
ISRO's Gaganyaan Mission: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸೋಮವಾರ ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವಸಹಿತ ಮಿಷನ್‌ಗಾಗಿ ಹಾರ್ಡ್‌ವೇರ್‌ನ ಮೊದಲ ಸೆಟ್ ಇಸ್ರೋಗೆ ಹಸ್ತಾಂತರಿಸಿದೆ. ಹಾರ್ಡ್‌ವೇರನ್ನು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್‌ನಲ್ಲಿ ಬಳಸಲಿದೆ. ಭಾರತದ ಪ್ರಮುಖ ಏರೋಸ್ಪೇಸ್ ತಯಾರಕ ಎಚ್‌ಎಎಲ್, ಗಗನ್‌ಯಾನ್ ಮಿಷನ್‌ಗಾಗಿ ಪ್ರಮುಖ ಸಾಧನಗಳನ್ನು ಒದಗಿಸುವಲ್ಲಿ ಇಸ್ರೋದೊಂದಿಗೆ ಕೆಲಸ ಮಾಡುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಚ್‌ಎಎಲ್ "ಎಚ್‌ಎಎಲ್ ಗಗನ್ಯಾನ್ ಹಾರ್ಡ್‌ವೇರ್‌ನ ಮೊದಲ ಸೆಟ್ ಇಸ್ರೋಗೆ ಹಸ್ತಾಂತರಿಸಿದೆ, PS2/GS2 ಹಂತದ ಏಕೀಕರಣ ಸೌಲಭ್ಯವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ" ಎಂದು ತಿಳಿಸಿದೆ. ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಬೆಂಗಳೂರಿನಲ್ಲಿ ವಾಹನ ಏಕೀಕರಣ ಸೌಲಭ್ಯವನ್ನು ಉದ್ಘಾಟಿಸಿದರು, ಇದನ್ನು ಉಡಾವಣಾ ಪ್ಯಾಡ್‌ಗೆ ಉರುಳಿಸುವ ಮೊದಲು ಮಿಷನ್‌ನ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳನ್ನು ಒಟ್ಟಿಗೆ ತರಲು ಬಳಸಲಾಗುತ್ತದೆ.
ಎಚ್‌ಎಎಲ್ ತನ್ನ ದೊಡ್ಡ ಲಾಂಚರ್, PSLV ಮತ್ತು GSLV ಅಭಿವೃದ್ಧಿಯಲ್ಲಿ ಇಸ್ರೋ ಜೊತೆ ಕೆಲಸ ಮಾಡುತ್ತಿದೆ. 2021 ರಲ್ಲಿ ಏರೋಸ್ಪೇಸ್ ಘಟಕವು ಭವಿಷ್ಯದ ಕಾರ್ಯಾಚರಣೆಗಳಿಗಾಗಿ Mk-III ಉಡಾವಣಾ ವಾಹನದಲ್ಲಿ ಬಳಸಲು ಇದುವರೆಗೆ ತಯಾರಿಸಲಾದ ಭಾರೀ ತೂಕದ ಸೆಮು-ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ (SC120-LOX) ಒದಗಿಸಿತ್ತು.
ಇದನ್ನೂ ಓದಿ: ISRO: ಚಳ್ಳಕೆರೆಯಲ್ಲಿ ಶೀಘ್ರ ಮರುಬಳಕೆ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ
ಇದು ಹಿಂದೆ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ-ಎಂಕೆ-II, ಮತ್ತು ಜಿಎಸ್‌ಎಲ್‌ವಿ-ಎಂಕೆ III ಉಡಾವಣಾ ವಾಹನಗಳಿಗೆ ಟ್ಯಾಂಕ್‌ಗಳು ಮತ್ತು ಉಪಗ್ರಹ ರಚನೆಗಳನ್ನು ವಿತರಿಸಿದೆ. PS2/GS2 ಏಕೀಕರಣ, ಸೆಮಿ-ಕ್ರಯೋ ರಚನೆಯ ತಯಾರಿಕೆ ಮತ್ತು ಕ್ರಯೋ ಮತ್ತು ಸೆಮಿ-ಕ್ರಯೋ ಎಂಜಿನ್‌ಗಳ ತಯಾರಿಕೆಯಂತಹ ವಿವಿಧ ಯೋಜನೆಗಳನ್ನು ಎಚ್‌ಎಎಲ್‌ಸ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ.
