ಏಲಿಯನ್ ಲೈಫ್ ಕುರುಹು?: ಶಂಕೆ ಮೂಡಿಸಿದ ನಕ್ಷತ್ರದ ಬೆಳಕಿನ ಹರಿವು!

By nikhil vkFirst Published Dec 12, 2019, 4:14 PM IST
Highlights

ಏಲಿಯನ್ ಜಗತ್ತಿನ ಹುಡುಕಾಟದಲ್ಲಿರುವ ಖಗೋಳ ಕ್ಷೇತ್ರ| ಅಪರೂಪದ ನಕ್ಷತ್ರ ಪತ್ತೆ ಹಚ್ಚಿದ್ದ ನಾಸಾದ ಕೆಪ್ಲರ್ ಟೆಲಿಸ್ಕೋಪ್| KIC 8462852 ನಕ್ಷತ್ರದ ಬೆಳಕಿನ ಪ್ರತಿಫಲನದಲ್ಲಿ ವ್ಯತ್ಯಾಸ| ನಕ್ಷತ್ರದ ಸುತ್ತ ಭೂಮಿಯನ್ನು ಹೋಲು ಗ್ರಹದ ಇರುವಿಕೆಯ ಶಂಕೆ| ’ಏಲಿಯನ್ ಜೀವಿಗಳ ಬೃಹತ್ ಕಾಮಗಾರಿಗಳ ಪರಿಣಾಮ ನಕ್ಷತ್ರದ ಬೆಳಕಿನಲ್ಲಿ ವ್ಯತ್ಯಾಸ’| ಪೆನ್ ಸ್ಟೇಟ್ ವಿವಿ ಪ್ರೋಫೆಸರ್ ಜೇಸನ್ ರೇ ವಾದ| KIC 8462852 ನಕ್ಷತ್ರದ ಬೆಳಕಿನ ಪ್ರತಿಫಲನದ ವ್ಯತ್ಯಾಸಕ್ಕೆ ಕಾರಣವೇನು?| ನಕ್ಷತ್ರದ ಸುತ್ತಲೂ ಕ್ಷುದ್ರಗ್ರಹಗಳ ಇರುವಿಕೆಯ ಶಂಕೆ| ಭೂಮಿಯಿಂದ 1,400 ಜ್ಯೋತಿರ್ವರ್ಷ ದೂರ ಇರುವ KIC 8462852 ನಕ್ಷತ್ರ| 

ವಾಷಿಂಗ್ಟನ್(ಡಿ.12): ಮಾನವ ಆಗಸದತ್ತ ದೃಷ್ಟಿ ನೆಟ್ಟಾಗಿನಿಂದ ಬ್ರಹ್ಮಾಂಡದ ಮತ್ತೊಂದು ಮೂಲೆಯಲ್ಲಿ ತನ್ನಂತೆಯೇ ಇರಬಹುದಾದ ಜೀವಿಗಳನ್ನು ಸಂಶೋಧಿಸುತ್ತಲೇ ಇದ್ದಾನೆ.

ಬ್ರಹ್ಮಾಂಡದ ಯಾವುದಾದರೂ ನಕ್ಷತ್ರಕ್ಕೆ ಭೂಮಿಯನ್ನು ಹೋಲುವ ಗ್ರಹವಿದ್ದು, ಅಲ್ಲಿ ಜೀವಿಗಳಿರಬಹುದು ಎಂಬ ಆಶಾಭಾವನೆಯಲ್ಲಿ ಅಸಂಖ್ಯಾತ ಸಂಶೋಧನೆಗಳನ್ನು ಮಾನವ ನಡೆಸುತ್ತಲೇ ಬಂದಿದ್ದಾನೆ.

ಆದರೆ ಇದುವರೆಗೂ ಭೂಮಿಯನ್ನು ಹೊರತುಪಡಿಸಿ ಮತ್ತೊಂದು ಗ್ರಹದಲ್ಲಿ ಜೀವಿಗಳಿರಬಹುದಾದ ಕುರುಹು ಇದುವರೆಗೂ ಪತ್ತೆಯಾಗಿಲ್ಲ.

ವಾಯೇಜರ್ ಡಿಸ್ಕ್ ಏಲಿಯನ್ ಪಾಲಾದರೆ ಸರ್ವನಾಶ?

ಆದರೆ 2015ರಲ್ಲಿ ನಾಸಾದ ಕೆಪ್ಲರ್ ಟೆಲಿಸ್ಕೋಪ್ ಪತ್ತೆ ಹಚ್ಚಿರುವ KIC 8462852 ನಕ್ಷತ್ರ, ಏಲಿಯನ್ ಜಗತ್ತಿನ ಕುರಿತಾದ ಮಾನವನ ಆಶಾವಾದಕ್ಕೆ ಪುಷ್ಠಿ ನೀಡಿದೆ.

ಹೌದು, ಭೂಮಿಯಿಂದ ಸುಮಾರು 1,400 ಜ್ಯೋತಿವರ್ಷ ದೂರದಲ್ಲಿರುವ KIC 8462852 ಅಥವಾ ಟ್ಯಾಬಿ ಸ್ಟಾರ್ ಜೀವಿಗಳಿರಬಹುದಾದ ಗ್ರಹವೊಂದನ್ನು ಹೊಂದಿರುವುದನ್ನು ಕೆಪ್ಲರ್ ಟೆಲಿಸ್ಕೋಪ್ ಪತ್ತೆ ಹಚ್ಚಿತ್ತು.

