*Infinix InBook X1 ಸರಣಿ ಮೊದಲ ಲ್ಯಾಪ್‌ಟಾಪ್‌ಗಳು
*ವಿಭಿನ್ನ ಪ್ರೊಸೆಸರ್‌ಗಳೊಂದಿಗೆ ಮೂರು ಹೊಸ ವೆರಿಯಂಟ್
*Windos 11 ಆಪರೇಟಿಂಗ್ : ಬೆಲೆ ರೂ 35,999 ರಿಂದ ಪ್ರಾರಂಭ
Infinix ಬುಧವಾರ (ಡೆಸೆಂಬರ್ 8) ತನ್ನ Infinix InBook X1 ಸರಣಿ ಮೊದಲ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯು ವಿಭಿನ್ನ ಪ್ರೊಸೆಸರ್‌ಗಳು ಮತ್ತು ಸ್ಫೇಸಿಫಿಕೇಶನ್‌ಗಳೊಂದಿಗೆ ಮೂರು ಹೊಸ ವೆರಿಯಂಟ್‌ಗಳನ್ನು ಒಳಗೊಂಡಿದೆ. Infinix InBook X1 i3 ಮತ್ತು i5 ಪ್ರೊಸೆಸರ್ ಜತೆಗೆ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಹಾಗೂ ಮೂರನೇ ವೇರಿಯಂಟ್ InBook X1 Pro, Intel Core i7 ಪ್ರೊಸೆಸರ್ ಹೊಂದಿದೆ. ಮೂರೂ ಹೊಸ ಲ್ಯಾಪ್‌ಟಾಪ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ.
Infinix InBook X1 ಬೆಲೆ ಮತ್ತು ಲಭ್ಯತೆ
*8GB RAM/ 256GB SSD ಸ್ಟೋರೇಜ್ ಜತೆಗೆ ಬರುವ Intel Core i3 ಪ್ರೊಸೆಸರ್ ಹೊಂದಿರುವ Infinix InBook X1 ಬೆಲೆ ರೂ 35,999 ರಿಂದ ಪ್ರಾರಂಭವಾಗುತ್ತದೆ.
*8GB RAM ಮತ್ತು 512GB ಸ್ಟೋರೇಜ್ ಜತೆಗೆ ಬರುವ Intel Core i5 ಪ್ರೊಸೆಸರ್ ಹೊಂದಿರುವ Infinix InBook X1 45,999 ರೂ. ಬೆಲೆಗೆ ಲಭ್ಯವಿದೆ.
*16GB RAM ಮತ್ತು 512GB ಸ್ಟೋರೇಜ್ ಜತೆಗೆ ಬರುವ Intel Core i7 ಪ್ರೊಸೆಸರ್ ಜೊತೆಗೆ Infinix InBook X1 Pro 55,999 ರೂ ಬೆಲೆಗೆ ಲಭ್ಯವಿದೆ .
*ಇನ್‌ಬುಕ್ ಸರಣಿಯ ಲ್ಯಾಪಟಾಪ್‌ಗಳು ಡಿಸೆಂಬರ್ 15 ರಿಂದ ಮಾರಾಟವಾಗಲಿದ್ದು ಫ್ಲಿಪ್‌ಕಾರ್ಟ್‌ನಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ.
Infinix InBook X1: Specifications and Features
Infinix InBook X1 ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಮತ್ತು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ( 300 nits of peak brightness) 14ಇಂಚಿನ FHD IPS ಡಿಸ್ಪ್ಲೇಯನ್ನು ಹೊಂದಿದೆ.
*InBook X1 ಇಂಟೆಲ್ ಕೋರ್ i3 ನಲ್ಲಿ 1005G1 ಮತ್ತು Core i5 ನಲ್ಲಿ 1035G1 ಪ್ರೊಸೆಸರ್ ಇರಲಿದೆ.
*i3 ಮಾಡೆಲ್ 8GB LPDDR4X RAM ಮತ್ತು 256GB M.2 SSD ಸ್ಟೋರೆಜ್ ನೊಂದಿಗೆ ಬರಲಿದೆ.
*i5 ಮಾಡೆಲ್ 8GB LPDDR4X RAM ಮತ್ತು 512GB M.2 SSD ಸಂಗ್ರಹಣೆಯೊಂದಿಗೆ ಲಭ್ಯವಿರಲಿದೆ.
Smartphone Sales in 2021 ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್ ಖರೀದಿಯಲ್ಲಿ ಭಾರೀ ಏರಿಕೆ!
