Samsung QLED TV ಅತ್ಯಾಧುನಿಕ ತಂತ್ರಜ್ಞಾನದ QLED ಸ್ಯಾಮ್‌ಸಂಗ್ 8K ಟಿವಿ ಬಿಡುಗಡೆ!

By Suvarna News  |  First Published Apr 22, 2022, 8:56 PM IST
  • ನಿಯೋ ಕ್ಯುಎಲ್ಇಡಿ ಟಿವಿಗಳು ಪೂರ್ವನಿರ್ಮಿತ ಐಓಟಿ ಹಬ್‌
  • ಟಿವಿಯೊಂದಿಗೆ ವೀಡಿಯೋ ಕರೆಗಳನ್ನು ಮಾಡುವ ಸೌಲಭ್ಯ
  • ಸೌಂಡ್‌ಬಾರ್ ಮತ್ತು ಸ್ಲಿಮ್ ಫಿಟ್ ವೆಬ್ ಕ್ಯಾಮೆರಾ
     

ನವದೆಹಲಿ(ಏ.21) ಭಾರತದ ನಂ. 1 ಟಿವಿ ಬ್ರ‍್ಯಾಂಡ್ ಆಗಿರುವ ಸ್ಯಾಮ್ ಸಂಗ್, ಇಂದು ತನ್ನ ಅಲ್ಟ್ರಾ ಪ್ರೀಮಿಯಂ 2022 ರ ನಿಯೋ ಕ್ಯುಎಲ್ಇಡಿ 8ಕೆ ಮತ್ತು ನಿಯೋ ಕ್ಯುಎಲ್ಇಡಿ ಟಿವಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದೆ, ಇದು ನಿಮ್ಮ ವಾಸಸ್ಥಳವನ್ನು ಪರಿವರ್ತಿಸಲು ಅತ್ಯಂತ ಅದ್ಭುತವಾದ ಚಿತ್ರದ ಗುಣಮಟ್ಟ ಮತ್ತು ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್‌ಗಳನ್ನು ನೀಡುತ್ತದೆ.

ಹೊಸ ನಿಯೋ ಕ್ಯುಎಲ್ಇಡಿ ಟಿವಿ ಶ್ರೇಣಿಯನ್ನು ಗೇಮ್ ಕನ್ಸೋಲ್, ವರ್ಚುವಲ್ ಪ್ಲೇಗ್ರೌಂಡ್ ಗಳಲ್ಲಿ ಟಿವಿಗಿಂತ ಹೆಚ್ಚು ವ್ಯಾಪಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಮನೆಯನ್ನು ನಿಯಂತ್ರಿಸುವ ಸ್ಮಾರ್ಟ್ ಹಬ್ ಮತ್ತು ಪರಿಣಾಮವನ್ನು ಸುಧಾರಿಸುವ ನಿಖರ ಪಾಲುದಾರನಾಗಿದೆ.

Tap to resize

Latest Videos

undefined

108MP ಕ್ಯಾಮೆರಾದೊಂದಿಗೆ Samsung Galaxy M53 5G ಭಾರತದಲ್ಲಿ ಲಾಂಚ್‌: OnePlus Nord CE 2ಗೆ ಟಕ್ಕರ್‌

ಹೊಸ ನಿಯೋ ಕ್ಯುಎಲ್‌ಇಡಿ ಲೈನ್-ಅಪ್ ಕ್ವಾಂಟಮ್ ಮಿನಿ ಎಲ್‌ಇಡಿದ ಚಾಲಿತ ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಸಾಮಾನ್ಯ ಎಲ್‌ಇಡಿಗಳಿಗಿಂತ 40 ಪಟ್ಟು ಚಿಕ್ಕದಾಗಿದೆ. ಪ್ರದರ್ಶನದ ಹೊಳಪಿನ ಹೆಚ್ಚು ನಿಖರವಾದ ನಿಯಂತ್ರಣಕ್ಕಾಗಿ ಇದು ವಿಸ್ತರಿತ ಪ್ರಕಾಶಮಾನ ಪ್ರಮಾಣವನ್ನು ನೀಡುತ್ತದೆ. ಶೇಪ್ ಅಡಾಪ್ಟೀವ್ ಲೈಟ್ ಕಂಟ್ರೋಲ್ ಚಿತ್ರದಲ್ಲಿನ ವಿವಿಧ ವಸ್ತುಗಳನ್ನು ನಿಖರವಾಗಿ ವಿಶ್ಲೇಷಿಸಿ, ಅಗತ್ಯಕ್ಕೆ ಅನುಗುಣವಾಗಿ ಲೈಟ್ ಗಳನ್ನು ನಿಯಂತ್ರಿಸುತ್ತದೆ.

ನಿಯೋ ಕ್ಯುಎಲ್ಇಡಿ ೮ಕೆ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ ೮ಕೆ ಜೊತೆಗೆ ನೈಜ ಆಳ ವರ್ಧಕವನ್ನು ಹೊಂದಿದೆ, ಇದು ಎಐ ಆಧಾರಿತ ಗಾಢ ಕಲಿಕೆಯ ಸಹಾಯದಿಂದ ಮೂರು ಆಯಾಮದ ಗಾಢತೆಯನ್ನು ರಚಿಸಲು ವಸ್ತುಗಳನ್ನು ನಿರ್ಧರಿಸುತ್ತದೆ ಮತ್ತು ಹೆಚ್ಚಿಸುತ್ತದೆ.

ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು, ನಿಯೋ ಕ್ಯುಎಲ್‌ಇಡಿ ಐ ಕಂಫರ್ಟ್ ಮೋಡ್ ಅನ್ನು ಒಳಗೊಂಡಿದೆ, ಇದು ಪೂರ್ವನಿರ್ಮಿತ ಸಂವೇದಕಗಳ ಆಧಾರದ ಮೇಲೆ ಪರದೆಯ ಹೊಳಪು ಮತ್ತು ಟೋನ್ ಅನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ. ಸುತ್ತಲಿನ ಬೆಳಕು ಬದಲಾದಂತೆ, ಪರದೆಯು ಕ್ರಮೇಣ ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಬೆಚ್ಚಗಿನ ಟೋನ್ ಗಳನ್ನು ನೀಡುತ್ತದೆ, ಅದಕ್ಕೆ ಅನುಗುಣವಾಗಿ ನೀಲಿ ಬೆಳಕಿನ ಮಟ್ಟವನ್ನು ಸರಿಹೊಂದಿಸುತ್ತದೆ.

Samsung Galaxy A73 5G ಭಾರತದಲ್ಲಿ ಇಂದು ಮೊದಲ ಸೇಲ್:‌ ಬೆಲೆ ಎಷ್ಟು? ಲಾಂಚ್‌ ಆಫರ್ಸ್‌ಗಳೇನು?

ಸೀಮಿತ ಅವಧಿಯ ಕೊಡುಗೆಯಾಗಿ, 2022 ರ ಏಪ್ರಿಲ್ 19-20 ರ ನಡುವೆ ನಿಯೋ ಕ್ಯುಎಲ್ಇಡಿ ೮ಕೆ ಟಿವಿಗಳನ್ನು ಖರೀದಿಸುವ ಗ್ರಾಹಕರು ರೂ. 1,49,900 ಮೌಲ್ಯದ ಸ್ಯಾಮ್ ಸಂಗ್ ಸೌಂಡ್‌ಬಾರ್ ಹೆಚ್ ಡಬ್ಲ್ಯು-ಕ್ಯು೯೯೦ಬಿ) ಜೊತೆಗೆ ರೂ. 8,900 ಮೌಲ್ಯದ ಸ್ಲಿಮ್ ಫಿಟ್ ಕ್ಯಾಮ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಗ್ರಾಹಕರು ನಿಯೋ ಕ್ಯುಎಲ್ಇಡಿ ಟಿವಿಗಳನ್ನು ಖರೀದಿಸಿದರೆ, ರೂ. 8,900 ಮೌಲ್ಯದ ಸ್ಲಿಮ್ ಫಿಟ್ ಕ್ಯಾಮ್ ಪಡೆಯಬಹುದು. ನಿಯೋ ಕ್ಯುಎಲ್ಇಡಿ ೮ಕೆ ಮತ್ತು ನಿಯೋ ಕ್ಯುಎಲ್ಇಡಿ ಟಿವಿಗಳನ್ನು ಮುಂಗಡವಾಗಿ ಕಾಯ್ದಿರಿಸಿರುವ ಗ್ರಾಹಕರು ಕ್ರಮವಾಗಿ ರೂ 10,000 ಮತ್ತು  ರೂ 5,000 ಮೌಲ್ಯದ ರಿಯಾಯಿತಿಗಳನ್ನು ಪಡೆಯಬಹುದು.