KIC 8462852 ನಕ್ಷತ್ರದ ಬೆಳಕಿನ ಹೊರಸೂಸುವಿಕೆಯಲ್ಲಾಗುವ ಬದಲಾವಣೆಯ ಪರಿಣಾಮ, ಈ ನಕ್ಷತ್ರವನ್ನು ಭೂಮಿಯನ್ನು ಹೋಲುವ ಗ್ರಹವೊಂದು ಸುತ್ತುತ್ತಿರಬಹುದು ಎಂದು ಅಂದಾಜಿಸಲಾಗಿತ್ತು.

10 ವರ್ಷದಲ್ಲಿ ಏಲಿಯನ್ ಜಗತ್ತಿನೊಂದಿಗೆ ಸಂಪರ್ಕ: ನಾಸಾ!

ಗ್ರಹವೊಂದು ನಕ್ಷತ್ರದ ಎದುರಿನಿಂದ ಹಾದು ಹೋದಾಗ ನಿರ್ದಿಷ್ಟ ಪ್ರಮಾಣದ ಬೆಳಕನ್ನು ತಡೆಹಿಡಿಯುತ್ತದೆ. ಅದರಂತೆ KIC 8462852 ನಕ್ಷತ್ರದ ಬೆಳಕು ಕೂಡ ನಿರ್ದಿಷ್ಟ ಕಾಲಮಾನಗಳಲ್ಲಿ ವ್ಯತ್ಯಾಸವಾಗುವುದನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು.

ಸಿಗ್ನಸ್ ತಾರಾವಲಯದಲ್ಲಿರುವ KIC 8462852 ನಕ್ಷತ್ರದ ಬೆಳಕಿನ ಪ್ರತಿಫಲನದಲ್ಲಿ ಒಟ್ಟು ಶೇ.22ರಷ್ಟು ವ್ಯತ್ಯಾಸವಾಗುವುದು ಕೆಪ್ಲರ್ ಟೆಲಿಸ್ಕೋಪ್ ಅಧ್ಯಯನದಿಂದ ಬಹಿರಂಗವಾಗಿದೆ.

ಈ ಬೆಳಕಿನ ವ್ಯತ್ಯಾಸಕ್ಕೆ ಹಲವು ವಿಜ್ಞಾನಿಗಳು ತಮ್ಮದೇ ಆದ ಕಾರಣ ನೀಡಿದರು. ಕೆಲವರು ಬೃಹತ್ ಗ್ರಹವೊಂದು ಈ ನಕ್ಷತ್ರವನ್ನು ಸುತ್ತುತ್ತಿದೆ ಎಂದು ಹೇಳಿದರೆ, ಮತ್ತೆ ಕೆಲವರು ಕ್ಷುದ್ರಗ್ರಹಗಳು ಈ ನಕ್ಷತ್ರದ ಸುತ್ತಲೂ ಹರಿಡಿರುವುದರಿಂದ ಬೆಳಕಿನ ಪ್ರತಿಫಲನದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಹೇಳಿದರು.

ಆದರೆ ಪೆನ್ ಸ್ಟೇಟ್ ವಿವಿ ಪ್ರೋಫೆಸರ್ ಜೇಸನ್ ರೇ KIC 8462852 ನಕ್ಷತ್ರದ ಬೆಳಕಿನ ಪ್ರತಿಫಲನದ ವ್ಯತ್ಯಾಸಕ್ಕೆ ತಮ್ಮದೇ ಆದ ಕಾರಣ ನೀಡಿದರು. KIC 8462852 ನಕ್ಷತ್ರ ಸುತ್ತುತ್ತಿರುವ ಗ್ರಹದಲ್ಲಿ ಜೀವಿಗಳಿದ್ದು, ಈ ಜೀವಿಗಳ ಬೃಹತ್ ಕಾಮಗಾರಿಗಳು ನಕ್ಷತ್ರದ ಬೆಳಕನ್ನು ತಡೆ ಹಿಡಿದಿವೆ ಎಂದು ಜೇಸನ್ ರೇ ವಾದಿಸಿದರು.

ಸ್ವಲ್ಪ ತಡ್ಕಳ್ಳಿ: ನಾಸಾ ಏಲಿಯನ್ ತೋರಿಸುತ್ತೆ ನೋಡ್ಕಳ್ಳಿ!

ಆದರೆ ಮುಖ್ಯಧಾರೆಯ ವಿಜ್ಞಾನಿಗಳು ಜೇಸನ್ ರೇ ಅವರ ವಾದವನ್ನು ನಿರಾಕರಿಸಿದ್ದು, KIC 8462852 ನಕ್ಷತ್ರದ ಬೆಳಕಿನ ಪ್ರತಿಫಲನದ ವ್ಯತ್ಯಾಸಕ್ಕೆ ಕ್ಷುದ್ರಗ್ರಹ ಅಥವಾ ಗ್ರಹಗಳ ಚಲನೆ ಕಾರಣವಿರಬಹುದು ಎಂದು ಅಂದಾಜಿಸಿದರು.

ಅದೆನೇ ಇರಲಿ 1890ರಿಂದಲೂ ಖಗೋಳಶಾಸ್ತ್ರಜ್ಞರ ಗಮನ ಸೆಳೆದಿರುವ KIC 8462852 ನಕ್ಷತ್ರ, ತನ್ನ ಬೆಳಕಿನ ಪ್ರತಿಫಲನದಲ್ಲಿನ ವ್ಯತ್ಯಾಸದ ರಹಸ್ಯವನ್ನು ತನ್ನಲ್ಲಿಯೇ ಇಟ್ಟುಕೊಂಡಿದೆ.

click me!