
ನವದೆಹಲಿ (ಏ.22): ಅಮೆರಿಕದ ಟೆಕ್ ದೈತ್ಯ ಆಪಲ್ ಇಂಕ್ (Apple Inc) , ಪವರ್ ಅಡಾಪ್ಟರ್‌ಗಳಿಲ್ಲದೆ, ಚಾರ್ಜರ್ ಗಳಿಲ್ಲದೆ ಹೊಸ ಐಫೋನ್‌ಗಳನ್ನು(iPhone) ಮಾರಾಟ ಮಾಡುವ ಮೂಲಕ "ನಿಂದನೀಯ ಮತ್ತು ಕಾನೂನುಬಾಹಿರ" ಅಭ್ಯಾಸದಲ್ಲಿ ತೊಡಗಿದೆ ಎಂದು ಬ್ರೆಜಿಲಿಯನ್ ನ್ಯಾಯಾಧೀಶರು ತೀರ್ಪು (Brazilian judge) ನೀಡಿದ್ದಾರೆ.
ಏಪ್ರಿಲ್ 12 ರಂದು ನಿರ್ಧಾರ ಪ್ರಕಟಿರುವ ಮಧ್ಯ ಬ್ರೆಜಿಲ್‌ನ ಗೋಯಾಸ್ ರಾಜ್ಯದ ಪ್ರಾದೇಶಿಕ ನ್ಯಾಯಾಧೀಶ ವಾಂಡರ್ಲೀ ಕೇರ್ಸ್ ಪಿನ್‌ಹೀರೊ (Vanderlei Caires Pinheiro) ಅವರು ದೂರು ನೀಡಿದ ಗ್ರಾಹಕರಿಗೆ 5,000 ರಿಯಾಸ್ (1,080 ಯುಎಸ್ ಡಾಲರ್) ಪರಿಹಾರವನ್ನು ಪಾವತಿಸಲು ಕಂಪನಿಗೆ ಆದೇಶಿಸಿದರು.
ಕಾನೂನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ತನ್ನ ತೀರ್ಪಿನಲ್ಲಿ, ನ್ಯಾಯಾಧೀಶರು ಐಫೋನ್‌ನ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡಾಪ್ಟರ್ ಅತ್ಯಗತ್ಯ ಎಂದು ಹೇಳಿದ್ದಾರೆ. ತಯಾರಕರು ಇವುಗಳನ್ನು ಬಾಕ್ಸ್‌ಗಳಿಂದ ತೆಗೆದುಹಾಕುವ ಮೂಲಕ ಸ್ಥಳೀಯ ಗ್ರಾಹಕ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚಿನ ಗ್ರಾಹಕರು ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಿಂದ ಪರಿಹಾರವನ್ನು ಪಡೆಯಲು ದೂರು ನೀಡಿದರೆ ಅಥವಾ ಮತ್ತೊಮ್ಮೆ ಬಿಡಿಭಾಗಗಳನ್ನು ಸೇರಿಸಲು ಒತ್ತಾಯಿಸಿದರೆ ಈ ಕ್ರಮವು ಹೆಚ್ಚು ದುಬಾರಿಯಾಗಬಹುದು ಎಂದು ಹೇಳಲಾಗಿದೆ.
ಆಪಲ್ ಕಂಪನಿಯಿ 2020ರಲ್ಲಿ ಐಫೋನ್ 12 ನೊಂದಿಗೆ ಪ್ರಾರಂಭವಾದ ಸ್ಮಾರ್ಟ್‌ಫೋನ್‌ಗಳೊಂದಿಗೆ ಚಾರ್ಜರ್ ಗಳು ಮತ್ತು ಹೆಡ್‌ಸೆಟ್ ಅನ್ನು ಸೇರಿಸುವುದನ್ನು ನಿಲ್ಲಿಸಿತು. ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಇದನ್ನು ಮಾಡುತ್ತಿರುವುದಾಗಿ ಹೇಳಿತ್ತು. ಪರಿಸರಕ್ಕೆ ಇದು ಅಗತ್ಯವಾದ ಕ್ರಮವಾಗಿ ಎಂದೂ ಕಂಪನಿ ಹೇಳಿಕೊಂಡಿತ್ತು. ಆದರೆ. ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿದ್ದಾರೆ.
"ಅಂತಹ ಕ್ರಮವು ಪರಿಸರ ಸಮಸ್ಯೆಗಳ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಎಂಬ ಹೇಳಿಕೆಯು ಅರ್ಥಹೀನವಾಗಿದೆ ಏಕೆಂದರೆ ಪ್ರತಿವಾದಿಯು ಅಂತಹ ಅಗತ್ಯ ಪರಿಕರವನ್ನು ತಯಾರಿಸುವುದನ್ನು ಮುಂದುವರೆಸುತ್ತಾನೆ, ಹಾಗೂ ಅದನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಾನೆ" ಎಂದು ಪಿನ್ಹೇರೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಪಲ್‌ನ ಉತ್ಪನ್ನದೊಂದಿಗೆ ಪ್ರತ್ಯೇಕವಾಗಿ ಹೊಂದಿಕೆಯಾಗದ ಮತ್ತು ಮೂರನೇ ವ್ಯಕ್ತಿಯ ಚಾರ್ಜರ್‌ಗಳೊಂದಿಗೆ ಬಳಸಬಹುದಾದ ಯುಎಸ್‌ಬಿ ಟೈಪ್-ಸಿ ಕೇಬಲ್ ಅನ್ನು ಬಳಸುತ್ತಿದೆ ಎಂಬ ಆಪಲ್‌ನ ಹಕ್ಕನ್ನು ನ್ಯಾಯಾಧೀಶರು ತಿರಸ್ಕರಿಸಿದರು. ಸಾಧನವು ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಯಾವುದೇ ಯುಎಸ್‌ಬಿ ಪೋರ್ಟ್‌ನೊಂದಿಗೆ ಬಳಸಲಾಗುವುದಿಲ್ಲ ಎಂದು ಅವರು ಹೇಳಿದರು.
