ಇನ್ಮುಂದೆ 2 ಫೋನ್‌ಗಳಿಗೆ WhatsApp ಸಪೋರ್ಟ್ ಇಲ್ಲ! ನಿಮ್ದು ಯಾವುದು?

By Web DeskFirst Published Jun 27, 2019, 6:30 PM IST
Highlights

ಈಗಾಗಲೇ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಿಗೆ ಸಪೋರ್ಟ್ ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿರುವ ಜನಪ್ರಿಯ ಮೆಸೇಜಿಂಗ್ ಸೇವೆ WhatsApp, ಆ್ಯಂಡ್ರಾಯಿಡ್ ಮತ್ತು iOS  ಫೋನ್‌ನ ಹಳೇ ಆವೃತ್ತಿಗಳಿಗೆ ಸಪೋರ್ಟ್ ನಿಲ್ಲಿಸಲಿದೆ.

ಬೆಂಗಳೂರು: ಒಂದು ಕಡೆ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದರೆ, ಇನ್ನೊಂದು ಕಡೆ ಅದಕ್ಕೂ ಕೆಲವು ಇತಿಮಿತಿಗಳು ಹುಟ್ಟಿಕೊಳ್ಳುತ್ತವೆ. Facebook ಒಡೆತನದ WhatsApp ಕೂಡಾ ಇದಕ್ಕೆ ಹೊರತಲ್ಲ. ಹಾಗಾಗಿ, ಮುಂದಿನ ವರ್ಷದಿಂದ ಎರಡು ನಮೂನೆಯ ಸ್ಮಾರ್ಟ್‌ಫೋನ್‌ಗಳಿಗೆ WhatsApp ಸಪೋರ್ಟ್ ಸಿಗಲ್ಲ ಎಂದು ಕಂಪನಿಯು ಪ್ರಕಟಿಸಿದೆ.

ಫೆಬ್ರವರಿ 1, 2020ರಿಂದ ಆ್ಯಂಡ್ರಾಯಿಡ್ 2.3.7  ಮತ್ತು iOS 7 ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಿಗೆ WhatsApp ಸಪೋರ್ಟನ್ನು ಸ್ಥಗಿತಗೊಳಿಸಲಿದೆ.

ಈ ವಿಷಯವನ್ನು ಪ್ರಕಟಿಸಿರುವ WhatsApp, ನಿಗದಿತ ದಿನಾಂಕದ ಬಳಿಕ, ಆ್ಯಂಡ್ರಾಯಿಡ್ 2.3.7  ಮತ್ತು iOS 7 ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಲ್ಲಿ ಹೊಸ ಅಕೌಂಟನ್ನು ತೆರೆಯುವುದಾಗಲಿ ಅಥವಾ ಹಾಲಿ ಇರೋ ಅಕೌಂಟ್ ಗಳನ್ನು ವೆರಿಫೈ ಮಾಡೋದಾಗಲಿ ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿ | WhatsApp ಆಗಲಿದೆ ಇನ್ನಷ್ಟು ಇಂಟರೆಸ್ಟಿಂಗ್: ಬರಲಿವೆ ಈ 5 ಫೀಚರ್ಸ್!

ಈ ಬದಲಾವಣೆಯಿಂದ ಹೆಚ್ಚಿನ ಬಳಕೆದಾರರಿಗೆ ಯಾವುದೇ ತೊಂದರೆಯಿಲ್ಲ ಎಂದು ಇದೇ ಸಂದರ್ಭದಲ್ಲಿ ಕಂಪನಿ ಹೇಳಿದೆ. ಯಾರು ಕಳೆದ 6 ವರ್ಷಗಳಿಂದ ಹೊಸ ಫೋನ್ ಖರೀದಿಸಿಲ್ಲವೋ ಅಥವಾ ಆಪರೇಟಿಂಗ್ ಸಿಸ್ಟಮ್ ಬದಲಾಯಿಸಲ್ಲವೋ ಅವರಿಗೆ ಸಮಸ್ಯೆಯಾಗಲಿದೆ. ಆದರೆ, ಆ ಬಳಕೆದಾರರು ಹಳೇ WhatsAppನ್ನು ಇದ್ದ ಹಾಗೆ ಬಳಸಬಹುದು. 

ಡಿಸೆಂಬರ್ 31ರ ಬಳಿಕ WhatsApp ಸ್ಥಗಿತ:

ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಮುಂಬರುವ ಜುಲೈ 1 ರಿಂದಲೇ  WhatsApp ಸಿಗಲ್ಲ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಲ್ಲಿ ಮುಂಬರುವ ಡಿಸೆಂಬರ್ 31ರಂದು WhatsApp ಸ್ಥಗಿತಗೊಳ್ಳಲಿದೆ. ವರದಿಯೊಂದರ ಪ್ರಕಾರ ಬರೀ 0.24 ಸ್ಮಾರ್ಟ್‌ಫೋನ್  ಬಳಕೆದಾರರು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದಾರೆ.

click me!