ಬಾಹ್ಯಾಕಾಶ ಕಾರ್ಯಾಚರಣೆಯ ಕೆಲಸವು ವೇಗವನ್ನು ಪಡೆದುಕೊಂಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಇತ್ತೀಚೆಗೆ ಹೇಳಿದ್ದರು. ಇಸ್ರೋ ಬೆಂಗಳೂರಿನಲ್ಲಿ ಗಗನಯಾತ್ರಿ ತರಬೇತಿ ಸೌಲಭ್ಯವನ್ನು ನಿಯೋಜಿಸಿದ್ದು ನಾಲ್ವರು ಅಜ್ಞಾತ (ಊndisclosed) ಭಾರತೀಯ ವಾಯುಪಡೆಯ ಅಧಿಕಾರಿಗಳ ತರಬೇತಿ ನಡೆಯುತ್ತಿದೆ.
ಗಗನ್‌ಯಾನ್‌ಗಾಗಿ ಎಲ್ಲಾ ವ್ಯವಸ್ಥೆಗಳು ಮತ್ತು ಉಪವ್ಯವಸ್ಥೆಗಳ ವಿನ್ಯಾಸ ಪೂರ್ಣಗೊಂಡಿದೆ ಮತ್ತು ಆರ್ಬಿಟಲ್ ಮಾಡ್ಯೂಲ್ ತಯಾರಿಗಾಗಿ ಏಕೀಕರಣ ಸೌಲಭ್ಯದ ನಿರ್ಮಾಣವು ಮುಕ್ತಾಯದ ಹಂತದಲ್ಲಿದೆ ಎಂದು ಸಚಿವರು ತಿಳಿಸಿದ್ದರು. ಕ್ರೀವ್ ರಿಕವರಿ ಕಾರ್ಯಾಚರಣೆಗಳು ಮತ್ತು ಪೂರ್ವಾಭ್ಯಾಸಗಳಿಗೆ ಜವಾಬ್ದಾರಿಗಳನ್ನು ಸಹ ಅಂತಿಮಗೊಳಿಸಲಾಗಿದೆ ಮತ್ತು ಯೋಜನೆಯ ಇತರ ಕಾರ್ಯಾಚರಣೆಗಳ ವಿವರವಾದ ಅವಶ್ಯಕತೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Chandrayaan 3: ಭಾರತ ಮತ್ತಷ್ಟು ಬಲಶಾಲಿ, ಚಂದ್ರಯಾನ -3 ಆಗಸ್ಟ್‌ನಲ್ಲಿ ಉಡಾವಣೆ, ಒಟ್ಟು 19 ಮಿಷನ್‌ಗಳ ಗುರಿ!
ಇಸ್ರೋ ಈ ಮಧ್ಯೆ ಮೈಕ್ರೋಗ್ರಾವಿಟಿ ಪ್ರಯೋಗಗಳ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ ಮತ್ತು ಪ್ರಯೋಗಗಳಿಗಾಗಿ ಪರಿಕಲ್ಪನಾ ವಿನ್ಯಾಸವು ಪರಿಶೀಲನೆಯಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಜನವರಿಯಲ್ಲಿ ಗಗನಯಾನ ಮಿಷನ್ ಪ್ರಾರಂಭಿಸುವ ಲಿಕ್ವಿಡ್ ಪ್ರೊಪೆಲ್ಲೆಂಟ್ ವಿಕಾಸ್ ಎಂಜಿನ್‌ನಲ್ಲಿ ಮೂರನೇ ದೀರ್ಘಾವಧಿಯ ಹಾಟ್ ಪರೀಕ್ಷೆಯನ್ನು (Hot Test) ಯಶಸ್ವಿಯಾಗಿ ನಡೆಸಿತ್ತು. ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (ಐಪಿಆರ್‌ಸಿ) ಪರೀಕ್ಷಾ ಕೇಂದ್ರದಲ್ಲಿ 240 ಸೆಕೆಂಡುಗಳ ಕಾಲ ಎಂಜಿನನ್ನು ಪರೀಕ್ಷಿಸಲಾಗಿತ್ತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.