ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20 ಲಕ್ಷ ಹೊಸ ಗ್ರಾಹಕರು; ಜಿಯೋ, ಏರ್‌ಟೆಲ್ ಕಳೆದುಕೊಂಡಿದ್ದೆಷ್ಟು?

By Mahmad Rafik  |  First Published Sep 22, 2024, 10:34 AM IST

ಬೆಲೆ ಏರಿಕೆಯ ನಂತರ, ಬಿಎಸ್‌ಎನ್‌ಎಲ್ 20 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ, ಆದರೆ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಗ್ರಾಹಕರನ್ನು ಕಳೆದುಕೊಂಡಿವೆ.


ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ ಪರಿಣಾಮ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನರು ಟೆಲಿಕಾಂ ಕಂಪನಿಗಳು ಹೊಸ ಪ್ಲಾನ್ ಆಫರ್ ನೀಡಿದರೂ ಇವೆಲ್ಲವೂ ಮೊದಲಿಗಿಂತ ಅಧಿಕ ಎಂಬುವುದು ಗಮನಾರ್ಹವಾಗಿದೆ. ಬೆಲೆಗಳನ್ನು ಹೆಚ್ಚಿಸಿಕೊಂಡಿರುವ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಗ್ರಾಹಕರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್‌ಎನ್‌ಎಲ್ ಸಹ ಅನ್‌ಲಿಮಿಟೆಡ್ ಕಾಲ್ ಹಾಗೂ 100 ಎಸ್ಎಂಎಸ್ ಆಫರ್ ನೀಡುತ್ತಿದೆ. ಇದರ ಜೊತೆಯಲ್ಲಿ ಆಫರ್‌ಗಳಿಗೆ ತಕ್ಕಂತೆ ಡೇಟಾ ಸಹ ನೀಡಲಾಗುತ್ತಿದೆ. ಪ್ರತಿದಿನ ವಾಟ್ಸಪ್, ಎರಡ್ಮೂರು ಸೋಶಿಯಲ್ ಮೀಡಿಯಾ ಖಾತೆ ಹಾಗೂ ನಾಲ್ಕೈದು ಕಾಲ್ ಮಾಡುವ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಿಎಸ್‌ಎನ್‌ಎಲ್ ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಕಡಿಮೆ ಬೆಲೆಗೆ ಬಿಎಸ್‌ಎನ್‌ಎಲ್ ನೀಡುತ್ತಿದೆ.

ಗ್ರಾಮೀಣ ಭಾಗದಲ್ಲಿಯ ಕೆಳ ಹಾಗೂ ಮಧ್ಯಮ ವರ್ಗದ ಜನರನ್ನು ಬಿಎಸ್‌ಎನ್‌ಎಲ್ ಸೆಳೆಯುವಲ್ಲಿ ಹಂತ ಹಂತವಾಗಿ ಯಶಸ್ವಿಯಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ದರ ಏರಿಕೆಯ ನಂತರ ರಿಲಯನ್ಸ್ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಕ್ಷ ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ. ಮೂರು ಕಂಪನಿಗಳಲ್ಲಿ ಏರ್‌ಟೆಲ್ ಅತ್ಯಧಿಕ ಬಳಕೆದರಾರನ್ನು ಕಳೆದುಕೊಂಡಿದೆ. 

Tap to resize

Latest Videos

undefined

ಜುಲೈನಲ್ಲಿ ಬೆಲೆ ಏರಿಕೆ ಬಳಿಕ ಜಿಯೋ ಜಿಯೋ 7.5 ಲಕ್ಷ, ಏರ್‌ಟೆಲ್ 10.6 ಲಕ್ಷ ಮತ್ತು ವೊಡಾಫೋನ್ ಐಡಿಯಾ (Vi) 10.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇದೇ ವೇಳೆ ಬಿಎಸ್‌ಎನ್‌ಎಲ್ ಮಾತ್ರ 20.9 ಲಕ್ಷ ಹೊಸ ಗ್ರಾಹಕರನ್ನು ಆಕರ್ಷಿಸಿದೆ.ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅತಿ ಹೆಚ್ಚು ಕ್ರಮವಾಗಿ ಶೇಕಡಾ 33.23 ರಿಂದ 33.12 ಕ್ಕೆ ಮತ್ತು ಶೇಕಡಾ 18.56 ರಿಂದ ಶೇಕಡಾ 18.46ಕ್ಕೆ ಕುಸಿದಿದೆ.

ಒಂದು ಬಟನ್ ಒತ್ತಿದ್ರೆ Jio-Airtelನಿಂದ ಸಿಗುತ್ತೆ ಮುಕ್ತಿ; ಕೆಲವೇ ನಿಮಿಷದಲ್ಲಿ ಮನೆಗೆ ಬರುತ್ತೆ BSNL 4G ಸಿಮ್

ಇನ್ನೂ ಬೆಲೆ ಏರಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿಯೂ ಬಿಎಸ್‌ಎನ್ಎಲ್ ಪೋರ್ಟ್ ಬಗ್ಗೆ ಸಾರ್ವಜನಿಕರೇ ಪ್ರಚಾರ ನಡೆಸಲು ಆರಂಭಿಸಿದರು. ಸಾರ್ವಜನಿಕರಿಂದಲೇ ಬಿಎಸ್‌ಎನ್ಎಲ್ ನೀಡುತ್ತಿರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಲಾರಂಭಿಸಿದರು. ಮತ್ತೊಂದೆಡೆ ಬಿಎಸ್‌ಎನ್ಎಲ್ ತನ್ನ ನೆಟ್‌ವರ್ಕ್‌ಗೆ ಬರುವ ಗ್ರಾಹಕರಿಗಾಗಿ ಹೊಸ ಆಫರ್ ಘೋಷಣೆ ಮಾಡಿತು. ಇತ್ತ ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಅಳವಡಿಕೆ ಕಾರ್ಯವನ್ನು ವೇಗಗೊಳಿಸಿದೆ.

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಜುಲೈ ಆರಂಭದಿಂದ ಶೇ.10-25ರಷ್ಟು ದುಬಾರಿಯಾಗಿವೆ. ಏರ್‌ಟೆಲ್ ಮತ್ತು ಜಿಯೋ ದಿನಕ್ಕೆ 2GB ಡೇಟಾವನ್ನು ನೀಡುವ ಯೋಜನೆಗಳಿಗೆ ಅನಿಯಮಿತ 5G ಸಂಪರ್ಕವನ್ನು ನಿರ್ಬಂಧಿಸಿವೆ. 5ಜಿ ಪ್ಲಾನ್ ಬೆಲೆಯನ್ನು ಶೇ.46ರಷ್ಟು ಹೆಚ್ಚಿಸಲಾಗಿದೆ. ಏರ್‌ಟೆಲ್ ಶೇ.11ರಷ್ಟು ಬೆಲೆಗಳನ್ನು ಏರಿಕೆ ಮಾಡಿಕೊಂಡಿವೆ. ವೊಡಾಫೋನ್ ಐಡಿಯಾ ಸಹ ಶೇ.10-21ರಷ್ಟು ಬೆಲೆ ಹೆಚ್ಚಿಸಿಕೊಂಡಿವೆ.

ಆಫಿಸ್‌ನಲ್ಲಿದ್ದರೂ ಮೊಬೈಲ್‌ನಲ್ಲಿ ಮನೆ WiFi ಬಳಸಬಹುದು; ಹೊಸ ಸ್ಕೀಂ ಮೂಲಕ Jio-Airtelಗೆ ಶಾಕ್ ಕೊಟ್ಟ BSNL

click me!