ್ರಗ್ರಹದ ನೆಲ ತಲುಪಿದ ಜಪಾನ್ ನೌಕೆ| ಜಪಾನ್ ನ ಹಯಾಬೂಜಾ-2 ನೌಕೆ ಯಶಸ್ವಿ ಅಭಿಯಾನ| Ryugu ಕ್ಷುದ್ರಗ್ರಹದ ಸ್ಯಾಂಪಲ್ ಶೇಖರಿಸಿದ ಹಯಾಬೂಜಾ-2 ನೌಕೆ| ಹಯಾಬೂಜಾ-2 ನೌಕೆಯ ವಿಡಿಯೋ ಬಿಡುಗಡೆ ಮಾಡಿದ ಜಪಾನ್ ಖಗೋಳ ಸಂಸ್ಥೆ|
ಟೊಕಿಯೋ(ಮಾ.07): ಕ್ಷುದ್ರಗ್ರಹಗಳ ಬೆನ್ನು ಬಿದ್ದಿರುವ ವಿಶ್ವದ ಖಗೋಳ ಸಮುದಾಯ, ಒಂದಾದ ಮೇಲೊಂದರಂತೆ ಕ್ಷುದ್ರಗ್ರಹಗಳ ಸಮೀಪ ತಲುಪುತ್ತಿವೆ. ಅದರಂತೆ ಜಪಾನ್‌ನ ಖಗೋಳ ಸಂಸ್ಥೆಯ ಹಯಾಬುಜಾ-2 ನೌಕೆ Ryugu ಕ್ಷುದ್ರಗ್ರಹದ ನೆಲ ತಲುಪಿದೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಜಪಾನ್ ಖಗೋಳ ಸಂಸ್ಥೆ, ಹಯಾಬೂಜಾ-2 ನೌಕೆ Ryugu ಕ್ಷುದ್ರಗ್ರಹದ ನೆಲದಿಂದ ಸ್ಯಾಂಪಲ್ ಶೇಖರಿಸಿರುವ ದೃಶ್ಯ ಸೆರೆಯಾಗಿದೆ.
ಕಳೆದ ಫೆ.22ರಂದು Ryugu ಕ್ಷುದ್ರಗ್ರಹ ತಲುಪಿದ್ದ ಹಯಾಬೂಜಾ-2 ನೌಕೆ, ಕ್ಷುದ್ರಗ್ರಹದ ನೆಲದ ಆಳವನ್ನು ಸ್ಫೋಟಿಸಿ ಅಲ್ಲಿಂದ ಸ್ಯಾಂಪಲ್ ಶೇಖರಿಸಿತ್ತು. ಇನ್ನು ನೌಕೆ ತಲುಪಿದ ನೆಲವನ್ನು ಟಮಟೆಬಾಕೋ ಎಂದು ಹೆಸರಿಸಲಾಗಿದ್ದು, ಯುರೇಶಿಮಾ ಪ್ರದೇಶದಲ್ಲಿ ದೊರೆತಿದ್ದ ರಹಸ್ಯ ಬಾಕ್ಸ್ ನ ಹೆಸರು ಇದಾಗಿದೆ.