ಎರಡೂ ವೇರಿಯಂಟ್‌ಗಳಿಗೆ ಮುಂಭಾಗದಲ್ಲಿ 720p ವೆಬ್‌ಕ್ಯಾಮ್ ಹೊಂದಿದ್ದು ಇಂಟೆಲ್ UHD ಗ್ರಾಫಿಕ್ಸ್‌ನೊಂದಿಗೆ (Intel UHD graphics) ಇರಲಿದೆ. ಎರಡು 0.8W ಟ್ವೀಟರ್‌ಗಳು (tweeters) ಮತ್ತು ಡಾಲ್ಬಿ ಡಿಟಿಎಸ್ ಆಡಿಯೊ (Dolby DTS Audio) ಬೆಂಬಲದೊಂದಿಗೆ 1.5W ಸ್ಟಿರಿಯೊ ಸ್ಪೀಕರ್‌ಗಳ ಜೋಡಿಯೂ ಇದರಲ್ಲಿದೆ. ಲ್ಯಾಪ್‌ಟಾನಲ್ಲಿ ಎರಡು ಮೈಕ್ರೊಫೋನ್‌ಗಳಿದ್ದು ಇದು ಗುಣಮಟ್ಟದ ವೀಡಿಯೊ ಹಾಗೂ ಅಡಿಯೋ ಕಾಲ್‌ಗಳಿಗೆ ಸಹಾಯಕವಾಗಲಿದೆ.
ಸಂಪರ್ಕಕ್ಕಾಗಿ, ಬಳಕೆದಾರರು ಎರಡು USB 3.0 ಪೋರ್ಟ್‌ಗಳು, ಎರಡು USB-C ಪೋರ್ಟ್‌ಗಳು, HDMI 1.4 ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಜೊತೆಗೆ ಒಂದೇ USB 2.0 ಪೋರ್ಟ್ ಲ್ಯಾಪಟಾಪ್‌ನಲ್ಲಿರಲಿದೆ. ಜತೆಗೆ Wi-Fi 802.11ac ಮತ್ತು ಬ್ಲೂಟೂತ್ v5.1 ಗೆ ಸಹ ಕಂಪ್ಯಾಟಿಬಲ್ ಇದೆ.
Infinix InBook X1 Pro: Specifications and Features
Infinix InBook Pro, Intel Core i7 1065G7 ಪ್ರೊಸೆಸರ್ ಜೊತೆಗೆ 16GB LPDDR4X RAM ಮತ್ತು 512GB M.2 SSD ಸ್ಟೋರೆಜ್ ಜತೆಗೆ ಲಭ್ಯವಿದೆ. ಜತೆಗೆ ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ (Intel Iris Plus graphics) ಮತ್ತು ಮುಂಭಾಗದಲ್ಲಿ 720p HD ವೆಬ್‌ಕ್ಯಾಮ್ ಇರಲಿದೆ. Infinix InBook X1 ನಂತೆಯೇ ಲ್ಯಾಪ್‌ಟಾಪ್ ಡ್ಯುಯಲ್ ಮೈಕ್ರೊಫೋನ್ ಮತ್ತು ಡ್ಯುಯಲ್ ಸ್ಪೀಕರ್ ಸೆಟಪ್ ಹೊಂದಿದೆ.
Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ವಿಷಯ ಯಾವುದು ಗೊತ್ತಾ?
ಸಂಪರ್ಕಕ್ಕಾಗಿ ಎರಡು USB 3.0 ಪೋರ್ಟ್‌ಗಳು, ಎರಡು USB-C ಪೋರ್ಟ್‌ಗಳು, HDMI 1.4 ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಜೊತೆಗೆ ಒಂದೇ USB 2.0 ಪೋರ್ಟ್ ಲ್ಯಾಪ್‌ಟಾಪ್‌ನಲ್ಲಿರಲಿದೆ. X1 Pro Wi-Fi 802.11ac ಮತ್ತು Bluetooth v5.1 ಜೊತೆಗೆ WiFi 6 ಗೆ ಸಪೋರ್ಟ್ ಹೊಂದಿದೆ.
ಎಲ್ಲಾ ಮೂರು ಲ್ಯಾಪ್‌ಟಾಪ್‌ಗಳು 55Wh ಬ್ಯಾಟರಿಯನ್ನು ಹೊಂದಿದ್ದು 65W ಪವರ್ ಡೆಲಿವರಿ (Power Delivery) ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಮೂರು ಲ್ಯಾಪ್‌ಟಾಪ್‌ಗಳು ಸುಮಾರು 1.48Kg ತೂಕವಿದ್ದು 323.5×219.5×16.3mm ಆಯಾಮ ಹೊಂದಿವೆ.