
ವಾಷಿಂಗ್ಟನ್(ಜ.12): ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.
OSIRIS-REx ನೌಕೆಯಿಂದ ಕ್ಲಿಕ್ಕಿಸಿದ ಈ ಫೋಟೋದಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು ಕ್ಷುದ್ರಗ್ರಹ ಒಂದೇ ಫ್ರೇಮ್ ನಲ್ಲಿ ಸೆರೆಯಾಗಿದೆ.
OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದಿಂದ ಕೇವಲ 43 ಕಿ.ಮೀ. ದೂರ ಇದ್ದು, ಇದೇ ವೇಳೆ ಕಳೆದ ಡಿ.03 ರಂದು OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದ ಕೇಂದ್ರದಿಂದ ಕೇವಲ 1.6 ಕಿ.ಮೀ. ದೂರದಲ್ಲಿ ಹಾದು ಹೋಗುವ ಮೂಲಕ, ಮಾನವ ನಿರ್ಮಿತ ನೌಕೆಯೊಂದು ಯಾವುದೇ ಖಗೋಳೀಯ ವಸ್ತುವಿಗೆ ಇಷ್ಟು ಸಮೀಪ ಹೋದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅದರಂತೆ 2020ರಲ್ಲಿ OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದ ಮಾದರಿ ತುಣುಕೊಂದನ್ನು ಸಂಗ್ರಹಿಸಲಿದ್ದು, ಇದರ ಅಧ್ಯಯನಕ್ಕೆ ಸಹಾಯಕಾರಿಯಾಗಲಿದೆ.
ಇನ್ನು OSIRIS-REx ನೌಕೆ ಈ ಫೋಟೋ ಕ್ಲಿಕ್ಕಿಸುವಾಗ ಬೆನ್ನು ಕ್ಷುದ್ರಗ್ರಹ ಭೂಮಿಯಿಂದ 114 ಮಿಲಿಯನ್ ಕಿ.ಮೀ. ದೂರ ಇತ್ತು ಎಂದು ನಾಸಾ ತಿಳಿಸಿದೆ.
ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.