ಅನೇಕರು ಒಂದು ಐಫೋನ್ ಖರೀದಿಗಾಗಿ ಹೀಗೆ ಐಫೋನ್ ಶಾಪ್‌ಗಳ ಮುಂದೆ ರಸ್ತೆಗಳಲ್ಲಿ ಉದ್ದುದ್ದ ಕ್ಯೂ ನಿಂತಿದ್ದರೆ, ಒಬ್ಬರು ಮಾತ್ರ ಹೀಗೆ ಎಲ್ಲೂ ಕ್ಯೂ ನಿಲ್ಲದೇ ಒಟ್ಟು ಐದು ಐಫೋನ್ 16 ಪ್ರೋ ಮ್ಯಾಕ್ಸ್ ಫೋನ್ ಅನ್ನು ತಮ್ಮ ಹೆಂಡತಿ ಮಕ್ಕಳಿಗಾಗಿ ಖರೀದಿಸಿದ್ದಾರೆ. ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಪಲ್ ಸಂಸ್ಥೆಯ ಹೊಸ ಆವೃತಿಯ ಐಫೋನ್ 16 ಪ್ರೊ ಮ್ಯಾಕ್ಸ್ ನಿನ್ನೆ ಭಾರತದಲ್ಲಿ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಲಕ್ಷಾಂತರ ಜನ ಈ ಐಫೋನ್ ಖರೀದಿಗಾಗಿ ನಿನ್ನೆ ಐಫೋನ್ ಶಾಪ್‌ಗಳಲ್ಲಿ ಕ್ಯೂ ನಿಂತಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅನೇಕರು ಒಂದು ಐಫೋನ್ ಖರೀದಿಗಾಗಿ ಹೀಗೆ ಐಫೋನ್ ಶಾಪ್‌ಗಳ ಮುಂದೆ ರಸ್ತೆಗಳಲ್ಲಿ ಉದ್ದುದ್ದ ಕ್ಯೂ ನಿಂತಿದ್ದರೆ, ಒಬ್ಬರು ಮಾತ್ರ ಹೀಗೆ ಎಲ್ಲೂ ಕ್ಯೂ ನಿಲ್ಲದೇ ಒಟ್ಟು ಐದು ಐಫೋನ್ 16 ಪ್ರೋ ಮ್ಯಾಕ್ಸ್ ಫೋನ್ ಅನ್ನು ತಮ್ಮ ಹೆಂಡತಿ ಮಕ್ಕಳಿಗಾಗಿ ಖರೀದಿಸಿದ್ದಾರೆ. ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರ ಮುಂಬೈನ ಗ್ರಾಹಕರೊಬ್ಬರು ಹೀಗೆ ದುಬಾರಿ ಬೆಲೆಯ ಆಪಲ್ ಕಂಪನಿಯ ಐದು ಐಫೋನ್ 16 ಪ್ರೋ ಮ್ಯಾಕ್ಸ್ ಐಫೋನ್ ಅನ್ನು ಖರೀದಿಸಿದ್ದಾರೆ. ಇವರ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದ್ದು, ವ್ಯಕ್ತಿ ಹೆಮ್ಮೆಯಿಂದ ತಾವು ಖರೀದಿಸಿದ ಐದು ಫೋನ್‌ಗಳನ್ನು ಕ್ಯಾಮರಾಗಳಿಗೆ ತೋರಿಸುವುದನ್ನು ಕಾಣಬಹುದಾಗಿದೆ. ಹೀಗೆ ಒಮ್ಮೆಲೆ ಏಕೆ ಐದು ಐಫೋನ್ ಖರೀದಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉತ್ತರಿಸಿದ ಆ ವ್ಯಕ್ತಿ ನಾನು ನನ್ನ ಹೆಂಡತಿ ಮಕ್ಕಳಿಗಾಗಿ ಈ ಐದು ಫೋನ್‌ಗಳನ್ನು ಖರೀದಿಸಿದ್ದಾಗಿ ಹೇಳಿದ್ದಾರೆ.
ಆಪಲ್ ಕಂಪನಿಯ ಬೃಹತ್ ಆದಾಯದ ಮೂಲವೇನು, ಕಂಪನಿ ಹಣ ಸಂಪಾದಿಸೋದು ಹೇಗೆ?
