ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!

By Web DeskFirst Published Jan 11, 2019, 5:47 PM IST
Highlights

ಕೊನೆಗೂ ಸಿಕ್ತು ಚಂದ್ರನ ಹಿಂಭಾಗ ದರ್ಶನದ ಸೌಭಾಗ್ಯ| ಚೀನಾದ ಚ್ಯಾಂಗ್ ಇ-4 ನೌಕೆಯಿಂದ ಚಂದ್ರನ ಹಿಂಭಾಗದ ಫೋಟೋ| 360 ಡಿಗ್ರಿ ಪನೋರಮಾ ಫೋಟೋ ಕಳುಹಿಸಿದ ನೌಕೆ| ಚಂದ್ರನ ಅಧ್ಯಯನ ನಡೆಸಲಿದೆ ಯುಟು-2 ರೋವರ್

ಬಿಜಿಂಗ್(ಜ.11): ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ.

ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ಚ್ಯಾಂಗ್ ಇ-4 ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.

First 360 panoramic images from Chang'e 4!

ℹ:https://t.co/Rsg27T1QX8 pic.twitter.com/Jgb0DS1xYy

— LaunchStuff (@LaunchStuff)

ಇದೇ ವೇಳೆ ಚ್ಯಾಂಗ್ ಇ-4 ನೌಕೆಯಿಂದ ಯುಟು-2 ರೋವರ್ ಬೇರ್ಪಟ್ಟಿದ್ದು, ಇದು ಚಂದ್ರನ ಹಿಂಭಾಗದ ನೆಲದ ಅಧ್ಯಯನ ನಡೆಸಲಿದೆ. ನೌಕೆ ಸೌರಮಂಡಲದ ಅತಿ ದೊಡ್ಡ ಕುಳಿ ಎಂದೇ ಹೆಸರುವಾಸಿಯಾಗಿರುವ ಚಂದ್ರನ ದಕ್ಷಿಣ ಧ್ರುವದ ಐಟ್ಕನ್ ಬೇಸಿನ್ನಲ್ಲಿ ಯಶಸ್ವಿಯಾಗಿ ಇಳಿದಿದೆ.

ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ

ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

click me!