Garena Free Fire Taken Down: ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಿಂದ ಗೇಮ್ ಇದ್ದಕ್ಕಿದ್ದಂತೆ ಔಟ್!

Published : Feb 13, 2022, 02:51 PM ISTUpdated : Feb 13, 2022, 02:56 PM IST
Garena Free Fire Taken Down: ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಿಂದ ಗೇಮ್ ಇದ್ದಕ್ಕಿದ್ದಂತೆ ಔಟ್!

ಸಾರಾಂಶ

ಆ್ಯಪಲ್‌ನ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಫ್ರಿ ಫೈರ್ ಬ್ಯಾಟಲ್ ರಾಯಲ್ ಗೇಮ್ ಅನ್ನು ಇಂದು ತೆಗೆದುಹಾಕಲಾಗಿದೆ. ಇದು ಇನ್ನು ಮುಂದೆ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುವುದಿಲ್ಲ.‌

Tech Desk: ಭಾರತದಲ್ಲಿನ ಆ್ಯಪಲ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಿಂದ ಗರೇನಾ  ಫ್ರೀ ಫೈರ್ ಗೇಮನ್ನು (Free Fire) ಇದ್ದಕ್ಕಿದ್ದಂತೆ ತೆಗೆದುಹಾಕಲಾಗಿದೆ. ಫೆಬ್ರವರಿ 12 ರಿಂದ ಡೌನ್‌ಲೋಡ್ ಮಾಡಲು ಅಪ್ಲಿಕೇಶನ್ ಲಭ್ಯವಿಲ್ಲ.ಗೂಗಲ್‌ ಫ್ಲೇ ಸ್ಟೋರ್  ಮತ್ತು ಆ್ಯಪಲ್  ಆಪ್ ಸ್ಟೋರ್‌ನಿಂದ ಅಪ್ಲಿಕೇಶನನ್ನು ತೆಗೆದುಹಾಕುವ ಹಿಂದಿನ ನಿರ್ದಿಷ್ಟ ಕಾರಣವನ್ನು ಗರೆನಾ (Garena) ಇನ್ನೂ ಬಹಿರಂಗಪಡಿಸಿಲ್ಲ. ಐಓಎಸ್ (iOS) ಮತ್ತು ಆ್ಯಂಡ್ರಾಯ್ಡ್ (Android) ಪ್ಲಾಟ್‌ಫಾರ್ಮ್‌ಗಳಲ್ಲಿ ಆಟದ ಹಠಾತ್ ಕಣ್ಮರೆಯಾಗಿರುವುದು ಗೇಮಿಂಗ್ ಸಮುದಾಯದಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.‌ಪ್ರಸ್ತುತ ಭಾರತದಲ್ಲಿ ಫ್ರೀ ಫೈರ್  ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು  ಲಭ್ಯವಿಲ್ಲದಿದ್ದರೂ, ತಮ್ಮ ಸಾಧನದಲ್ಲಿ ಈಗಾಗಲೇ ಆಟವನ್ನು ಡೌನ್‌ಲೋಡ್‌ ಮಾಡಿರುವ ಬಳಕೆದಾರರು ಅಪ್ಲಿಕೇಶನ್ ಮೂಲಕ ಆಟಕ್ಕೆ ಆಕ್ಸಸ್‌ ಪಡೆಯಬಹುದು.

ಫ್ರಿ ಫೈರ್ ಮ್ಯಾಕ್ಸ್ ಲಭ್ಯ: ಅಪಾರ ಜನಪ್ರಿಯತೆ ಹೊಂದಿರುವ ಬ್ಯಾಟಲ್ ರಾಯಲ್ ಆಟದ ಡೆವಲಪರ್ ಗರೆನಾ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡುವ ನಿರೀಕ್ಷೆಯಿದೆ. ಪ್ರಸ್ತುತ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಫ್ರಿ ಫೈರ್ ಮ್ಯಾಕ್ಸ್ (Free Fire Max) ಮಾತ್ರ ಲಭ್ಯವಿದೆ. ಫ್ರಿ ಫೈರ್ ಮತ್ತು ಫ್ರೀ ಫೈರ್ ಮ್ಯಾಕ್ಸ್ ಸೇರಿದಂತೆ ಯಾವುದೇ ಆಟಗಳನ್ನು ಆ್ಯಪಲ್  ಆಪ್  ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ.