ಅಲ್ಲದೇ ಈ ಫೋನ್ ಖರೀದಿಗಾಗಿ ನಾನು ಎಲ್ಲೂ ಬೇರೆಯವರೆಂತೆ ಕ್ಯೂನಲ್ಲಿ ಕಾದು ನಿಂತಿಲ್ಲ, ಮೊದಲೇ ಫೋನ್‌ನಗಾಗಿ ನಾಣು ಬುಕ್ ಮಾಡಿದ್ದೆ. ಈ ಸ್ಟೋರ್‌ನ ಸರ್ವೀಸ್ ಕೂಡ ತುಂಬಾ ಚೆನ್ನಾಗಿದೆ. ಅವರು ನನಗೆ ಕೇವಲ ಅರ್ಧಗಂಟೆಯಲ್ಲಿ ಫೋನ್ ಅನ್ನು ಹಸ್ತಾಂತರ ಮಾಡಿದರು ಎಂದು ಹೇಳಿದ್ದಾರೆ. ತಾವು ಖರೀದಿಸಿದ 5 ಐಫೋನ್‌ಗಳಲ್ಲಿ ನಾಲ್ಕು 128 ಜಿಬಿ ಮಾಡೆಲ್ಸ್ ಗಳಾಗಿವೆ ಹಾಗೆಯೇ ಒಂದು ಮಾತ್ರ 512 ಜಿಬಿಯದ್ದಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಹಾಗೆಯೇ ಮತ್ತೊಬ್ಬ ಖರೀದಿದಾರ ಉಜ್ವಲ್ ಶಾ ಎಂಬುವವರು ಐಫೋನ್ ಖರೀದಿಗಾಗಿ ಬರೋಬ್ಬರಿ 21 ಗಂಟೆ ಕಾಯುವ ಮೂಲಕ ಐಫೋನ್ ಬಗೆಗಿನ ತಮ್ಮ ಉತ್ಸಾಹವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈತ ಮೊದಲಿನ ದಿನ ಮುಂಜಾನೆ 11 ಗಂಟೆಗೆ ಬಂದು ಐಫೋನ್ ಶಾಪ್‌ನ ಮುಂದೆ ಕಾದಿದ್ದು, ಮಾರನೇ ದಿನ ಆತನಿಗೆ ಫೋನ್ ಸಿಕ್ಕಿದೆ. ತಾನು ಐಫೋನ್‌ಗಾಗಿ ಕಳೆದ 21 ಗಂಟೆಗಳಿಂದ ಕ್ಯೂ ನಿಂತಿದ್ದಾಗಿ ಆತ ಹೇಳಿದ್ದಾನೆ.
Blinkit ನಲ್ಲಿ ಆರ್ಡರ್ ಮಾಡಿ 10 ನಿಮಿಷಗಳಲ್ಲಿ iPhone 16 ನಿಮ್ಮ ಮನೆ ಬಾಗಿಲಿಗೆ!
ಐಫೋನ್ 16 ಸಿರೀಸ್ ನಾಲ್ಕು ರೀತಿಯ ವಿಭಿನ್ನ ಮಾಡೆಲ್‌ಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೋ ಹಾಗೂ ಕೊನೆಯದಾಗಿ ಐಫೋನ್ 16 ಪ್ರೊ ಮ್ಯಾಕ್ಸ್, ಮೂಲ ಐಫೋನ್ 16ಗೆ 79,900ರೂ. ದರವಿದ್ದು, ಐಫೋನ್ 16 ಪ್ಲಸ್ ಆರಂಭಿಕ ಬೆಕೆ 89,900 ಹಾಗೆಯೇ ಇನ್ನು ಅಡ್ವಾನ್ಸ್‌ಡ್ ಆಗಿರುವ ಐಫೋನ್ 16 ಪ್ರೋ ಬೆಲೆ 1,19, 900 ಹಾಗೆಯೇ ಪ್ರೀಮಿಯಂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ 1,44,900 ರೂ ಇದೆ.
ಆಪಲ್ ಸಂಸ್ಥೆ ತನ್ನ ಟ್ರೇಡ್ ಇನ್ ಪ್ರೋಗ್ರಾಂ ಮೂಲಕ ಹಣ ಉಳಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ, ಇದು ಹೊಸ iPhone 16 ಗಾಗಿ ಹಳೆಯ ಸಾಧನಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ರೂ 4,000 ದಿಂದ ರೂ 67,500 ರ ನಡುವೆ ಫೋನ್‌ನ ಸ್ಥಿತಿ ನೋಡಿ ರಿಯಾಯಿತಿ ನೀಡುತ್ತಿದೆ.
महाराष्ट्र: मुंबई के बीकेसी में कंपनी के स्टोर पर बड़ी संख्या में लोग आईफोन 16 खरीदने के लिए पहुंचे।
एक ग्राहक ने कहा, "मैंने 5 मोबाइल बीबी और बच्चों के लिए लिया है। यहां का सर्विस बहुत अच्छा है.." https://t.co/spxeNY4nFK pic.twitter.com/Uekf88MUVk