ಕೈಗೆಟುಕುವ ಬೆಲೆಯ Realme C31 ಇಂದು ಭಾರತದಲ್ಲಿ ಮೊದಲ ಸೇಲ್: ಇಲ್ಲಿದೆ ಡಿಟೇಲ್ಸ್‌

By Suvarna NewsFirst Published Apr 6, 2022, 8:34 AM IST
Highlights

ಕಂಪನಿಯ ಪ್ರಕಾರ, Realme C31 ರಿಯಲ್‌ಮಿ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್‌ ಮಳಿಗೆಗಳಿಂದ ಖರೀದಿಸಬಹುದು.

Realme C31 Sale: ಕೈಗೆಟುಕುವ ಬೆಲೆಯ Realme C31 ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಮೊದಲ ಮಾರಾಟ ಆರಂಭವಾಗಲಿದೆ. ರಿಯಲ್‌ಮಿನ ಹೊಸ  ಸಿ-ಸರಣಿಯ ಸ್ಮಾರ್ಟ್‌ಫೋನ್ 6.5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ ಮತ್ತು 13-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ. Realme C31 ಯುನಿಸೊಕ್ T612 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 4GB RAM ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್ಫೋನ್ Android 11-ಆಧಾರಿತ Realme R UI ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. 

ಭಾರತದಲ್ಲಿ Realme C31 ಬೆಲೆ, ಲಭ್ಯತೆ: ಭಾರತದಲ್ಲಿ Realme C31 ಆGB + 32GB ಸ್ಟೋರೇಜ್ ಮಾದರಿಗೆ ರೂ. 8,999 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 4GB + 64GB ರೂಪಾಂತರಕ್ಕೆ ರೂ. 9,999 ಬೆಲೆ ನಿಗದಿಪಡಿಸಲಾಗಿದೆ. ಸ್ಮಾರ್ಟ್ಫೋನ್ ಡಾರ್ಕ್‌ ಗ್ರೀನ್ ಮತ್ತು ಲೈಟ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯ ಪ್ರಕಾರ, ಹ್ಯಾಂಡ್‌ಸೆಟ್ಟನ್ನು ರಿಯಲ್‌ಮಿ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್‌ ಮಳಿಗೆಗಳಿಂದ ಖರೀದಿಸಬಹುದು.

Latest Videos

ಇದನ್ನೂ ಓದಿ: ಕ್ಯಾಮೆರಾ ಪ್ರಿಯರಿಗೆ ಗುಡ್‌ ನ್ಯೂಸ್: ಕೈಗೆಟುಕುವ ಬೆಲೆಯ Realme 9 4G ಭಾರತ ಬಿಡುಗಡೆ ದಿನಾಂಕ ಫಿಕ್ಸ್!

Realme C31 ಫೀಚರ್ಸ್:‌ ಡ್ಯುಯಲ್-ಸಿಮ್  (ನ್ಯಾನೋ) ಹೊಂದಿರುವ Realme C31 Android 11 ಆಧಾರಿತ Realme UI R ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್‌ಸೆಟ್ 6.5-ಇಂಚಿನ HD+ (720x1,600 ಪಿಕ್ಸೆಲ್‌ಗಳು) LCD ಡಿಸ್ಪ್ಲೇಯೊಂದಿಗೆ 88.7 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. Realme C31 12nm Unisoc T612 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 4GB RAM ನೊಂದಿಗೆ ಜೋಡಿಸಲಾಗಿದೆ.

Realme C31 ಕ್ಯಾಮೆರಾ: Realme C31 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದೆ, ಇದು f/2.2 ಅಪರ್ಚರ್ ಲೆನ್ಸ್ ಮತ್ತು 4x ಡಿಜಿಟಲ್ ಜೂಮ್ ಜೊತೆಗೆ 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು‌ f/2.8 ಅಪರ್ಚರ್ ಲೆನ್ಸ್‌ನೊಂದಿಗೆ ಅನಿರ್ದಿಷ್ಟ ಮೋನೋಕ್ರೋಮ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಹ್ಯಾಂಡ್‌ಸೆಟ್‌ನಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/2.2 ಅಪರ್ಚರ್ ಲೆನ್ಸ್‌ನೊಂದಿಗೆ ಅಳವಡಿಸಲಾಗಿದೆ.

ಇದನ್ನೂ ಓದಿRealme GT 2 Pro ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಪೋನ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್:‌ ಬೆಲೆ ಎಷ್ಟಿರಬಹುದು?

Realme C31 ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾದ (1 TB ವರೆಗೆ) UFS 2.2 ಸಂಗ್ರಹಣೆಯ 64GB ವರೆಗೆ ನೀಡುತ್ತದೆ. Realme C31 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi (2.4 GHz), ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ. 

ಸ್ಮಾರ್ಟ್‌ಫೋನ್ ಅಕ್ಸೆಲೆರೊಮೀಟರ್, ಪ್ರಾಕ್ಸಿಮೀಟರ್, ಆಂಬೀಯಂಟ್‌ ಲೈಟ್, ಮ್ಯಾಗ್ನೆಟಿಕ್ ಇಂಡಕ್ಷನ್ ಸೆನ್ಸರ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್  ಒಳಗೊಂಡಿವೆ. ಕಂಪನಿಯ ಪ್ರಕಾರ, Realme C31 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು ಸ್ಟ್ಯಾಂಡ್‌ಬೈನಲ್ಲಿ 45 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. 

click me!