ಡ್ರೋನ್‌ ಚಲಾಯಿಸಲು ಇನ್ನ್ಮುಂದೆ ಪೈಲಟ್ ಲೈಸೆನ್ಸ್ ಅಗತ್ಯವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ!

By Suvarna News  |  First Published Feb 13, 2022, 3:22 PM IST

ದೇಶದಲ್ಲಿ ಡ್ರೋನ್‌ಗಳನ್ನು ಚಲಾಯಿಸಲು ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ರದ್ದುಗೊಳಿಸಿದೆ


ನವದೆಹಲಿ (ಫೆ. 13): ದೇಶದಲ್ಲಿ ಡ್ರೋನ್‌ಗಳನ್ನು ಚಲಾಯಿಸಲು ಡ್ರೋನ್ ಪೈಲಟ್ ಪರವಾನಗಿ (Drone Pilot Licence) ಅಗತ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ರದ್ದುಗೊಳಿಸಿದೆ. ಡಿಜಿಸಿಎ-ಅನುಮೋದಿತ ಡ್ರೋನ್ ಶಾಲೆಯಿಂದ ಸಿಂಗಲ್ ವಿಂಡೋ ಡಿಜಿಟಲ್ ಸ್ಕೈ (DigitalSky) ಪ್ಲಾಟ್‌ಫಾರ್ಮ್ ಮೂಲಕ ನೀಡಲಾದ ರಿಮೋಟ್ ಪೈಲಟ್ ಪ್ರಮಾಣಪತ್ರ (Remote Pilot Certificate) ಭಾರತದಲ್ಲಿ ಡ್ರೋನ್ ಕಾರ್ಯನಿರ್ವಹಿಸಲು ಸಾಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಣಿಜ್ಯೇತರ ಉದ್ದೇಶಗಳಿಗಾಗಿ 2 ಕೆಜಿ ವರೆಗಿನ ಡ್ರೋನನ್ನು ನಿರ್ವಹಿಸಲು ಯಾವುದೇ ರಿಮೋಟ್ ಪೈಲಟ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಅಧಿಕಾರಿ ತಿಳಿದ್ದಾರೆ ಎಂದು ಗ್ಯಾಜೆಟ್‌ 360 ವರದಿ ಮಾಡಿದೆ. 

ಡ್ರೋನ್ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸಚಿವಾಲಯವು ಹೊರಡಿಸಿದ್ದು  ಫೆಬ್ರವರಿ 11 ರಿಂದ ಜಾರಿಗೆ ಬರುವಂತೆ ಡ್ರೋನ್ ಪೈಲಟ್ ಪರವಾನಗಿಯ ಅಗತ್ಯವನ್ನು ರದ್ದುಗೊಳಿಸಲಾಗಿದೆ. ದೇಶದಲ್ಲಿ ಡ್ರೋನ್‌ಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ಕೆಲವು ವಿನಾಯಿತಿಗಳೊಂದಿಗೆ ಸರ್ಕಾರವು ಡ್ರೋನ್‌ಗಳ ಆಮದನ್ನು ನಿಷೇಧಿಸಿದ  ನಂತರ ಈಗ ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ಸರ್ಕಾರ ರದ್ದುಗೊಳಿಸಿದೆ. 

Tap to resize

Latest Videos

ಇದನ್ನೂ ಓದಿ: Punjab: ಡ್ರೋನ್‌ನಲ್ಲಿ ಆರ್‌ಡಿಎಕ್ಸ್‌, ಬಾಂಬ್‌ ತಯಾರಿಕೆ ಸಾಧನ ಕಳಿಸಿದ ಪಾಕಿಸ್ತಾನ

