ಗುದದ್ವಾರದಿಂದ ಹೀಗೆ ಉಸಿರಾಡ್ಬೋದಂತೆ ನೋಡಿ! ನೊಬೆಲ್​ ಪ್ರಶಸ್ತಿ ಗೆದ್ದ ವಿಜ್ಞಾನಿಗಳ ವಿಡಿಯೋ ವೈರಲ್​

By Suchethana D  |  First Published Sep 21, 2024, 4:02 PM IST

ಸಣ್ಣ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ ವಿಡಂಬನಾತ್ಮಕ ಗೌರವ ಇಗ್​ ನೊಬೆಲ್​ ಪ್ರಶಸ್ತಿಗೆ ಗುದದ್ವಾರದಿಂದ ಉಸಿರಾಟದ ಪ್ರಯೋಗ ಮಾಡಿದ ಸಂಶೋಧಕರು ಭಾಜನರಾಗಿದ್ದಾರೆ. ಏನಿದು ನೋಡಿ... 
 


ಮೂಗು, ಬಾಯಿಯಿಂದ ಮಾತ್ರವಲ್ಲದೇ ಗುದದ್ವಾರದಿಂದಲೂ ಉಸಿರಾಡಬಹುದು ಎಂದಿದ್ದಾರೆ ಸಂಶೋಧಕರು. ಇಂಥದ್ದೊಂದು ಸಂಶೋಧನೆ ಮಾಡಿದ ಸಂಶೋಧಕರಿಗೆ ಪ್ರತಿಷ್ಠಿತ 'ಇಗ್‌ ನೊಬೆಲ್ ಪ್ರಶಸ್ತಿ' ಲಭಿಸಿದೆ. ಅಂದಹಾಗೆ, ಹೀಗೆ ಗುದದ್ವಾರದಿಂದ ಉಸಿರಾಟ ಮಾಡುವುದು ಮನುಷ್ಯರಲ್ಲ, ಬದಲಿಗೆ ಸಸ್ತನಿಗಳು! ಹೌದು. ಸಸ್ತನಿಗಳು ತಮ್ಮ ಗುದದ್ವಾರಗಳ ಮೂಲಕ ಉಸಿರಾಡುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆದರೆ ಸಸ್ತನಿಗಳು ಹೇಗೆ ಆ ಭಾಗದಿಂದ ಉಸಿರಾಟ ಮಾಡುತ್ತದೆ ಎಂಬುದನ್ನು ಪ್ರಯೋಗ ಮಾಡಿಯೇ ತೋರಿಸಿದ್ದಾರೆ ಸಂಶೋಧಕರು. ಇಗ್​  ನೊಬೆಲ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದನ್ನು ಪ್ರದರ್ಶನ ಮಾಡಲಾಗಿದೆ. ಜಪಾನಿನ ವಿಜ್ಞಾನಿಗಳು  ಇಲಿಗಳು ಮತ್ತು  ಹಂದಿಗಳ ಮೇಲೆ ಸರಣಿ ಪರೀಕ್ಷೆ ನಡೆಸಿದರು. ಅದು ಯಶಸ್ವಿಯಾಗಿದೆ. ಯಾವುದೇ ರೀತಿಯ ಸಸ್ತನಿಗಳಿಗೆ ಉಸಿರಾಟದ ಸಮಸ್ಯೆ ಎದುರಾದ ಸಂದರ್ಭದಲ್ಲಿ ಗುದನಾಳದ ಮೂಲಕ ಚಿಕಿತ್ಸೆ ಕೊಡಬಹುದು ಎಂಬುದು ಈ ಪ್ರಯೋಗದಿಂದ ದೃಢಪಟ್ಟಿದೆ.  ಪ್ರಾಣಿಗಳು ಗುದನಾಳದ ಮೂಲಕ ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.  

ಅಂದಹಾಗೆ ಈಗ ಸಿಕ್ಕಿರುವುದು  'ಇಗ್‌ ನೊಬೆಲ್ ಪ್ರಶಸ್ತಿ'. ಇದಕ್ಕೂ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಇಗ್​ ನೊಬೆಲ್​ ಪ್ರಶಸ್ತಿಯು  ಒಂದು ರೀತಿಯ ವಿಡಂಬನ ಪ್ರಶಸ್ತಿಯಾಗಿದೆ.  ಈ ಪ್ರಶಸ್ತಿಯನ್ನು ಪ್ರತಿವರ್ಷ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ಪ್ರದಾನ ಮಾಡಲಾಗುತ್ತದೆ. ಇಗ್-ನೊಬೆಲ್ ಸಾಮಾನ್ಯವಾಗಿ ವಿಚಿತ್ರವಾದ ಸಂಗತಿಗಳ ಸಂಶೋಧನೆಗಳಿಗೆ ನೀಡಲಾಗುತ್ತದೆ.  ಈ ಪ್ರಶಸ್ತಿಯನ್ನು  ನೊಬೆಲ್ ಪುರಸ್ಕೃತರಿಂದಲೇ ಪ್ರದಾನ ಮಾಡಿಸಲಾಗುತ್ತದೆ. ಈ ಸಮಾರಂಭಗಳಲ್ಲಿ ಭಾಗವಹಿಸುವ ವಿಜ್ಞಾನಿಗಳಿಗೂ ನೊಬೆಲ್ ಪಾರಿತೋಷಕ ಲಭಿಸಿದೆ. ರಾಯ್ ಗ್ಲಾಬರ್ ಎಂಬ ವಿಜ್ಞಾನಿ ನಿರಂತರವಾಗಿ ಇಗ್-ನೊಬೆಲ್ ಬಹುಮಾನ ಕೊಡುವ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.  

