ಹೊಗೆ ಉಗುಳುತ್ತಾ ಸಿಡಿದೆದ್ದ ಜ್ವಾಲಾಮುಖಿ ISSನಿಂದ ಕಂಡಿದ್ದು ಹೀಗೆ!

By Web Desk  |  First Published Jun 27, 2019, 12:20 PM IST

ಹೊಗೆಯುಗುಳುತ್ತಾ ಪರ್ವತದಿಂದ ಸಿಡಿದೆದ್ದ ಜ್ವಾಲಾಮುಖಿ| ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗೋಚರ| ISSನಿಂದ ಅದ್ಭುತ ದೃಶ್ಯ ಸೆರೆ ಹಿಡಿದ ಗಗನಯಾತ್ರಿಗಳು| ಜಪಾನ್’ನ ರೈಕೋಕೆ ದ್ವೀಪದ ಪರ್ವತದಲ್ಲಿ ಬಾಯ್ತೆರೆದ ಜ್ವಾಲಾಮುಖಿ| 2 ಸಾವಿರ ಡಿಗ್ರಿ ತಾಪಮಾನ ಹೊಂದಿರುವ ಜ್ವಾಲಾಮುಖಿಯ ಹೊಗೆ| ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಪಷ್ಟವಾಗಿ ಗೋಚರ| 


ರೈಕೋಕೆ(ಜೂ.27): ಜ್ವಾಲಾಮುಖಿಯೊಂದು ಹೊಗೆ ಉಗುಳುತ್ತಾ ಪರ್ವತದಿಂದ ಸಿಡಿದೇಳುವುದನ್ನು ಬಾಹ್ಯಾಕಾಶದಿಂದ ನೋಡಿದರೆ ಹೇಗಿರಬೇಡ?. ಉಸಿರು ಬಿಗಿ ಹಿಡಿದು ಈ ಫೋಟೋ ನೋಡಿ. ಜ್ವಾಲಾಮುಖಿ ಸಿಡಿದೇಳುವ ಫೋಟೋವೊಂದನ್ನು ನಾಸಾ ಅಂತತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದಿದೆ.

ಹೌದು, ಜಪಾನ್’ನ ರೈಕೋಕೆ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಬಾಯ್ತರೆದಿದ್ದು, ದಟ್ಟವಾದ ಹೊಗೆ  ಇಡೀ ಪ್ರದೇಶವನ್ನು ಆವರಿಸಿರುವ ಫೋಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಸೆರೆ ಹಿಡಿದಿದ್ದಾರೆ.

Astronauts aboard the photographed a spectacular plume of ash rising from the Raikoke volcano in the Kuril islands near Asia on June 22. Monitoring volcanic eruptions helps us understand how they affect aviation and climate. More: https://t.co/uHWsGcv9i6 pic.twitter.com/Wf4rAjH9cG

— NASA (@NASA)

Tap to resize

Latest Videos

undefined

ಸುಮಾರು 2 ಸಾವಿರ ಡಿಗ್ರಿ ತಾಪಮಾನ ಹೊಂದಿರುವ ಜ್ವಾಲಾಮುಖಿಯ ಹೊಗೆ ಸುಮಾರು 10 ಮೈಲು ಎತ್ತರಕ್ಕೆ ಚಿಮ್ಮುತ್ತಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಜಪಾನ್ ಸುಪರ್ದಿಯಲ್ಲಿದ್ದ ರೈಕೋಕೆ ಪರ್ವತ ಪ್ರದೇಶ ಎರಡನೇ ಮಹಾಯುದ್ಧದ ಬಳಿಕ ರಷ್ಯಾದ ವಶದಲ್ಲಿದ್ದು, ಉತ್ತರ ಜಪಾನ್’ನಿಂದ ಹಿಡಿದು ಈಶಾನ್ಯ ರಷ್ಯಾದ ಭೂಭಾಗದವರೆಗೆ ಹಬ್ಬಿದೆ.

click me!