Latest Videos

Oppo Find N: ಡಿ. 15 ರಂದು ಬಿಡುಗಡೆಗೆ ಸಿದ್ಧವಾಗಿದೆ ಒಪ್ಪೊ ಮೊದಲ ಫೋಲ್ಡೇಬಲ್ ಫೋನ್

By Suvarna NewsFirst Published Dec 10, 2021, 11:29 AM IST
Highlights

*Find N ಓಪ್ಪೋದ ಮೊದಲ ಫೋಲ್ಡೇಬಲ್ ಫೋನ್ 
*ಮುಂಬರುವ Inno Day 2021 ಈವೆಂಟ್‌ನಲ್ಲಿ ಬಿಡುಗಡೆ
*ನಾಲ್ಕು ವರ್ಷಗಳ ಸಂಶೋಧನೆ ನಂತರ ಮಾರುಕಟ್ಟೆಗೆ!

ಸಿಂಗಾಪೋರ್(ಡಿ. 10): ಒಪ್ಪೋನ ಮೊದಲ  ಫೋಲ್ಡೇಬಲ್ ಫೋನ್ (Foldable Phone) ಫೈಂಡ್ ಎನ್ (Find N) ಡಿಸೆಂಬರ್ 15 ರಂದು ಬಿಡುಗಡೆಯಾಗಲಿದೆ. ಕಂಪನಿಯ ಮುಂಬರುವ  ಇನ್ನೋ ಡೇ (Inno Day) ಈವೆಂಟ್‌ನ ಮೊದಲ ದಿನವಾದ ಡಿಸೆಂಬರ್ 15 ರಂದು ಬಿಡುಗಡೆ ಈ ಮೊಬೈಲ್‌ ಬಿಡುಗೆಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಹಲವು ತಿಂಗಳುಗಳಿಂದ ಚರ್ಚೆಗಳು ನಡೆಯಿತ್ತಿದ್ದು ಅಂತಿಮಾವಾಗಿ ಈಗ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಈ ಮೊಬೈಲ್‌ ಡೀಸೈನ್‌ ಮಾಡಿರುವ ವ್ಯಕ್ತಿ  ಪೀಟ್ ಲಾವ್ (Pete Lau) ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. "OPPO Find N ಇತ್ತೀಚೆಗೆ ನನ್ನ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ ಮತ್ತು ಡಿಸೆಂಬರ್ 15 ರಂದು INNO ಡೇಯಲ್ಲಿ ನಿಮ್ಮೊಂದಿಗೆ ಈ ಬಗ್ಗೆ ಇನ್ನಷ್ಟು ಹಂಚಿಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ!" ಎಂದು ಅವರು ಹೇಳಿದ್ದಾರೆ.

Oppo Find N ನ ವಿವರವಾದ Specifications (ವಿಶೇಷತೆಗಳು)  ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಫೋನ್ ಡಿಸೆಂಬರ್ 15 ರಂದು Oppo Inno Day ಕಾನ್ಫರೆನ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಈ ಕಾರ್ಯಕ್ರಮದಲ್ಲಿಯೇ ಬಹಿರಂಗಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಅದಾಗ್ಯೂ Oppo Find N ತೆಳುವಾದ ಬೆಜೆಲ್‌ಗಳು ಮತ್ತು ಹೋಲ್-ಪಂಚ್ ಫೋಲ್ಡಬಲ್ ಡಿಸ್‌ಪ್ಲೇಯನ್ನು ( hole-punch foldable) ಹೊಂದಿರುವಂತೆ ತೋರುತ್ತಿದೆ.

Smartphone Sales in 2021 ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್‌ ಖರೀದಿಯಲ್ಲಿ ಭಾರೀ ಏರಿಕೆ!

Samsung Galaxy Z Fold ಸರಣಿಯಂತೆಯೇ, Oppo Find N ಒಳಮುಖವಾಗಿ ಪೋಲ್ಡ್‌ ಆಗುವ ವಿನ್ಯಾಸವನ್ನು ಹೊಂದಿದೆ. ಟೀಸರ್‌ಗಳ ಆಧಾರದ ಮೇಲೆ, ಫೋನ್ ಮೆಟಲ್ ಫಿನಿಶ್ ಮತ್ತು ಎರಡು ವಿಭಿನ್ನ OLED ಡಿಸ್ಪ್ಲೇಗಳನ್ನು ಹೊಂದಿರುವಂತೆ ಕಂಡುಬರುತ್ತಿದೆ. ಈ ಡಿಸ್ಪ್ಲೇಗಳಲ್ಲಿ ಒಂದನ್ನು ಮಡಚಬಹುದಾಗಿದೆ ಎಂದು ಹೇಳಲಾಗಿದೆ.

