
ಇಂಟರ್ನೆಟ್ ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ, ಗ್ಯಾಜೆಟ್ ಲೋಕವು ವಿಸ್ತರಿಸುತ್ತಾ ಹೋಗುತ್ತದೆ. ಇವತ್ತು ಬಳಸುವ ಮೊಬೈಲ್‌ನಂತಹ ಗ್ಯಾಜೆಟ್‌ಗಳು ನಾಳೆಗೂ ಪ್ರಸ್ತುತವಾಗಿರುತ್ತವೆ ಎಂದು ಹೇಳಲಾಗದು.
ವಿಶೇಷವಾಗಿ ಇಂಟರ್ನೆಟ್ ವಿಚಾರ ಬಂದಾಗ ಮೊಬೈಲ್ ಫೋನ್‌ಗಳು ಕೂಡಾ ಸಂಪೂರ್ಣವಾಗಿ ಸ್ಥಿಥ್ಯಂತರವಾಗುವ ಅನಿವಾರ್ತಯತೆ ಎದುರಾಗಿದೆ. ಈವರೆಗೂ ಬಳಕೆಯಲ್ಲಿರುವ ಮೊಬೈಲ್ ಫೋನ್‌ಗಳು 5G ಇಂಟರ್ನೆಟ್ ಬಂದ ನಂತರ ಸಪೋರ್ಟ್ ಆಗದು.
ಈಗಾಗಲೇ ಶ್ಯೋಮಿಯು ತನ್ನ 5G ಸ್ಮಾರ್ಟ್‌ಫೋನ್ ಡೆಮೋವನ್ನು ಇತ್ತೀಚೆಗೆ ನೀಡಿದೆ. ಈಗದರ ಬೆನ್ನಲ್ಲೇ, OnePlus ಕೂಡಾ 5G ಫೋನನ್ನು ಮಾರುಕಟ್ಟೆಗೆ ಬಿಡಲು ರೆಡಿಯಾಗುತ್ತಿದೆ.
2019ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಈ ಫೋನ್‌ನ ಹೆಚ್ಚೇನು ಮಾಹಿತಿ ಬಹಿರಂಗವಾಗಿಲ್ಲ, ಆದರೆ ಒಂದು ಫೋಟೋ ಲೀಕ್ ಆಗಿದೆ. ಆ ಫೋಟೋನಲ್ಲಿ OnePlus ಸಿಇಓ ಪೀಟ್ ಲೌ ಸೇರಿದಂತೆ ಇಬ್ಬರು ಮೀಟಿಂಗ್ ನಡೆಸುತ್ತಿದ್ದು, ಹೊಸ ಫೋನ್‌ವೊಂದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸ್ಲೈಡ್‌ನಲ್ಲಿ ಕಾಣಿಸುತ್ತಿರುವ ಫೋನ್ ಹೊಸ 5G ಫೋನ್ ಎಂದು ಹೇಳಲಾಗುತ್ತಿದೆ.
ಅದ್ರ ಹೆಸರು OnePlus 7 ಎಂಬ ವದಂತಿಯಿದ್ದು, ಫೋಟೋನಲ್ಲಿ ಫೋನ್‌ನ ಮುಂಭಾಗ ಕಾಣಿಸುತ್ತಿಲ್ಲ. ಹಿಂಭಾಗದಲ್ಲಿ ವೃತ್ತಾಕಾರದ ವಿನ್ಯಾಸವಿದ್ದು, ಅದು ಡ್ಯುಯೆಲ್ ಕ್ಯಾಮೆರಾವಾಗಿರಬಹುದೆಂದು ಊಹಿಸಲಾಗಿದೆ.
ಇದನ್ನೂ ಓದಿ: ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ
ಆದರೆ ಈ ಫೋಟೋ ಎಷ್ಟರ ಮಟ್ಟಿಗೆ ನಿಜವೆಂಬುವುದು ಕೂಡಾ ದೊಡ್ಡ ಪ್ರಶ್ನೆ. ಸಿಇಓ ಭಾಗಿಯಾಗಿರುವ, ಗೌಪ್ಯವಾಗಿರುವ ಮೀಟಿಂಗ್ ಫೋಟೋ ಈ ರೀತಿ ಲೀಕ್ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.
ಒಂದು ವೇಳೆ ಈ ಫೋಟೋ ನಿಜವೇ ಆಗಿದ್ದರೆ, ಫೋಟೋ ತೆಗೆದಿರುವ ಆ ಟಾಪ್ ಎಕ್ಸಿಕ್ಯೂಟಿವ್ ಈಗಾಗಲೇ ದೊಡ್ಡ ತೊಂದರೆಯಲ್ಲಿ ಸಿಲುಕಿಹಾಕಿಕೊಂಡಿರಬಹುದು. ಅಥವಾ ಹೈಪ್ ಕ್ರಿಯೇಟ್ ಮಾಡಲಿಕ್ಕೆ ಕಂಪನಿಯೇ ಈ ಫೋಟೋವನ್ನು ಖುದ್ದು ಲೀಕ್ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.