ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!

By Web Desk  |  First Published Sep 21, 2019, 7:01 PM IST
  • ಬೆಂಗಳೂರಿನಲ್ಲಿ ತನ್ನ ಮೂರನೇ ಎಕ್ಸ್‌ಪೀರಿಯನ್ಸ್ ಸ್ಟೋರ್ ಆರಂಭಿಸಿದ ಒನ್‍ಪ್ಲಸ್
  • ಕೋರಮಂಗಲದಲ್ಲಿರುವ ಫೋರಂ ಮಾಲ್‍ನಲ್ಲಿ ನೂತನ ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್
  • ಈ ಮಳಿಗೆಗೆ ಭೇಟಿ ನೀಡಲಿರುವ ಗ್ರಾಹಕರಿಗೆ ಒನ್‌ಪ್ಲಸ್ ನೀಡುತ್ತಿದೆ ಹಲವು ಆಫರ್ 

ಬೆಂಗಳೂರು (ಸೆ. 21): ಹೊಸಪೀಳಿಗೆಯ ಮಂದಿ ಆನ್ ಲೈನ್ ಮೂಲಕ ಶಾಪಿಂಗ್ ಮಾಡಿದ್ರೂ, ಆ ಉತ್ಪನ್ನವನ್ನು ಒಮ್ಮೆ ಕಣ್ಣಾರೆ ನೋಡ್ಬೇಕು, ಕೈಯಾರೆ ಒಮ್ಮೆ ಬಳಸಬೇಕು, ಆ ಬಳಿಕ ಖರೀದಿಸಿದ್ರೆ ಒಳ್ಳೆದು ಎಂಬ ಹಂಬಲ ಇದ್ದೇ ಇರುತ್ತೆ. ಎಷ್ಟೆಂದರೂ, ಖರೀದಿಸಿ ವಾಪಾಸು ಮಾಡುವ ಕಿರಿಕಿರಿ ತಪ್ಪಿದರೆ ಒಳ್ಳೆಯದಲ್ವಾ?   

ವಿಶೇಷವಾಗಿ ದುಬಾರಿ ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಇಂತಹ ಒಂದು ಎಕ್ಸ್‌ಪೀರಿಯನ್ಸ್ ಕೇಂದ್ರಗಳಿದ್ದರೆ ಹೇಗೆ? ಹೌದು, ಪ್ರಮುಖ ಮೊಬೈಲ್ ತಯಾರಕ ಕಂಪನಿ ಒನ್‌ಪ್ಲಸ್ ಇದೀಗ ಬೆಂಗಳೂರಿನಲ್ಲಿ ನೂತನ ಎಕ್ಸ್‌ಪೀರಿಯನ್ಸ್ ಸೆಂಟರ್ ಒಂದನ್ನು ಆರಂಭಿಸಿದೆ. 

Latest Videos

undefined

ಕೋರಮಂಗಲದಲ್ಲಿರುವ ಫೋರಂ ಮಾಲ್‍ನಲ್ಲಿ ನೂತನ ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರನ್ನು ಆರಂಭಿಸಿದೆ. ಈ ಮಳಿಗೆಗೆ ಭೇಟಿ ನೀಡಲಿರುವ ಗ್ರಾಹಕರಿಗೆ ಹಲವು ಆಫರ್ ಕೂಡಾ ಇದೆ.  

●ಒನ್‍ಪ್ಲಸ್ 7 ಮತ್ತು ಒನ್‍ಪ್ಲಸ್ 7 ಪ್ರೊ ಖರೀದಿಯ ಮೇಲೆ 2000 ರೂ.ಗಳ ಎಕ್ಸ್‌ಚೇಂಜ್ ಬೋನಸ್
●ಯಾವುದೇ ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಖರೀದಿಸಿದರೆ ನೋ ಕಾಸ್ಟ್ ಇಎಂಐ ಅವಕಾಶ
●ಸೆಪ್ಟೆಂಬರ್ 21 ಮತ್ತು 22, 2019ರಂದು ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಖರೀದಿಸುವ ಗ್ರಾಹಕರಿಗೆ ಒಂದು ಬಾರಿ ಉಚಿತ ಸ್ಕ್ರೀನ್ ರಿಪ್ಲೇಸ್‍ಮೆಂಟ್ ಅವಕಾಶ.

