*ಆಂಡ್ರಾಯ್ಡ್ ಫೋರ್‌ಗ್ರೌಂಡ್‌ನಲ್ಲಿ ದೋಷ
*ವರದಿ ಮಾಡಿದ ಭಾರತೀಯನಿಗೆ ಬಹುಮಾನ
*ಗೂಗಲ್‌ನಿಂದ ₹3.5 ಲಕ್ಷ ಪಡೆದ ರೋನಿ ದಾಸ್
ಯುಎಸ್‌ಎ (ಡಿ. 17): ಆಂಡ್ರಾಯ್ಡ್ ಫೋರ್ಗ್ರೌಂಡ್ ( Android Foreground) ಸೇವೆಗಳಲ್ಲಿ ದೋಷವನ್ನು ಕಂಡುಹಿಡಿದು ವರದಿ ಮಾಡಿದ್ದಕ್ಕಾಗಿ ಗೂಗಲ್, ಭಾರತದ ರೋನಿ ದಾಸ್ (Rony Das) ಅವರಿಗೆ ಬಹುಮಾನ ನೀಡಿದೆ. ಹ್ಯಾಕರ್‌ಗಳು ಫೋನ್‌ಗೆ ಪ್ರವೇಶಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸುಲಭವಾಗಿ ಬಳಸಿಕೊಳ್ಳಬಹುದಾದ ದೋಷವನ್ನು (Android Bug) ಅಸ್ಸಾಂ ಮೂಲದ ದಾಸ್ ಗೂಗಲ್‌ಗೆ ತಿಳಿಸಿದ್ದರು. ಈ ಬೆನ್ನಲ್ಲೇ ಗೂಗಲ್‌ನಿಂದ ಬಹುಮಾನವಾಗಿ $5,000, ಅಂದರೆ ಸರಿಸುಮಾರು 3.5 ಲಕ್ಷ ರೂ. ಮೊತ್ತವನ್ನು ರೋನಿ ಪಡೆದುಕೊಂಡಿದ್ದಾರೆ.
ಸೈಬರ್ ಸೆಕ್ಯೂರಿಟಿ (Cyber Security) ತಜ್ಞರಾಗಿರುವ ದಾಸ್, ಈ ವರ್ಷದ ಮೇ ತಿಂಗಳಲ್ಲಿ ಗೂಗಲ್‌ಗೆ ದೋಷವನ್ನು ವರದಿ ಮಾಡಿದ್ದರು. ಗೂಗಲ್ ಆಂಡ್ರಾಯ್ಡ್ ಸೆಕ್ಯುರಿಟಿ ಟೀಮ್‌ನ ಇಮೇಲ್ ಪ್ರಕಾರ, ದಾಸ್ ಅವರು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಅಪ್ಲಿಕೇಶನ್ ರಚಿಸುವಾಗ ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿದಾಗ ಆಂಡ್ರಾಯ್ಡ್ ಫೋರ್ಗ್ರೌಂಡ್ ಸೇವೆಗಳಲ್ಲಿ ಈ ದೋಷವನ್ನು ಕಂಡುಹಿಡಿದಿದ್ದರು
undefined
“ನಿಮ್ಮ ಪ್ರಯತ್ನಗಳ ಗುರುತಿಸುವಿಕೆಯಾಗಿ, ನಾವು ನಿಮಗೆ $5000 ಬಹುಮಾನವನ್ನು ನೀಡಲು ಬಯಸುತ್ತೇವೆ. ನೀವು ಒದಗಿಸಿದ ಉತ್ತಮ-ಗುಣಮಟ್ಟದ ವರದಿ ಮತ್ತು ಅನುಸರಣಾ ಮಾಹಿತಿಗಾಗಿ ಧನ್ಯವಾದಗಳು ಎಂದು" ಎಂದು ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ತಂಡವು ದಾಸ್‌ಗೆ ಇಮೇಲ್‌ನಲ್ಲಿ ತಿಳಿಸಿದೆ ಎಂದು The East Mojo ವರದಿ ಮಾಡಿದೆ.
ಕ್ಯಾಮರಾ, ಮೈಕ್ರೊಫೋನ್ ಮತ್ತು ಲೋಕೇಶನ್ ಹ್ಯಾಕ್!
ದಾಸ್ ಅವರ ಪ್ರಕಾರ, ಅವರು ಕಂಡುಕೊಂಡ ದೋಷವು ಆಂಡ್ರಾಯ್ಡ್ ಫೋರ್ಗ್ರೌಂಡ್ ಸೇವೆಗಳನ್ನು ಬಳಸುವ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ. ಈ ದುರ್ಬಲತೆಯನ್ನು ಬಳಸಿಕೊಂಡು ಸಲಿಸಾಗಿ ಹ್ಯಾಕರ್‌ಗಳು ಪತ್ತೆ ಪ್ರಕ್ರಿಯೆಯನ್ನು ಬೈಪಾಸ್ ಮಾಡಬಹುದು. ಈ ಆ್ಯಂಡ್ರಾಯ್ಡ್ ದೋಷ , ಬಳಕೆದಾರರಿಗೆ ತಿಳಿಸದೆ ಅಥವಾ ಯಾವುದೇ ಅಧಿಸೂಚನೆಯನ್ನು ಕಳುಹಿಸದೆಯೇ ಹಿನ್ನೆಲೆಯಿಂದ ಕ್ಯಾಮರಾ, ಮೈಕ್ರೊಫೋನ್ ಮತ್ತು ಲೋಕೇಶನ್‌ನಂತಹ ಫೋನ್‌ನ ಹಾರ್ಡ್‌ವೇರ್ ಅನ್ನು ಪ್ರವೇಶಿಸಲು ಸಾಧ್ಯವಿತ್ತು.
ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ದಾಸ್ ನಿರಾಕರಣೆ!
ಈ ದೋಷವನ್ನು ಗೂಗಲ್‌ಗೆ ವರದಿ ಮಾಡಿದ ನಂತರ, ದಾಸ್ ಅವರು ಟೆಕ್ ದೈತ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಅವರ ಸಹಾಯದಿಂದ ಗೂಗಲ್ ದುರ್ಬಲತೆಯನ್ನು ಸರಿಪಡಿಸಲು ಸಾಧ್ಯವಾಯಿತು. ಗೌಪ್ಯತೆಯ ಕಾರಣ ನೀಡಿ ಈ ದುರ್ಬಲತೆಯ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ದಾಸ್ ನಿರಾಕರಿಸಿದ್ದಾರೆ.
ಈ ದೋಷದ ಕುರಿತು ಗೂಗಲ್ ಕೂಡ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದ್ದರಿಂದ, ಈ ದುರ್ಬಲತೆಯು ನಿಮ್ಮ ಫೋನ್‌ನ ಮೇಲೆ ಪರಿಣಾಮ ಬೀರಿದೆಯೇ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಗೂಗಲ್ ಈ ಬಗ್ಗೆ ಇನ್ನಷ್ಟೇ ಉತ್ತರವನ್ನು ನೀಡಬೇಕಿದೆ. ಆದರೆ ಆ್ಯಂಡ್ರಾಯ್ಡ್ ದೋಷ ಸ್ವರೂಪವನ್ನು ಗಮನಿಸಿದರೆ, ಬ್ಯಾಕೆಂಡ್ ಅಪ್‌ಡೇಟ್‌ನ ಭಾಗವಾಗಿ ಈ ದೋಷ ಈಗಾಗಲೇ ನಿಮ್ಮ ಮೊಬೈಲ್ ತಲುಪಿರಬಹುದು. ಗೂಗಲ್ ಅಪ್ಡೇಟ್‌ನಿಂದ ಇದು ಸರಿಯಾಗುವ ಸಾಧ್ಯತೆಗಳಿವೆ.
ಸೈಬರ್ ಕ್ಷೇತ್ರದಲ್ಲಿ ಹೆಚು ಆಸಕ್ತಿ!
ದಾಸ್ ಅವರು ಸೈಬರ್ ಕ್ಷೇತ್ರದಲ್ಲಿ ತಮಗೆ ಹೆಚ್ಚು ಆಸಕ್ತಿ ಎಂದು ಹೇಳಿದ್ದಾರೆ. ಮತ್ತು ಈ ಹಿಂದೆ ಗೌಹಾಟಿ ವಿಶ್ವವಿದ್ಯಾಲಯದ (Guwahati University) ಅಧಿಕೃತ ವೆಬ್‌ಸೈಟ್‌ನಲ್ಲಿ ದೋಷ ಪತ್ತೆ ಮಾಡಿದ್ದರು. ರೋನಿ ಈಗ ವರದಿ ಮಾಡಿದ ದೋಷವು ಬಹುಮುಖ್ಯವಾಗಿದ್ದು ಹ್ಯಾಕರ್‌ಗಳು ರಹಸ್ಯವಾಗಿ ಫೋನ್‌ಗಳನ್ನು ಪ್ರವೇಶಿಸಲು ಬಳಸಬಹುದಾದ ಮಾರ್ಗವನ್ನು ಹೊಡೆದು ಹಾಕಿದೆ. ಗೂಗಲ್, ಆಪಲ್, ಫೇಸ್‌ಬುಕ್‌ನಂತಹ ಟೆಕ್ ಕಂಪನಿಗಳು ಬಗ್‌ಗಳನ್ನು (ದೋಷ) ಹುಡುಕಲು ಸಂಶೋಧಕರು, ಎಂಜಿನಿಯರ್‌ಗಳು ಮತ್ತು ಸೈಬರ್ ತಜ್ಞರಿಗೆ ಬಗ್ ಬೌಂಟಿಗಳನ್ನು (ಬಹುಮಾನ) ನೀಡುತ್ತವೆ. ಆದ್ದರಿಂದ ನೀವು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದರೆ, ನೀವು ಸಹ ಬಹುಮಾನವನ್ನು ಗೆಲ್ಲಬಹುದು.
ಇದನ್ನೂಓದಿ:
1) Google Most Searched: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪೈಕಿ ನಮ್ಮ ಪುನೀತ್ ರಾಜ್‌ಕುಮಾರ್!
2) Most Downloaded App: 2021ರಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆ್ಯಪ್ : ಟಿಕ್ ಟಾಕ್‌ಗೆ ಅಗ್ರಸ್ಥಾನ!
3) Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ವಿಷಯ ಯಾವುದು ಗೊತ್ತಾ?