ಮಂಗಳನಲ್ಲಿ ದುಂಡಾದ ರಚನೆಗಳು: ಪ್ರತೀ ಕಲ್ಲಿನಲ್ಲೂ ರಹಸ್ಯ ಮಾಹಿತಿಗಳು!

By nikhil vk  |  First Published Dec 11, 2019, 5:18 PM IST

ನಮ್ಮ ನೆರೆಯ ಮಂಗಳ ಗ್ರಹ ನಿಜಕ್ಕೂ ಕುತೂಹಲಗಳ ಆಗರ| ಅಂಗಾರಕನ ನೆಲ ಬಗೆದಷ್ಟೂ ಕುತೂಹಲಕಾರಿ ಸಂಗತಿಗಳು| ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ| ಗ್ರಹದ ಮೇಲ್ಮೈಯಲ್ಲಿರುವ ದುಂಡು ಆಕಾರದ ರಚನೆಗಳು|  ಕಲ್ಲು ರಚನೆಗಳ ಫೋಟೋ ಕ್ಲಿಕ್ಕಿಸಿದ ನಾಸಾದ ಕ್ಯೂರಿಯಾಸಿಟಿ ರೋವರ್| ನೀರಿನ ಅಂಶಗಳಿರುವ ಕಲ್ಲು ರಚೆನಗಳಿರಬಹುದೆಂಬ ಶಂಕೆ| 


ವಾಷಿಂಗ್ಟನ್(ಡಿ.11): ನಮ್ಮ ನೆರೆಯ ಮಂಗಳ ಗ್ರಹ ನಿಜಕ್ಕೂ ಕುತೂಹಲಗಳ ಆಗರ. ಅಂಗಾರಕನ ನೆಲ ಬಗೆದಷ್ಟೂ ಕುತೂಹಲಕಾರಿ ಸಂಗತಿಗಳು ಹೊರಬರುತ್ತಲೇ ಇವೆ.

ಅದರಂತೆ ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಕ್ಷಣ ಕ್ಷಣಕ್ಕೂ ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತಲೇ ಇದೆ. ಅದರಲ್ಲೂ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳನ ಕುರಿತು ಮತ್ತೊಂದು ಕುತೂಹಲಕಾರಿ ಸಂಗತಿ ಹೊರಗೆಡವಿದೆ.

Latest Videos

undefined

ಬೆಳಗಿನ ಸೊಬಗು: ಅಂಗಾರಕನ ಅಂಗಕ್ಕೆ ಸೂರ್ಯ ಕಿರಣಗಳ ಮೆರಗು!

ಕಳೆದ ಡಿ.05ರಂದು ಕ್ಯೂರಿಯಾಸಿಟಿ ರೋವರ್‌ ಮಂಗಳ ಗ್ರಹದ ಮೇಲ್ಮೈಯಲ್ಲಿರುವ ದುಂಡು ಆಕಾರದ ವಿಚಿತ್ರ  ರಚನೆಗಳ ಫೋಟೋ ಕ್ಲಿಕ್ಕಿಸಿದೆ. ನೋಡಲು ಬಿಸ್ಕೆಟ್ ತುಂಡಿನಂತೆ ಕಾಣುವ ಈ ಕಲ್ಲು ರಚನೆಗಳು ಭೂವಿಜ್ಞಾನಿಗಳ ಕುತೂಹಲ ಕೆರಳಿಸಿದೆ.

NASA Curiosity rover snaps an epic close-up of some unusual Mars rocks https://t.co/AmFUf8uhFG pic.twitter.com/m1Jrx1158F

— CNET (@CNET)

ಈ ಕುರಿತು ಮಾಹಿತಿ ನೀಡಿರುವ ಕ್ಯೂರಿಯಾಸಿಟಿ ರೋವರ್ ತಂಡದ ಭೂ ವಿಜ್ಞಾನಿ ಸುಸಾನೆ ಶುವೆಂಜರ್, ಇವು ನೀರಿನ ಅಂಶಗಳಿರುವ ಕಲ್ಲು ರಚೆನಗಳಿರಬಹುದು ಎಂದು ಅಂದಾಜಿಸಿದ್ದಾರೆ.

ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

ಈಗಾಗಲೇ ಮಂಗಳ ಗ್ರಹದ ಗಾಲೆ ಕ್ರೇಟರ್‌ ಕುರಿತು ಹಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿರುವ ಕ್ಯೂರಿಯಾಸಿಟಿ ರೋವರ್, ಇದೀಗ ಈ ವಿಚಿತ್ರ ಕಲ್ಲು ರಚನೆಗಳ ಫೋಟೋ ಕಳುಹಿಸಿ ಖಗೋಳಶಾಸ್ತ್ರಜ್ಞರನ್ನು ಅಚ್ಚರಿಗೆ ದೂಡಿದೆ.

click me!