*ಕೊರೋನಾ ಮಧ್ಯೆ ಆನಲೈನ್ ಶಾಪಿಂಗ್ ಮೊರೆ ಹೋದ ಗ್ರಾಹಕ
*ಶೇ 53 ರಷ್ಟು ಮೊಬೈಲ್‌ಗಳು ಆನಲೈನ್‌ನಲ್ಲಿ ಖರೀದಿ
*ವರ್ಕ್ ಫ್ರಾಮ್ ಹೋಮ್ ಬೆನ್ನಲ್ಲೇ ಹೆಚ್ಚಿದ ಆದಾಯ
*ಪ್ರಿಮಿಯಮ್ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಭಾರೀ ಹೆಚ್ಚಳ!
ನವದೆಹಲಿ(ಡಿ. 09): 2021ರ ಆರಂಭದಲ್ಲಿ ಕೊರೋನಾ ಮಹಾಮಾರಿ (Corona 2nd Wave) ಎರಡನೇ ಅಲೆ ದೇಶಾದ್ಯಂತ ಆರ್ಥಿಕತೆಗೆ (Economy) ಮಾರಕವಾಗಿ ಪರಿಣಮಿಸಿತ್ತು. ಕೊರೋನಾ ಲಾಕ್‌ಡೌನ್‌ನಿಂದಾಗಿ (Lock Down) ಸಾಕಷ್ಟು ಉದ್ಯಮಗಳು ನಷ್ಟವನ್ನು ಅನುಭವಿಸಿದ್ದವು. ಕೊರೋನಾ ನಿಯಮಗಳು ಜಾರಿಯಲ್ಲಿ ಇದ್ದ ಕಾರಣ ಗ್ರಾಹಕರು ಆನಲೈನ್ ಶಾಪಿಂಗ್ (Online Shopping) ಮೊರೆ ಹೋಗಿದ್ದರು. ಹೀಗಾಗಿ ಆನ್‌ಲೈನ್ ಮಾರುಕಟ್ಟೆ ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಈ ಬೆನ್ನಲ್ಲೇ 2021 ರಲ್ಲಿ ಭಾರತದಲ್ಲಿ ಮಾರಾಟವಾದ 50 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳನ್ನು (Smarth Phone Sale) ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ವರದಿಯೊಂದು ಹೇಳಿದೆ.
ಕಳೆದ ವರ್ಷ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮೊಬೈಲ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದವು. ಆದರೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಆನಲೈನ್ ಖರೀದಿ ಮೊರೆ ಹೋಗಿದ್ದರಿಂದ ಈ ವರ್ಷ 50% ಕ್ಕೂ ಹೆಚ್ಚು ಮಾರಾಟ ಅನ್‌ಲೈನ್‌ನಲ್ಲಿಯೇ ಆಗಿದೆ. ಕೊರೋನಾ ಪ್ರಭಾವ ಹಾಗೂ 2021 ರಲ್ಲಿ ಅದರ ಎರಡನೇ ಅಲೆಯ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ. ಗ್ರಾಹಕರು ಕಳೆದ ವರ್ಷಕ್ಕೆ ಹೋಲಿಸಿದರೆ 2021 ರಲ್ಲಿ ರೂ. 30,000 ಮತ್ತು ಹೆಚ್ಚಿನ ಬೆಲೆಯ ಪ್ರೀಮಿಯಂ (Premium) ವಿಭಾಗಗಳಿಗೆ ಸೇರಿದ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು (15 ಪ್ರತಿಶತ) ಖರೀದಿಸಿದ್ದಾರೆ ಎಂದು ವರದಿ ಹೇಳಿದೆ.
undefined
ಪ್ರಯಾಣದ ಮೇಲಿನ ನಿರ್ಬಂಧಗಳ ಇಫೇಕ್ಟ್!
ಕೌಂಟರ್‌ಪಾಯಿಂಟ್ (Counter Point) ರಿಸರ್ಚ್‌ನ ಮಾರುಕಟ್ಟೆ ಲೆನ್ಸ್ ಗ್ರಾಹಕ ಸಮೀಕ್ಷೆಯ ಪ್ರಕಾರ (Market Lens consumer survey), COVID-19 ಸಮಯದಲ್ಲಿ ಪ್ರಯಾಣದ ಮೇಲಿನ ನಿರ್ಬಂಧಗಳು ಅನೇಕ ಆಫ್‌ಲೈನ್ ಗ್ರಾಹಕರನ್ನು ಆನ್‌ಲೈನ್‌ನಲ್ಲಿ ಫೋನ್‌ಗಳನ್ನು ಖರೀದಿಸಲು ಒತ್ತಾಯಿಸಿದೆ. 2020 ರಲ್ಲಿ, ಶೇಕಡಾ 63 ರಷ್ಟು ಗ್ರಾಹಕರು ಆಫ್‌ಲೈನ್ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದರು ಹಾಗೂ ಶೇಕಡಾ 47 ರಷ್ಟು ಜನರು ಆನ್‌ಲೈನ್ ಮೂಲಕ ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಖರೀದಿಸಿದ್ದರು. ಆದರೆ 2021 ರಲ್ಲಿ ಶೇ 37ರಷ್ಟು ಮೊಬೈಲ್ ಆಫಲೈನ್ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೆ ಶೇ 53 ರಷ್ಟು ಮೊಬೈಲ್ ಆನಲೈನ್‌ನಲ್ಲಿ ಮಾರಾಟವಾಗಿವೆ.