ಇತರ ದೇಶಗಳ ನ್ಯಾಯಾಲಯಗಳೂ ಕೂಡ ಈ ವಿಷಯವನ್ನು ಇದೇ ಆಧಾರದಲ್ಲಿ ನೋಡುತ್ತವೆಯೇ ಎನ್ನುವ ಕುತೂಹಲ ಈಗ ಎಲ್ಲರಲ್ಲಿ ಆರಂಭವಾಗಿದೆ. ಹಾಗೇನಾದರೂ ಆದಲ್ಲಿ ಆಪಲ್ ಕಂಪನಿಯು ಪುನಃ ಚಾರ್ಜರ್ ಗಳನ್ನು ಹೊಸ ಸ್ಮಾರ್ಟ್ ಫೋನ್ ಗಳ ಜೊತೆ ಸೇರಿಸುವ ಅನಿವಾರ್ಯತೆಗೆ ಸಿಲುಕಬಹುದು.
ಆ್ಯಪಲ್ ಫುಲ್ ಸ್ಕ್ರೀನ್ iPhone ಬಿಡುಗಡೆಗೆ ತಯಾರಿ, ಡಿಸ್‌ಪ್ಲೆ ಒಳಗೆ ಕ್ಯಾಮರಾ!
2020 ರಲ್ಲಿ, ಆಪಲ್, ಹೆಚ್ಚು 'ಪರಿಸರ ಪ್ರಜ್ಞೆ' ಎನ್ನುವ ಕಾರಣದ ಅಡಿಯಲ್ಲಿ, ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಚಾರ್ಜರ್ ಗಳು ಮತ್ತು ಇಯರ್‌ಫೋನ್‌ಗಳನ್ನು ಸೇರಿಸುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಇದರಿಂದಾಗಿ ಕಂಪನಿಯು ಒಂದೇ ವರ್ಷದಲ್ಲಿ 6.5 ಬಿಲಿಯುನ್ ಯುಎಸ್ ಡಾಲರ್ ಮೊತ್ತವನ್ನು ಉಳಿಸಿದೆ ಎಂದು ಹೇಳಲಾಗಿದೆ.
Iphone ಮೀರಬಹುದಾದ ಟೆಸ್ಲಾ ಪೈ ಫೋನ್, ಹೀಗಿದೆ ಫೀಚರ್ಸ್!
ತಂತ್ರಜ್ಞಾನ ತಜ್ಞರು ಸಿಸಿಎಸ್ ಇನ್‌ಸೈಟ್‌ನ ಮುಖ್ಯ ವಿಶ್ಲೇಷಕರಾದ ಬೆನ್ ವುಡ್ “ಆಪಲ್ ಪರಿಸರಕ್ಕೆ ಸಹಾಯ ಮಾಡುವಲ್ಲಿ ಫೋನ್ ಉದ್ಯಮದ ಮಾರುಕಟ್ಟೆಯ ಮುಂಚೂಣಿಯಲ್ಲಿದೆ. ಚಾರ್ಜರ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ತೆಗೆದುಹಾಕುವುದರೊಂದಿಗೆ ಅದು ಮಾಡುತ್ತಿರುವ ಅನೇಕ ಕೆಲಸಗಳಲ್ಲಿ ಒಂದಾಗಿದೆ. ಆದರೆ ಸಹಜವಾಗಿ, ಆಪಲ್ ಐಫೋನ್‌ಗಳನ್ನು ಮಾರಾಟ ಮಾಡುವಾಗ ಚಾರ್ಜರ್‌ಗಳು ಮತ್ತು ಹೆಡ್‌ಫೋನ್‌ಗಳನ್ನು ತೆಗೆದುಹಾಕುವ ಹಿಂದೆ ವೆಚ್ಚವನ್ನು ತಗ್ಗಿಸುವ ಗುರಿ ಹೊಂದಿದೆ' ಎಂದು ಹೇಳಿದ್ದರು. ಈ ಕ್ರಮವನ್ನು ಮೊದಲು ಘೋಷಣೆ ಮಾಡಿದಾಗ ಅನೇಕ ವಿಶ್ಲೇಷಕರು ಆಪಲ್ ಐಫೋನ್ 12 ನೊಂದಿಗೆ ತರುತ್ತಿರುವ 5G ಮೋಡೆಮ್‌ನ ದುಬಾರಿ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಎಂದು ಭಾವಿಸಿದ್ದರು, ಆದರೆ, ಇದು ಐಫೋನ್ 13 ಸರಣಿ ಮತ್ತು ಬಹುಶಃ ಎಲ್ಲಾ ಭವಿಷ್ಯದ ಐಫೋನ್‌ಗಳನ್ನೂ ಚಾರ್ಜರ್ ಗಳಿಲ್ಲದೆ ನೀಡಲು ಆಪಲ್ ತೀರ್ಮಾನ ಮಾಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.