 

The OPPO Find N has been a key focus of mine recently, and I'm very excited to share even more with you at INNO Day on December 15!https://t.co/1fblvFU3ZG

— Pete Lau (@PeteLau)

 

ನಾಲ್ಕು ವರ್ಷಗಳ ತೀವ್ರ ಸಂಶೋಧನೆ ನಂತರ ಮಾರುಕಟ್ಟೆಗೆ!

“ಇದು [Oppo Find N] ನಾಲ್ಕು ವರ್ಷಗಳ ತೀವ್ರವಾದ ಸಂಶೋಧನೆ ಮತ್ತು 6 ತಲೆಮಾರುಗಳ ಮೂಲಮಾದರಿಗಳ ಪರಿಣಾಮವಾಗಿ ನಮ್ಮ ಮೊದಲ ಮಡಚಬಹುದಾದ ಪ್ರಮುಖ ಸ್ಮಾರ್ಟ್‌ಫೋನ್ ಆಗಿದೆ. ಈ ಸಾಧನವು ಸ್ಮಾರ್ಟ್‌ಫೋನ್‌ಗಳ ಭವಿಷ್ಯಕ್ಕೆ OPPO ನ ಉತ್ತರವಾಗಿದೆ. OPPO ನಲ್ಲಿ ಮುಖ್ಯ ಉತ್ಪನ್ನ ಅಧಿಕಾರಿಯಾಗಿ (chief product officer) ಪಾತ್ರವನ್ನು ವಹಿಸಿಕೊಂಡಾಗಿನಿಂದ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ, ”ಎಂದು ಉನ್ನತ ಸಂಸ್ಥೆಗಳಲ್ಲಿ ಒಂದಾದ OnePlus ನ ಮುಖ್ಯ ಕಾರ್ಯನಿರ್ವಾಹಕರೂ ಆಗಿರುವ ಲಾವ್ ( Lau) ಹೇಳಿದ್ದಾರೆ.  ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಬ್ರ್ಯಾಂಡ್‌ OnePlus ಅನ್ನು ಇತ್ತೀಚೆಗೆ BBK Electronics Oppo ಖರೀಸದಿಸಿತ್ತು.

Twitter Trends‌ in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?

Oppo ನ ಮಹತ್ವಾಕಾಂಕ್ಷೆಯ ಫೋಲ್ಡೇಬಲ್ ಫೋನ್‌ನ ಮೊದಲ ಮಾದರಿಯು 2018 ರಲ್ಲಿ ಬಿಡುಗಡೆಯಾಗಿತ್ತು. ಆದರೆ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು  ಕಂಪನಿಯು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿದೆ. ಫೋಲ್ಡೇಬಲ್ ಫೋನ್‌ ವಿನ್ಯಾಸಗೊಳಿಸುವಲ್ಲಿ ಆದ  ವಿಳಂಬದ ಬಗ್ಗೆ ಮಾತನಾಡಿದ ಮೊಬೈಲ್‌ನ ವಿನ್ಯಾಸಕ ಪೀಟ್ ಲಾವ್ " ಹಲವಾರು ಬ್ರ್ಯಾಂಡ್‌ಗಳು ಈಗಾಗಲೇ ತಮ್ಮ ಮಡಚಬಹುದಾದ ಮೊಬೈಲ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರೂ ಸಹ,  ಯುಟಿಲಿಟಿ, ಬಾಳಿಕೆ ಸೇರಿದಂತೆ ಇತರ ಅಡೆತಡೆಗಳಿಂದ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಈ ಮೊಬೈಲ್‌ ಬಳಸುವುದು ಎಷ್ಟು ಸೂಕ್ತ ಎಂಬುದನ್ನು ಮೊದಲ ನಿರ್ಧರಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ. 

ಅಡೆತಡೆಗಳನ್ನು ನಿವಾರಿಸಲು Oppo Find N ನ ವಿನ್ಯಾಸ ತಂಡಕ್ಕೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಲಾವ್ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಉತ್ಪನ್ನವನ್ನು ವಿನ್ಯಾಸಗೊಳಿಸುವಲ್ಲಿ ಲಾವ್ ಮತ್ತು ಅವರ ತಂಡಕ್ಕೆ ಮಾರ್ಗದರ್ಶನ ನೀಡಿದ ಎರಡು ತತ್ವಗಳನ್ನು ಬಗ್ಗೆ ಕೂಡ ಅವರು  ಪತ್ರದಲ್ಲಿ ತಿಳಿಸಿದ್ದಾರೆ. ಈ ಮೊಬೈಲ್‌ ಲಾಂಚ್‌ ಬಗ್ಗೆ ವಿವರಿಸಲು ಲಾವ್‌ ಉದ್ದದ ಪತ್ರವೊಂದನ್ನು ಬರೆದಿದ್ದಾರೆ. ಅವರು ಬರೆದಿರುವ ಪತ್ರದ ತುಣುಕು ಇಲ್ಲಿದೆ. 

ಸಂಪೂರ್ಣ ಪತ್ರವನ್ನು ಇಲ್ಲಿ ಓದಿ: Pete Lau

click me!