ವರ್ಕ್ ಫ್ರಾಮ್ ಹೋಮ್ ಬೆನ್ನಲ್ಲೇ ಪಟ್ಟಣಗಳಿಗೆ ವಲಸೆ!
ಹೆಚ್ಚುವರಿಯಾಗಿ, "ವರ್ಕ್ ಫ್ರಾಮ್ ಹೋಮ್ ಬೆನ್ನಲ್ಲೇ ದೊಡ್ಡ ನಗರಗಳಿಂದ ಸಣ್ಣ ನಗರಗಳು ಮತ್ತು ಪಟ್ಟಣಗಳಿಗೆ ಕೆಲಸಗಾರರು ಹಿಂದಿರುಗಿದ ಕಾರಣ ಆನ್‌ಲೈನ್ ಶಾಪಿಂಗ್ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ" ಎಂದು ಸಂಶೋಧನಾ ಸಂಸ್ಥೆ ಹೇಳಿದೆ. ಇದಲ್ಲದೆ, ವಿಶೇಷ ಕೊಡುಗೆಗಳು, ವಿವಿಧ ಆಯ್ಕೆಗಳು ಮತ್ತು ಅಗ್ಗದ ಬೆಲೆಗಳು ಸ್ಮಾರ್ಟ್‌ಫೋನ್ ಖರೀದಿಗಾಗಿ ಆನ್‌ಲೈನ್ ಚಾನೆಲ್‌ಗಳ ಮೂಲಕ ಮೊಬೈಲ್ ಖರೀದಿಸುವಂತೆ ಜನರನ್ನು ಒತ್ತಾಯಿಸಿವೆ.
Kumar Mangalam Birla ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೊಬೈಲ್ ಉದ್ಯಮ!
ಕುತೂಹಲಕಾರಿಯಾಗಿ, ಸ್ಮಾರ್ಟ್‌ಫೋನ್‌ಗಳಲ್ಲಿನ ಮಾಹಿತಿಯ ಮೂಲದಲ್ಲಿ ಬದಲಾವಣೆಯೂ ಕಂಡುಬಂದಿದೆ. ಈ ವರ್ಷ ಸ್ಮಾರ್ಟ್‌ಫೋನ್ ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಗ್ರಾಹಕರು ಬಾಯಿಮಾತು ಮತ್ತು ಸ್ನೇಹಿತರು/ಕುಟುಂಬದ ಅವಲಂಬಿತರಾಗದೇ ಯೂಟ್ಯೂಬ್ (Youtube) ಮತ್ತು ಪ್ರಭಾವಿಗಳ (Influencers) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ವರದಿ ಹೇಳಿದೆ. ಅಂತೆಯೇ, ಸ್ಮಾರ್ಟ್‌ಫೋನ್ ಖರೀದಿ ನಿರ್ಧಾರಗಳನ್ನು ಮಾಡುವಾಗ ಆನ್‌ಲೈನ್ ವಿಮರ್ಶೆಗಳು ಮತ್ತು ಲೇಖನಗಳನ್ನು ಸಹ ಕಡೆಗಣಿಸಿ ಕಂಪ್ಯಾರೀಸನ್ ವೆಬ್‌ಸೈಟ್‌ಗಳು ಮತ್ತು ಟಿವಿ ಜಾಹೀರಾತುಗಳ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
Twitter Trends in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?
ವರ್ಕ್ ಫ್ರಾಮ್ ಹೋಮ್ ಆರಂಭವಾದಗಿನಿಂದ ಜನರು ಹೆಚ್ಚು ಉಳಿತಾಯ ಮಾಡಿದ್ದಾರೆ. ಹಾಗಾಗಿ ಪ್ರೀಮಿಯಂ ವಿಭಾಗಗಳಿಗೆ ಸೇರಿದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿ ತಿಳಿಸಿದೆ. “ವರ್ಚುವಲ್ ಕನೆಕ್ಟಿವಿಟಿಯ (Virtual Connectivity) ಏರಿಕೆಯೊಂದಿಗೆ ಸ್ಮಾರ್ಟ್‌ಫೋನ್ ಜೀವನದ ಅತ್ಯಗತ್ಯ ಭಾಗವಾಗಿದೆ. ಇದರ ಪರಿಣಾಮವಾಗಿ ಸ್ಮಾರ್ಟ್‌ಫೋನ್ ಬಳಕೆದಾರರು ಹಳೆಯ ಸ್ಮಾರ್ಟ್‌ಫೋನ್ ಬಿಟ್ಟು ಹೊಸ ಸ್ಮಾರ್ಟ್‌ಫೋನ್ ಖರೀದಿಸುವಾಗ ಹೆಚ್ಚಿನ ಬೆಲೆಯ ಬ್ರ್ಯಾಂಡ್‌ನಿಂದ ಖರೀದಿಸಲು ಬಯಸುತ್ತಾರೆ. ಇದು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ" ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಹೇಳಿದೆ.