Meta Exposes Spy Firms: ಖಾಸಗಿ ಪತ್ತೆದಾರಿ ಸಂಸ್ಥೆಗಳ 1,500 ನಕಲಿ ಖಾತೆ ಬ್ಯಾನ್‌ ಮಾಡಿದ ಫೇಸ್‌ಬುಕ್!

By Suvarna News  |  First Published Dec 17, 2021, 4:42 PM IST

*ಡಿಜಿಟಲ್‌ ವಂಚಕರ ವಿರುದ್ಧ ಅಮೆರಿಕಾ ಸಮರ
*ಸಾಮಾಜಿಕ ಜಾಲತಾಣಗಳ ಮೇಲೆ ಚಾಟಿ ಬೀಸಿದ ಸರ್ಕಾರ
*50,000 ಜನರನ್ನು ಗುರಿಯಾಗಿಸಿಕೊಂಡಿದ್ದ ಫೇಕ್‌ ಅಕೌಂಟ್ಸ್
*1,500 ನಕಲಿ ಖಾತೆಗಳನ್ನು ಅಮಾನತುಗೊಳಿಸಿದ ಮೆಟಾ‌


ವಾಷಿಂಗ್ಟನ್ (ಡಿ. 17): ಫೇಸ್‌ಬುಕ್ ಮಾಲೀಕತ್ವದ ಮೆಟಾ (Facebook-Meta) ಸಂಸ್ಥೆಯೂ, ಹ್ಯಾಕಿಂಗ್ ಅಥವಾ ಇತರ ದುರುಪಯೋಗಗಳಿಗಾಗಿ ಬಳಸುತ್ತಿದ್ದ 6 ಕ್ಕೂ ಹೆಚ್ಚು ಖಾಸಗಿ ಕಣ್ಗಾವಲು  ಕಂಪನಿಗಳ (Private Surveillance Companies) ಖಾತೆಗಳನ್ನು ಸ್ಥಗಿತಗೊಳಿಸಿದೆ. ಗುರುವಾರ ಪ್ರಕಟವಾದ ವರದಿಯ ಪ್ರಕಾರ ಈ ಕಂಪನಿಗಳು ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 50,000 ಜನರನ್ನು ಒಟ್ಟಾರೆಯಾಗಿ ಗುರಿಯಾಗಿಸಿದೆ ಎಂದು ಆರೋಪಿಸಿದೆ. ಡಿಜಿಟಲ್ ಬೇಹುಗಾರಿಕೆ (Digital Espionage Services) ಸೇವೆಗಳ ಪೂರೈಕೆದಾರರ ವಿರುದ್ಧ ಅಮೇರಿಕನ್ ಟೆಕ್ ಕಂಪನಿಗಳು, ಯುಎಸ್ ಅಧಿಕಾರಿಗಳು ಮತ್ತು ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ವ್ಯಾಪಕ ನಡೆಯ ನಡುವೆ ಮೆಟಾ ಕಂಪನಿಯು ಪತ್ತೇದಾರಿ ಸಂಸ್ಥೆಗಳಿಗೆ ಚಾಟಿ ಬೀಸಿದೆ. ವಿಶೇಷವಾಗಿ ಇಸ್ರೇಲಿ ಸ್ಪೈವೇರ್ ಕಂಪನಿ ಎನ್‌ಎಸ್‌ಓ ಗ್ರೂಪ್‌ (NSO Group) ಮೇಲೆ ತೀವ್ರ ನಿಗಾ ಇರಿಸಿದೆ.

ಸುಮಾರು 1,500 ನಕಲಿ ಖಾತೆಗಳನ್ನು ಅಮಾನತು

Latest Videos

undefined

ಮೆಟಾ ಈಗಾಗಲೇ ಅಮೆರಿಕಾ (USA) ನ್ಯಾಯಾಲಯದಲ್ಲಿ NSO ವಿರುದ್ಧ ಮೊಕದ್ದಮೆ ಹೂಡಿದೆ. ಮೆಟಾದ ಭದ್ರತಾ ನೀತಿಯ ಮುಖ್ಯಸ್ಥರಾದ ನಥಾನಿಯಲ್ ಗ್ಲೀಚರ್ (Nathaniel Gleicher) ಗುರುವಾರ ಕೈಗೊಂಡ ಕ್ರಮವು "ಕೇವಲ ಒಂದು ಕಂಪನಿಗಿಷ್ಟೇ ಸೀಮಿತವಲ್ಲ, ನೇಮಕಾತಿ ಉದ್ಯಮದ (Hire Industry) ಅನೇಕ ಕಂಪನಿಗಳ ಮೇಲೆ ಕಣ್ಗಾವಲಿಡಲಾಗಿದೆ ಎಂದು ಸೂಚಿಸುವ ಉದ್ದೇಶವಾಗಿದೆ" ಎಂದು ಹೇಳಿದ್ದಾರೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಾದ್ಯಂತ ಏಳು ಸಂಸ್ಥೆಗಳು ನಡೆಸುತ್ತಿರುವ ಸುಮಾರು 1,500 ನಕಲಿ ಖಾತೆಗಳನ್ನು ಅಮಾನತುಗೊಳಿಸುತ್ತಿದೆ ಎಂದು ಮೆಟಾ ವರದಿ ಹೇಳಿದೆ. ಈ ಸಂಸ್ಥೆಗಳು 100 ಕ್ಕೂ ಹೆಚ್ಚು ದೇಶಗಳಲ್ಲಿ ಜನರನ್ನು ಗುರಿಯಾಗಿಸಿಕೊಂಡಿವೆ ಎಂದು ಮೆಟಾ ಹೇಳಿದೆ.

