ಬಿಎಸ್ಸೆನ್ನೆಲ್‌ ‘ಕ್ಯಾಷ್‌ ಬ್ಯಾಕ್‌’ ಆಫರ್ : ಇನ್ನು ಕೆಲ ದಿನವಷ್ಟೇ ಬಾಕಿ

Published : Dec 24, 2018, 09:55 AM IST
ಬಿಎಸ್ಸೆನ್ನೆಲ್‌ ‘ಕ್ಯಾಷ್‌ ಬ್ಯಾಕ್‌’ ಆಫರ್ : ಇನ್ನು ಕೆಲ ದಿನವಷ್ಟೇ ಬಾಕಿ

ಸಾರಾಂಶ

ದೇಶದ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಸೆನ್ನೆಲ್‌) ತನ್ನ ಗ್ರಾಹಕರಿಗಾಗಿ ನೂತನ ‘ಕ್ಯಾಷ್‌ ಬ್ಯಾಕ್‌’ ಯೋಜನೆ ಘೋಷಿಸಿದೆ.

ಬೆಂಗಳೂರು: ದೇಶದ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಸೆನ್ನೆಲ್‌) ತನ್ನ ಗ್ರಾಹಕರಿಗಾಗಿ ನೂತನ ‘ಕ್ಯಾಷ್‌ ಬ್ಯಾಕ್‌’ ಯೋಜನೆ ಘೋಷಿಸಿದೆ. ಸಂಸ್ಥೆಯು ಲ್ಯಾಂಡ್‌ಲೈನ್‌ ಬಳಕೆದಾರರು ವೈಫೈ ಸಂಪರ್ಕ ಪಡೆಯುವುದನ್ನು ಪ್ರೋತ್ಸಾಹಿಸಲು ಹಾಗೂ ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಕೊಡುಗೆ ನೀಡುತ್ತಿದೆ.

 ಈ ಬ್ರಾಡ್‌ಬ್ಯಾಂಡ್‌ ಯೋಜನೆ ವಾರ್ಷಿಕ ಮತ್ತು ಅರ್ಧ ವಾರ್ಷಿಕ (6 ತಿಂಗಳು) ಚಂದಾದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರು ಶೇ.25ರಿಂದ ಶೇ.15ರಷ್ಟುನಗದು ಹಿಂಪಡೆಯಬಹುದು. ಈ ಯೋಜನೆ ಬಿಎಸ್ಸೆನ್ನೆಲ್‌ ಲ್ಯಾಂಡ್‌ಲೈನ್‌, ಬ್ರಾಡ್‌ಬ್ಯಾಂಡ್‌ ಮತ್ತು ಬ್ರಾಡ್‌ಬ್ಯಾಂಡ್‌ ವೈ-ಫೈ ಹಾಗೂ ಎಫ್‌ಟಿಟಿಎಚ್‌ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ. 

ಆದರೆ, ಗ್ರಾಹಕರು ಡಿ.31ರೊಳಗೆ ‘ಕ್ಯಾಷ್‌ ಬ್ಯಾಕ್‌’ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ಆಸಕ್ತರು ಹೆಚ್ಚಿನ ಮಾಹಿತಿಗೆ ಸಮೀಪದ ಬಿಎಸ್‌ಎನ್‌ಎಲ್‌ ಕೇಂದ್ರ ಅಥವಾ ಸಹಾಯವಾಣಿ ನಂ. 1500, 18003451500 ಕರೆ ಮಾಡಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