ಸಚಿವಾಲಯವು ಆಗಸ್ಟ್ 2021 ರಲ್ಲಿ ಉದಾರೀಕೃತ ಡ್ರೋನ್ ನಿಯಮಗಳನ್ನು ಹೊರತಂದಿತು. ನಿಯಮಗಳ ನಂತರ, ಸಚಿವಾಲಯವು ಸೆಪ್ಟೆಂಬರ್ 2021 ರಲ್ಲಿ ಡ್ರೋನ್ ಏರ್‌ಸ್ಪೇಸ್ ನಕ್ಷೆ ಮತ್ತು ಪ್ರೊಡಕ್ಟ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ, ಅಕ್ಟೋಬರ್ 2021 ರಲ್ಲಿ UTM Policy ಚೌಕಟ್ಟನ್ನು ಬಿಡುಗಡೆ ಮಾಡಿದೆ. ಜೊತೆಗೆ, ಡ್ರೋನ್ ಪ್ರಮಾಣೀಕರಣ ಯೋಜನೆ ಮತ್ತು ಸಿಂಗಲ್ ವಿಂಡೋ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮನ್ನು ಕಳೆದ ತಿಂಗಳು ಜಾರಿಗೆ ತರಲಾಗಿದೆ.

ಡ್ರೋನ್‌ ಆಮದು ನಿಷೇಧ: ರಕ್ಷಣೆ, ಭದ್ರತೆ ಮತ್ತು ಸಂಶೋಧನೆ ಉದ್ದೇಶಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗೆ ಡ್ರೋನ್‌ಗಳ ಆಮದು ಮಾಡಿಕೊಳ್ಳುವುದನ್ನು ಸರ್ಕಾರ ನಿಷೇಧಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಅಧಿಸೂಚನೆಯ ಪ್ರಕಾರ 'ಮೇಡ್ ಇನ್ ಇಂಡಿಯಾ' ಡ್ರೋನ್‌ಗಳನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಡ್ರೋನ್ ಬಿಡಿಭಾಗಗಳ ಆಮದಿಗೆ ನಿಷೇಧ ಅನ್ವಯಿಸುವುದಿಲ್ಲ.

ಇದನ್ನೂ ಓದಿ: Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!

ರ್ಕಾರಿ ಘಟಕಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು, ಸರ್ಕಾರದಿಂದ ಗುರುತಿಸಲ್ಪಟ್ಟ R&D ಘಟಕಗಳು ಮತ್ತು R&D ಉದ್ದೇಶಗಳಿಗಾಗಿ ಡ್ರೋನ್ ತಯಾರಕರು ಡ್ರೋನ್‌ಗಳ ಆಮದು ಮಾಡಿಕೊಳ್ಳಲು CBU, SKD ಅಥವಾ CKD ರೂಪದಲ್ಲಿ ಅನುಮತಿಸಲಾಗುತ್ತದೆ. ಇದು ಸಂಬಂಧಪಟ್ಟ  ಸಚಿವಾಲಯಗಳೊಂದಿಗೆ ಸಮಾಲೋಚಿಸಿ DGFT ನೀಡಿದ ಆಮದು ಅಧಿಕಾರಕ್ಕೆ ಒಳಪಟ್ಟಿರುತ್ತದೆ.

ರಕ್ಷಣಾ ಮತ್ತು ಭದ್ರತಾ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳಲು CBU, SKD ಅಥವಾ CKD ಮೂಲಕ ಲಭ್ಯವಿರುತ್ತದೆ. ಆದರೆ ಸಂಬಂಧಪಟ್ಟ  ಸಚಿವಾಲಯಗಳೊಂದಿಗೆ ಸಮಾಲೋಚಿಸಿ DGFT ನೀಡಿದ ಆಮದು ಅಧಿಕಾರಕ್ಕೆ ಇದು ಒಳಪಟ್ಟಿರುತ್ತದೆ.

ಆತ್ಮನಿರ್ಭರ ಭಾರತಕ್ಕೆ ಒತ್ತು: ರಕ್ಷಣಾ ಪಡೆಗಳ ಸಶಸ್ತ್ರೀಕರಣಕ್ಕೆ ರಫ್ತಿನ ಮೇಲಿನ ಅವಲಂಬನೆ ತಗ್ಗಿಸಿ ಆತ್ಮನಿರ್ಭರ ಭಾರತದಡಿಯಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದಕ್ಕಾಗಿ 2022-23ನೇ ಸಾಲಿನಲ್ಲಿ ಶೇ. 68 ಬಂಡವಾಳವನ್ನು ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲಿಡಲಾಗಿದೆ. ಇದರ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.58 ರಷ್ಟಿತ್ತು

click me!