ದುರುದ್ದೇಶಪೂರಿತ ಖಾತೆಗಳ ಮೇಲೆ ಕ್ರಮ!

ಮೆಟಾವು ಕಣ್ಗಾವಲು ಸಂಸ್ಥೆಗಳನ್ನು ಹೇಗೆ ಗುರುತಿಸಿದೆ ಎಂಬುದರ ಕುರಿತು ವಿವರವಾದ ವಿವರಣೆಯನ್ನು ನೀಡಿಲ್ಲ. ಆದರೆ ಇದು ಪ್ರಪಂಚದ ಕೆಲವು ದೊಡ್ಡ ಸಾಮಾಜಿಕ ಮತ್ತು ಸಂವಹನ ಜಾಲಗಳನ್ನು ನಿರ್ವಹಿಸುತ್ತದೆ. ಹಾಗಾಗಿ ಅದರ ಪ್ಲಾಟ್‌ಫಾರ್ಮ್‌ಗಳಿಂದ ದುರುದ್ದೇಶಪೂರಿತ ಖಾತೆಗಳನ್ನು ಹುಡುಕುವ ಮತ್ತು ತೆಗೆದುಹಾಕುವ ಸಾಮರ್ಥ್ಯವನ್ನು ಮೆಟಾ ಹೊಂದಿದೆ.

ಅವುಗಳಲ್ಲಿ ಇಸ್ರೇಲ್‌ನ ಬ್ಲ್ಯಾಕ್ ಕ್ಯೂಬ್ ಕೂಡ ಇದೆ, ಇದು ಹಾಲಿವುಡ್ ಅತ್ಯಾಚಾರಿ ಹಾರ್ವೆ ವೈನ್‌ಸ್ಟೈನ್ ಪರವಾಗಿ ತನ್ನ ಗೂಢಚಾರರನ್ನು ನಿಯೋಜಿಸಿ ಕುಖ್ಯಾತಿ ಪಡೆದಿತ್ತು. ಗುಪ್ತಚರ ಸಂಸ್ಥೆಯು ತನ್ನ ಗುರಿಗಳನ್ನು ಸಾಧಿಸಲು ಆನ್‌ಲೈನ್‌ನಲ್ಲಿ ಫೇಕ್‌ ವ್ಯಕ್ತಿಗಳ ಮೂಲಕ ಚಾಟ್ ಮಾಡಿ ಅವರ ಮಾಹಿತಿ ಸಂಗ್ರಹಿಸುತ್ತದೆ. ನಂತರ ಅವರ ಮೇಲೆ ಅಟ್ಯಾಕ್‌ ಮಾಡುತ್ತದೆ ಎಂದು ಮೆಟಾ ಹೇಳಿದೆ.

ಭಾರತೀಯ ಸೈಬರ್ ಸ್ಪೈ ಸಂಸ್ಥೆ ಅಮಾನತು! 

ಮೆಟಾ ಅಮಾನತುಗೊಳಿಸಿದ ಬ್ಲ್ಯಾಕ್ ಕ್ಯೂಬ್ "ಯಾವುದೇ ಫಿಶಿಂಗ್ ಅಥವಾ ಹ್ಯಾಕಿಂಗ್ ಅನ್ನು ನಾವು ಕೈಗೊಳ್ಳುವುದಿಲ್ಲ" ಎಂದು ಹೇಳಿದೆ ಮತ್ತು ಸಂಸ್ಥೆಯು ನಿಯಮಗಳನುಸಾರ "ನಮ್ಮ ಎಲ್ಲಾ ಏಜೆಂಟರ ಚಟುವಟಿಕೆಗಳು ಸ್ಥಳೀಯ ಕಾನೂನುಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರುತ್ತವೆ" ಎಂದು ಹೇಳಿದೆ.

ಮೆಟಾ ನಿಂದ ಅಮಾನತುಗೊಂಡ ಇತರರಲ್ಲಿ ಭಾರತೀಯ ಸೈಬರ್ ಸ್ಪೈ ಸಂಸ್ಥೆಯಾದ BellTroX (Reuters ಮತ್ತು ಇಂಟರ್ನೆಟ್ ವಾಚ್‌ಡಾಗ್ ಸಿಟಿಜನ್ ಲ್ಯಾಬ್ ಕಳೆದ ವರ್ಷ ಬಹಿರಂಗಪಡಿಸಿದ ಸಂಸ್ಥೆ) , ಬ್ಲೂಹಾಕ್ ಸಿಐ (Bluehawk CI) ಎಂಬ ಇಸ್ರೇಲಿ ಕಂಪನಿ ಮತ್ತು ಸೈಟ್ರೋಕ್ಸ (Cytrox) ಎಂಬ ಯುರೋಪಿಯನ್ ಸಂಸ್ಥೆ ಸೇರಿವೆ . ಇವೆಲ್ಲವೂ ಮೆಟಾ ಹ್ಯಾಕಿಂಗ್ ಆರೋಪವನ್ನು ಹೊಂದಿದೆ.

ಇದನ್ನೂ ಓದಿ:

1) Social Media Law Violation: ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಬಿತ್ತು ಭರ್ಜರಿ ದಂಡ!

2) Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

3) Meta Safety Hub : ಆನಲೈನ್‌ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಹಬ್ ಪ್ರಾರಂಭಿಸಿದ ಫೇಸ್‌ಬುಕ್!

click me!