ಇದನ್ನೂ ಓದಿ | ಮೊಬೈಲ್ ಪ್ರಿಯರ ನಿದ್ದೆ ಗಾನ್! ಮಾರುಕಟ್ಟೆಗೆ ಬರುತ್ತಿದೆ Oneplus ಹೊಸ ಫೋನ್!

ಬೆಂಗಳೂರಿನಲ್ಲಿ ಇದು ಒನ್‍ಪ್ಲಸ್‍ನ ಮೂರನೇ ಎಕ್ಸ್‌ಪೀರಿಯನ್ಸ್ ಸ್ಟೋರ್ ಆಗಿದ್ದು, 2020ರ ಹೊತ್ತಿಗೆ ಸಂಸ್ಥೆ 50 ನಗರಗಳಲ್ಲಿ 100 ಈ ರೀತಿಯ ಎಕ್ಸ್‌ಪೀರಿಯನ್ಸ್ ಸ್ಟೋರ್ ಗಳನ್ನು ನಡೆಸುವ ಗುರಿ ಹೊಂದಿದೆ. ಕಂಪನಿ ಭಾರತದಲ್ಲಿ ಸಂಪೂರ್ಣ ನೂತನವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಇತ್ತೀಚೆಗೆ ತೆರೆದಿದೆ. 

 ಜೊತೆಗೆ 2ನೇ ಹಂತದ ನಗರಗಳ ಮೇಲೆ ಗಮನ ಕೇಂದ್ರೀಕರಿಸಿರುವ ಸಂಸ್ಥೆ ದೇಶದಲ್ಲಿ 30ಕ್ಕೂ ಹೆಚ್ಚಿನ ಪ್ರತ್ಯೇಕ ಮಳಿಗೆಗಳು, ಸುಮಾರು 70 ಸೇವಾ ಕೇಂದ್ರಗಳು, 2000ಕ್ಕೂ ಹೆಚ್ಚಿನ ಆಫ್‍ಲೈನ್ ಮಳಿಗೆಗಳನ್ನು ಹೊಂದಿದೆ. 

ಮುಂಬರುವ ವರ್ಷಗಳಲ್ಲಿ ಈ ಸೌಲಭ್ಯದ ಮೇಲೆ 1000 ಕೋಟಿ ರೂ. ಹೂಡಿಕೆ ನಡೆಸುವ ಗುರಿ ಹೊಂದಿದೆಯಲ್ಲದೆ, ಕೃತಕ ಬುದ್ಧಿವಂತಿಕೆ, 5G ತಂತ್ರಜ್ಞಾನ, ಮೆಷಿನ್ ಲರ್ನಿಂಗ್‍ಗಳ ಅಭಿವೃದ್ಧಿಯ ಗುರಿ ಹೊಂದಿದೆ, ಎಂದು ಸಂಸ್ಥೆಯು ಹೇಳಿದೆ.


 
ಒನ್‍ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್ವಾಲ್ ಮಾತನಾಡಿ, "ಸಮುದಾಯಚಾಲಿತ ತಂತ್ರಜ್ಞಾನ ಬ್ರಾಂಡ್ ಆಗಿ ನಮ್ಮ ಸಮುದಾಯ ಸದಸ್ಯರಿಗೆ, ನಮ್ಮ ಉತ್ಪನ್ನಗಳನ್ನು ಅವರ ಮನೆ ಬಾಗಿಲಲ್ಲಿ ಅನುಭವಿಸುವ ಅನುಕೂಲ ನೀಡಲು ನಾವು ಇಚ್ಛಿಸುತ್ತೇವೆ. ಬೆಂಗಳೂರಿನಲ್ಲಿ ನಮ್ಮ ನೂತನ ಮಳಿಗೆಯೊಂದಿಗೆ ಒನ್‍ಪ್ಲಸ್ ಗ್ರಾಹಕರು ಸಂಸ್ಥೆಯ ನಂಬಲಾಗದ ತಂತ್ರಜ್ಞಾನವನ್ನು ಕಣ್ಣಾರೆ ಅನುಭವಿಸಬಹುದಾಗಿರುತ್ತದೆ’’ ಎಂದರು.

click me!