
ನವದೆಹಲಿ(ಜೂ.27): ನೆಚ್ಚಿನ ಸಿನಿಮಾವನ್ನು ಥಿಯೇಟರ್‌ಗೇ ಹೋಗಿ ನೋಡಬೇಕು ಎನ್ನುವ ಕಾಲ ಈಗ ಮರೆಯಾಗಿದೆ. ಸ್ಮಾರ್ಟ್ ಯುಗದಲ್ಲಿರುವುದರಿಂದ ನಮ್ಮ ಜನರದ್ದೂ ಸ್ಮಾರ್ಟ್ ಥಿಂಕಿಂಗ್ ಹೆಚ್ಚಾಗಿದೆ ಎನ್ನಬಹುದು. ಸಿನಿಮಾ ಪ್ರಿಯರಿಗೆ ಈಗಾಗಲೇ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ಹೀಗೆ ಸಾವಿರಾರು ಆಪ್ಷನ್ಸ್ ಇರುವಾಗ ಅದಕ್ಕೆ ಸರಿಹೊಂದುವಂತೆ ಮೊಟೊರೊಲಾ ಕಂಪೆನಿಯ ಮೊಟೊರೊಲಾ ವನ್ ವಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ.
ಇದನ್ನೂ ಓದಿ: Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!
ಸಿನಿಮಾ ನೋಡಲಿಕ್ಕೆ ಬೆಸ್ಟ್ ಫೋನ್ ಎನ್ನುತ್ತಿರುವ ಕಂಪನಿ, ವನ್ ಪ್ಲಸ್ ಮಾದರಿಯಲ್ಲಿ ಇದರ ವಿನ್ಯಾಸವನ್ನು ಕಾಣಬಹುದು. ಇದರಲ್ಲಿ 6.3 ಇಂಚಸ್‌ನ ಸ್ಕ್ರೀನ್ ಟಚ್ ಎಚ್‌ಡಿ ಡಿಸ್‌ಪ್ಲೇ ಇದ್ದು, 21: 9 ರೆಸಲ್ಯೂಷನ್‌ನಲ್ಲಿ ಸಿನಿಮಾ ನೋಡಬಹುದು.
ಕಂಪನಿಯು ಕ್ಯಾಮೆರಾ ಬಗ್ಗೆ ತುಂಬಾ ಗಮನಹರಿಸಿದಂತೆ ಕಾಣುತ್ತದೆ. ಅದಕ್ಕೆ ಎರಡು ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ ಸೊಗಸಾದ ಸುಂದರ ದೃಶ್ಯಗಳನ್ನು ಸೆರೆಹಿಡಿಯಲು 48 ಎಂಪಿ + 5ಎಂಪಿಯ ಎರಡು ಹಿಂಬದಿ ಕ್ಯಾಮೆರಾ ಇದೆ. ಉತ್ತಮ ಸೆಲ್ಫಿಗಾಗಿ 25ಎಂಪಿಯ ಫ್ರಂಟ್ ಕ್ಯಾಮೆರಾ ಅಳವಡಿಸಿದ್ದು ಅದು ಫೋನ್‌ನ ಬಲಭಾಗದಲ್ಲಿ ಕಂಡುಬರುವುದು ವಿಶೇಷ.
ಇದನ್ನೂ ಓದಿ: Infinix Hot 7 Pro ಮಾರುಕಟ್ಟೆಗೆ ಲಗ್ಗೆ; ಇಲ್ಲಿದೆ ಬೆಲೆ ಮತ್ತು ಫೀಚರ್ಸ್
ಈ ವನ್ ವಿಷನ್‌ನಲ್ಲಿ ಟರ್ಬೋ ಪವರ್ ಚಾರ್ಜಿಂಗ್ ಸೌಲಭ್ಯದ 3500ಎಂಎಎಚ್ ಬ್ಯಾಟರಿ ಸಾಮರ್ಥ್ಯ ಇದ್ದು, ಒಂದು ಸಿನಿಮಾವನ್ನು ನೋಡಬಹುದು. 4ಜಿಬಿ ರಾರಯಮ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯದಲ್ಲಿ, ಓಕ್ಟಾಕೋರ್ ಎಕ್ಸಿನೊಸ್ 9609 ಪ್ರೊಸೆಸರ್ ಬಳಸಲಾಗಿದೆ. ಅಪ್ಡೇಟೆಡ್ 9.0 ಪೈ ಆ್ಯಂಡ್ರಾಯ್ಡ್ ವರ್ಷನ್ ಇದರಲ್ಲಿ ಕಾಣಬಹುದು.
ಬ್ರೌನ್ ಹಾಗೂ ನೀಲಿ ಬಣ್ಣದಲ್ಲಿ ಲಭ್ಯವಿರುವ ಈ ಫೋನ್ ಬೆಲೆ 19,999. ಜೂನ್ 27ರಿಂದ ಆನ್‌ಲೈನ್ ಮಾರುಕಟ್ಟೆಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.