"ಸ್ಯಾಮ್ ಸಂಗ್ ನಲ್ಲಿ, ನಮ್ಮ ಗ್ರಾಹಕರ ಬದಲಾದ ಜೀವನಶೈಲಿಗೆ ಅನುಗುಣವಾಗಿ ನಾವು ಸತತವಾಗಿ ಟೆಲಿವಿಷನ್‌ಗಳ ಪಾತ್ರವನ್ನು ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ೨೦೨೨ ರ ನಿಯೋ ಕ್ಯುಎಲ್ಇಡಿ ಟಿವಿ ಸರಣಿಯು ಉಸಿರು ಬಿಗಿಹಿಡಿಯುವಂತಹ ಚಿತ್ರ ಮತ್ತು ಧ್ವನಿ ಗುಣಮಟ್ಟವನ್ನು ನೀಡಿ ಬೆರಗುಗೊಳಿಸುತ್ತದೆ. ಇದರೊಂದಿಗೆ, ಇದು ವಿಷಯವನ್ನು ವೀಕ್ಷಿಸಲು, ಕೆಲಸ ಮಾಡಲು, ಪ್ಲೇ ಮಾಡಲು, ಇತರ ಸಾಧನಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆಗೆ ಸಂಪರ್ಕಿಸಲು ಗ್ರಾಹಕೀಯಗೊಳಿಸಬಹುದಾದ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡುತ್ತದೆ. ಅತಿ ದೊಡ್ಡ ಸ್ಕ್ರೀನ್ ಗಳು, ೮ಕೆ ರೆಸಲ್ಯೂಶನ್ ಮತ್ತು ಮುಂದಿನ ಹಂತದ ಚಿತ್ರ ಮತ್ತು ಧ್ವನಿ ಗುಣಮಟ್ಟವನ್ನು ತರುವ ಮೂಲಕ, ನಿಯೋ ಕ್ಯುಎಲ್ಇಡಿ ಟಿವಿಗಳು ಭಾರತದಲ್ಲಿನ ಪ್ರೀಮಿಯಂ ಟಿವಿ ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಬಲಪಡಿಸುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ" ಎಂದು ಸ್ಯಾಮ್ ಸಂಗ್ ಇಂಡಿಯಾದ ಗ್ರಾಹಕ ಎಲೆಕ್ಟ್ರಾನಿಕ್ಸ್ ವಹಿವಾಟಿನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಹೇಳಿದ್ದಾರೆ.

ಇತ್ತೀಚಿನ ಶ್ರೇಣಿಯ ನಿಯೋ ಕ್ಯುಎಲ್ಇಡಿ ಟಿವಿಗಳು ಪೂರ್ವನಿರ್ಮಿತ ಐಓಟಿ ಹಬ್‌ನೊಂದಿಗೆ ಸುಸಜ್ಜಿತವಾಗಿದ್ದು, ಇದು ಗ್ರಾಹಕರು ತಮ್ಮ ಮನೆಯನ್ನು ಕೇವಲ ಟಿವಿಯೊಂದಿಗೆ ಸ್ಮಾರ್ಟ್ ರೀತಿಯಲ್ಲಿ ನಿಯಂತ್ರಿಸಲು ನೆರವಾಗುತ್ತದೆ. ಇದು ನಿಮ್ಮ ಎಲ್ಲಾ ಮನೆಯ ಸಾಧನಗಳನ್ನು, ಮೂರನೇ ವ್ಯಕ್ತಿಯ ಸಾಧನಗಳನ್ನು ಸಹ ಪರಿಶೀಲಿಸಲು ನಿಮಗೆ ಅನುಮತಿಸುತ್ತದೆ. ಟಿವಿ ವಿನ್ಯಾಸ ಅಥವಾ ವೀಕ್ಷಣಾ ಅನುಭವಕ್ಕೆ ಧಕ್ಕೆಯಾಗದಂತೆ ಲಗತ್ತಿಸಬಹುದಾದ ಸುಲಭವಾಗಿ ಬಳಸಬಹುದಾದ ಸ್ಲಿಮ್‌ಫಿಟ್ ಕ್ಯಾಮ್ (ಟಿವಿ ವೆಬ್‌ಕ್ಯಾಮ್) ಮೂಲಕ ಗ್ರಾಹಕರು ದೊಡ್ಡ ಟಿವಿ ಸ್ಕ್ರೀನ್ ನಲ್ಲಿ ವೀಡಿಯೋ ಕರೆ ಅಥವಾ ವೆಬ್ ಕಾನ್ಫರೆನ್ಸ್ಗಳನ್ನು ಆನಂದಿಸಬಹುದು. ಸ್ಮಾರ್ಟ್ ಹಬ್ ವೈಶಿಷ್ಟ್ಯವು ಎಲ್ಲಾ ಹೊಸ ಬಳಕೆದಾರ ಇಂಟರ್ಫೇಸ್ ಅನ್ನು ನೀಡುತ್ತದೆ, ಇದು ಸ್ಮಾರ್ಟ್ ಅನುಭವದ ಪ್ರತಿಯೊಂದು ಅಂಶವನ್ನು ಸುಲಭವಾಗಿ ನೇವಿಗೇಟ್ ಮಾಡಲು ಹೋಮ್ ಸ್ಕ್ರೀನ್‌ಗೆ ತರುತ್ತದೆ. ಅತ್ಯುತ್ತಮ ವಿಷಯ ವೀಕ್ಷಣೆಯ ಅನುಭವ, ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು 45+ ಉಚಿತ ಭಾರತೀಯ ಮತ್ತು ಜಾಗತಿಕ ಟಿವಿ ಚಾನೆಲ್‌ಗಳು ಸ್ಯಾಮ್ ಸಂಗ್ ಟಿವಿಯ ಸಕಾರಾತ್ಮಕ ಅಂಶವಾಗಿದ್ದು, ರಿಫ್ರೆಶ್ ಮಾಡಲಾದ ನಿಯೋ ಕ್ಯುಎಲ್ಇಡಿ ಟಿವಿ ಶ್ರೇಣಿಯನ್ನು ಗ್ರಾಹಕರಿಗೆ ಅಂತಿಮ ