ಫ್ಲಿಪ್‌ಕಾರ್ಟ್ 2021 ರ ಬಿಗ್ ಸೇವಿಂಗ್ ಡೇಸ್ ಎಂದು ಕರೆಯಲ್ಪಡುವ ವರ್ಷದ ಕೊನೆಯ ಅತಿದೊಡ್ಡ ಸೇಲ್ ಪ್ರಾರಂಭಿಸಿದೆ. ಈ ಸೇಲ್‌ನಲ್ಲಿ Realme ಹಲವು ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ.
Tech Desk: ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೆಲ್ (Flipkart Big Saving Days) ಪ್ರಾರಂಭವಾಗಿದೆ, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹಲವು ಆಫರ್‌ಗಳಿವೆ. ವರ್ಷಾಂತ್ಯದ ಮೊದಲು ನೀವು ಸ್ಮಾರ್ಟ್‌ಫೋನ್ ಖರೀದಿಯನ್ನು ಮಾಡಲು ಬಯಸಿದರೆ, ಇದು ಸರಿಯಾದ ಸಮಯ. ಫ್ಲಿಪ್‌ಕಾರ್ಟ್ ಬೇರೆ ವಿಭಾಗಗಳಿಗಿಂತ ಫೋನ್‌ಗಳಲ್ಲಿ ಕೆಲವು ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ದೇಶದ ಅತಿ ಹೆಚ್ಚು ಮಾರಾಟವಾಗುವ ಮೊಬೈಲ್‌ಗಳಲ್ಲಿ ಎರಡನೇ ಸ್ಥಾನ ಪಡೆದಿರುವ ರಿಯಲಮಿ ಮೊಬೈಲ್‌ಗಳ (Realme) ಭರ್ಜರಿ ರಿಯಾಯಿತಿಗಳಿವೆ. ಕೈಗೆಟುಕುವ ಮತ್ತು ಇಂಟರಸ್ಟಿಂಗ್ ಫೀಚರ್ಸ್ ಇರುವ ನಾರ್ಜೋ-ಸರಣಿಯ ಫೋನ್ ಅಥವಾ ಗೇಮಿಂಗ್- ಕೇಂದ್ರಿತ ಹಾರ್ಡ್‌ವೇರ್ ಹೊಂದಿರುವ ಪ್ರೀಮಿಯಂ ಫೋನ್ GT Neo 2 ಗಳೂ ಕೂಡ ರಿಯಾಯಿತಿ ದರಲ್ಲಿವೆ.
ರಿಯಲ್‌ಮಿ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಭಾಗವಹಿಸುತ್ತಿದೆ, ಆದ್ದರಿಂದ ಇದು ಬಹುತೇಕ ಎಲ್ಲಾ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ರಿಯಾಯಿತಿ ಬೆಲೆಯಲ್ಲಿ ನೀಡುತ್ತಿದೆ. ಮತ್ತು ಈ ರಿಯಾಯಿತಿಗಳ ಮೇಲೆ ಪ್ರತ್ಯೇಕವಾಗಿ ಬ್ಯಾಂಕ್ ಕೊಡುಗೆಗಳಿವೆ. ನೀವು SBI ಕ್ರೆಡಿಟ್ ಕಾರ್ಡ್ ಹೊಂದಿರುವವರಾಗಿದ್ದರೆ, ನೀವು ಮುಂಗಡ ಮತ್ತು EMI ವಹಿವಾಟುಗಳೆರಡರಲ್ಲೂ ಹೆಚ್ಚಿನ 10 ಪ್ರತಿಶತ ರಿಯಾಯಿತಿ ಪಡೆಯುತ್ತಿರಿ. ಈ ಮೂಲಕ ನೀವು ಮತ್ತಷ್ಟು ಡಿಸ್ಕೌಂಟ್ ಪಡೆಯಬಹುದು. ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರಿಯಲ್‌ಮಿ ಫೋನ್‌ಗಳಲ್ಲಿ ಕೆಲವು ಕೊಡುಗೆಗಳು ಇಲ್ಲಿವೆ.
Realme GT Neo 2 at Rs 4,000 off
ಇತ್ತೀಚೆಗೆ ಬಿಡುಗಡೆಯಾದ GT Neo 2 ಇದೀಗ ಅದರ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ, ನೀವು GT Neo 2 ನ ಎರಡು ಮಾದರಿಗಳಿಗೆ ಕ್ರಮವಾಗಿ ರೂ 27,999 ಮತ್ತು ರೂ 31,999 ಪಾವತಿಸಬೇಕಾಗುತ್ತದೆ. ಇದರರ್ಥ ರೂ 4,000 ರಿಯಾಯಿತಿ. ಆದರೆ, ಈ ರಿಯಾಯಿತಿಗಳನ್ನು ಪಡೆಯಲು, ನೀವು ಪ್ರಿಪೇಯ್ಡ್ ಆರ್ಡರ್ ಮಾಡಬೇಕಾಗುತ್ತದೆ, ಅಂದರೆ ಕ್ಯಾಶ್ ಆನ್ ಡೆಲಿವರಿ ಆರ್ಡರ್‌ಗಳಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ.
Realme GT Neo 2 ವಿಶಿಷ್ಟ ವಿನ್ಯಾಸ, ಹೆಚ್ಚಿನ ರಿಫ್ರೆಶ್ ದರದ OLED ಡಿಸ್ಪ್ಲೇ, ಉತ್ತಮ ಹ್ಯಾಪ್ಟಿಕ್ ಪ್ರತಿಕ್ರಿಯೆ ಮತ್ತು Qualcomm Snapdragon 870 ಪ್ರೊಸೆಸರ್ ಹೊಂದಿರುವ ಪ್ರಭಾವಶಾಲಿ ಫೋನ್ ಆಗಿದೆ.
Realme Narzo 50A at Rs 10,499
ಅತ್ಯುತ್ತಮ ಕೈಗೆಟುಕುವ ಫೋನ್‌ಗಳಲ್ಲಿ Realme Narzo 50A ಕೂಡ ಒಂದು. ಇದು ಈ ವರ್ಷದ ಆರಂಭದಲ್ಲಿ ಜನಸಾಮಾನ್ಯರಿಗೆ ಗೇಮಿಂಗ್ ಫೋನ್ ಆಗಿ ಬಿಡುಗಡೆ ಮಾಡಲಾಗಿತ್ತು ಮತ್ತು ಕೆಲವು ವೈಶಿಷ್ಟ್ಯಗಳನ್ನು ಗಮನಿಸಿದರೆ ಇದು ಗೇಮಿಂಗ್ ಫೋನ್ ಹೌದು! Realme Narzo 50A ರೂ 11,499 ರಿಂದ ಪ್ರಾರಂಭವಾಗುತ್ತದೆ, ಆದರೆ ನೀವು ಅದನ್ನು ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಖರೀದಿಸಿದರೆ, ರೂ 1,000 ರಿಯಾಯಿತಿಯ ನಂತರ ನೀವು ಕೇವಲ 10,499 ರೂಗಳಲ್ಲಿ ಈ ಮೊಬೈಲ್ ಪಡೆಯುತ್ತಿರಿ. ಈ ಆಫರ್ ಕೂಡ ಪ್ರಿಪೇಯ್ಡ್ ಆರ್ಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
Realme Narzo 50A 6.5-ಇಂಚಿನ HD+ ಡಿಸ್ಪ್ಲೇ, MediaTek Helio G85 ಪ್ರೊಸೆಸರ್, 4GB RAM, 128GB ವರೆಗೆ ಸಂಗ್ರಹಣೆ, 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 6000mAh ಬ್ಯಾಟರಿಯೊಂದಿಗೆ ಬರುತ್ತದೆ.
Realme 8 5G at Rs 2,000 off
ರಿಯಲ್ ಮಿ ನಂಬರ್ ಸರಣಿಯ ಮೊದಲ 5G ಫೋನ್ Realme 8 5G ಆಗಿದೆ. ಇದನ್ನು ಈ ವರ್ಷದ ಆರಂಭದಲ್ಲಿ ರೂ 18,499 ಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ,ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ, ನೀವು ಅದನ್ನು ರೂ 2,000 ರಿಯಾಯಿತಿಯಲ್ಲಿ ಖರೀದಿಸಬಹುದು. ಇದರರ್ಥ Realme 8 ನ ಆರಂಭಿಕ ಬೆಲೆ ಇದೀಗ 16,499 ರೂ. ರಿಯಾಯಿತಿಯನ್ನು ಪಡೆಯಲು ನೀವು ಪ್ರಿಪೇಯ್ಡ್ ಆರ್ಡರ್ ಮಾಡಬೇಕಾಗುತ್ತದೆ.
Realme 8 5G, 6.5-ಇಂಚಿನ Full HD+ ಡಿಸ್ಪ್ಲೇ, MediaTek Dimensity 700 ಪ್ರೊಸೆಸರ್, 48-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸಿಸ್ಟಮ್, 8 ಜಿಬಿ RAM ಮತ್ತು ಗ್ 5000mAh ಬ್ಯಾಟರಿಯನ್ನು ಜತೆಗೆ ವೇಗದ ಚಾರ್ಚಿಂಗ್ ಒಳಗೊಂಡಿದೆ.
Realme GT Master Edition at Rs 4,000 off
ಕಂಪನಿಯ ಅತ್ಯಂತ ಸುಂದರವಾದ ಫೋನ್‌ಗಳಲ್ಲಿ ಒಂದಾಗಿರುವ Realme GT ಮಾಸ್ಟರ್ ಆವೃತ್ತಿಯು ಇದೀಗ ರೂ 4,000 ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ಇದರರ್ಥ ಎಂಟ್ರಿ ಮಾಡೆಲ್‌ಗೆ ಮೂಲ ಬೆಲೆ 25,999 ಪಾವತಿಸುವ ಬದಲು, ನೀವು ಅದನ್ನು ಫ್ಲಿಪ್‌ಕಾರ್ಟ್‌ನಲ್ಲಿ 21,999 ರೂ.ಗೆ ಖರೀದಿಸಬಹುದು. ಈ ಆಫರ್‌ಗೂ ಕೂಡ ಪ್ರಿಪೇಯ್ಡ್ ಆರ್ಡರ್ ಅತ್ಯಗತ್ಯ
Realme GT ಮಾಸ್ಟರ್ ಆವೃತ್ತಿಯು 6.43-ಇಂಚಿನ Full-HD+ ಡಿಸ್ಪ್ಲೇ, Qualcomm Snapdragon 778G ಪ್ರೊಸೆಸರ್, 64-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ ಮತ್ತು 8GB RAM ನೊಂದಿಗೆ ಬರುತ್ತದೆ.
ಇದನ್ನೂ ಓದಿ:
1) Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ?
2) iphone 14 Features Leaked: 48MP ವೈಡ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಹೊಸ ಐಫೋನ್?
3) Phone Battery Draining: ನಿಮ್ಮ ಫೋನ್ ಬ್ಯಾಟರಿ ಬೇಗ ಖಾಲಿಯಾಗ್ತಿದ್ಯಾ? ಹಾಗಾದ್ರೆ ಈ 5 ಟಿಪ್ಸ್ ತಪ್ಪದೇ ಪಾಲಿಸಿ!