ಇದನ್ನೂ ಓದಿ: Gaming Addiction: ಫ್ರೀ ಫೈರ್ ಚಟಕ್ಕೆ ಬಿದ್ದು ತಾಯಿಯ ಚಿನ್ನಾಭರಣಗಳನ್ನೇ ಕದ್ದ ಮಕ್ಕಳು!

ಈ ಬೆಳವಣಿಗೆಯು  ಜನಪ್ರಿಯ ಆನ್‌ಲೈನ್ ಗೇಮ್‌ನ ಫ್ರಿ ಫೈರ್ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ಈ ಆಟಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಆರೋಪಿಸಿ ಹಲವಾರು ವದಂತಿಗಳು ಹರಿದಾಡುತ್ತಿವೆ. ಅದರೆ ಈ ಬಗ್ಗೆ ಗರೆನಾ ಅಥವಾ ಭಾರತ ಸರ್ಕಾರ ಯಾವುದೇ ಸ್ಪಷ್ಟನೆ ಅಥವಾ ಹೇಳಿಕೆ ನೀಡಿಲ್ಲ. ಹೀಗಾಗಿ ಕಂಪನಿಯ ಅಥವಾ ಸರ್ಕಾರದ ಅಧಿಕೃತ ಹೇಳಿಕೆ ನೀಡುವವರೆಗೈ ಇದು ವದಂತಿಯಾಗಿ ಉಳಿಯಲಿದೆ. 

2020ರಲ್ಲಿ ಜನಪ್ರಿಯತೆ ಪಡೆದಿದ್ದ ಗೇಮ್: ಸದ್ಯಕ್ಕೆ ಗರೆನಾ ಅಥವಾ ಫ್ರೀ ಫೈರ್ ಇಂಡಿಯಾದ ಯಾವುದೇ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ. ಫ್ರೀ ಫೈರ್‌ನ ಫೇಸ್‌ಬುಕ್ ಖಾತೆಯು ಪೋಸ್ಟ್‌ನಲ್ಲಿ ಲಾಗಿನ್ ಸಮಸ್ಯೆಗಳ ಬಗ್ಗೆ ತಿಳಿಸಿದ್ದು  ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: PubG Couple: ಪಬ್‌ಜಿ ಲವರ್ಸ್‌ ಪ್ರೇಮ್‌ ಕಹಾನಿ: ಬಂಗಾಳದ ಯುವಕನನ್ನು ವರಿಸಿದ ಕರ್ನಾಟಕದ ಕುವರಿ!

ಅಪ್ಲಿಕೇಶನ್‌ನಲ್ಲಿನ ಇತ್ತೀಚಿನ  ನಂತರ ಈ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಕೆಲವು ವರದಿಗಳು ತಿಳಿಸಿವೆ.   2020 ರಲ್ಲಿ ಭಾರತ ಮತ್ತು ಚೀನಾದ ಪಡೆಗಳ ನಡುವಿನ ಮಾರಣಾಂತಿಕ ಗಾಲ್ವಾನ್ ಘರ್ಷಣೆಯ ನಂತರ, ಭಾರತ ಸರ್ಕಾರವು ಅತ್ಯಂತ ಜನಪ್ರಿಯವಾದ ಪಬ್‌ಜಿ (PUBG) ಮೊಬೈಲ್ ಮತ್ತು  ಪಬ್‌ಜಿ ಮೊಬೈಲ್ ಲೈಟ್ ಸೇರಿದಂತೆ ನೂರಾರು ಚೀನಾ ಮೂಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ಪಬ್‌ಜಿ ಮೊಬೈಲ್ ಆಟವನ್ನು ನಿಷೇಧಿಸಿದ ನಂತರ ಫ್ರೀ ಫೈರ್ ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