Tap to resize

Latest Videos

undefined

ಕಣ್ಣೆದುರೇ ಅಣ್ಣನನ್ನು ಗುಂಡಿಕ್ಕಿ ಕೊಂದರು... 5 ಸಾವಿರ ಅನಾಥ ಶವಗಳಿಗೆ ಮುಕ್ತಿ ತೋರಿದ ಯುವತಿಯ ಕಥೆ ಕೇಳಿ...

Ig ನೋಬಲ್ ಪ್ರಶಸ್ತಿಗಳು ಸಣ್ಣ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ ವಿಡಂಬನಾತ್ಮಕ ಗೌರವ ಎಂದೂ ಕರೆಯಲಾಗುತ್ತದೆ.  ಇದನ್ನು ಪ್ರತಿ ವರ್ಷ ಹಾಸ್ಯ-ವಿಜ್ಞಾನ ನಿಯತಕಾಲಿಕೆ 'ಆನಲ್ಸ್ ಆಫ್ ಇಂಪ್ರಾಬಬಲ್ ರಿಸರ್ಚ್'ನಿಂದ ನೀಡಲಾಗುತ್ತದೆ.  ಈ ಪ್ರಶಸ್ತಿಯು  ವಿಶೇಷವಾಗಿ ಸುದ್ದಿ ಮತ್ತು ಪ್ರಸ್ತುತ ವೈಜ್ಞಾನಿಕ ಘಟನೆಗಳ ಹಾಸ್ಯಮಯ ಪ್ರಸಾರದ ಮೇಲೆ ಕೇಂದ್ರೀಕೃತವಾಗಿರುತ್ತದೆ.  ಇದನ್ನು ನೊಬೆಲ್ ಪ್ರಶಸ್ತಿ ವಿಜೇತರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ಸುಮಾರು ಒಂದು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನರ ನೇರ ಪ್ರೇಕ್ಷಕರ ಮುಂದೆ ಸಮಾರಂಭದಲ್ಲಿ ಪ್ರದಾನ ಮಾಡುತ್ತಾರೆ. ಇದೀಗ ಗುದದ್ವಾರದಿಂದಲೂ ಉಸಿರಾಟ ಮಾಡಬಹುದು ಎಂದು ವೇದಿಕೆ ಮೇಲೆ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

ಈ ಹಿಂದೆ ಚಿತ್ರ-ವಿಚಿತ್ರ ಸಂಶೋಧನೆಗಳಿಗೆ ಈ ಪ್ರಶಸ್ತಿ ನೀಡಲಾಗಿದೆ. ಮಾನವದೇಹದ ವೈಚಿತ್ರ ವಿಶೇಷಗಳ ಬಗೆಗಿನ ಅಧ್ಯಯನಕ್ಕೂ ಈ ಪ್ರಶಸ್ತಿ ಲಭಿಸಿತ್ತು.  17ನೇ ಶತಮಾನದ ಮೊರೊಕ್ಕೊ ಸಾಮ್ರಾಟ ಈ ದಾಖಲೆಯ ವಸ್ತುವಾಗಿದ್ದು, ಜರ್ಮನಿ  ಮತ್ತು ಆಸ್ಟ್ರಿಯಾದ ಗಣಿತಜ್ಞರು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. 1672ರಲ್ಲಿ ಹುಟ್ಟಿ 55 ವರ್ಷ ಬಾಳಿದ ಸಾಮ್ರಾಟ  ದೈಹಿಕವಾಗಿ ಪ್ರತಿ ದಿನ ಎರಡು ಬಾರಿ ಸೆಕ್ಸ್ ನಡೆಸಿದ್ದಲ್ಲಿ 600 ಮಕ್ಕಳಿಗೆ ಜನ್ಮ  ನೀಡಬಲ್ಲಾತನಾಗಿದ್ದನೆಂದು ಸಂಶೋಧನೆ ಮಾಡಲಾಗಿತ್ತು. ಇದಕ್ಕೂ ಪ್ರಶಸ್ತಿ ದಕ್ಕಿತ್ತು. 

ದೃಷ್ಟಿ ಹೀನರೂ ಇನ್ಮುಂದೆ ನೋಡಬಲ್ಲರು! ಹುಟ್ಟು ಕುರುಡರ ಬಾಳಲ್ಲಿ ಎಲಾನ್​ ಮಸ್ಕ್​ ಬೆಳಕು

 
 
 
 
 
 
 
 
 
 
 
 
 
 
 

A post shared by Mothership (@mothershipsg)

click me!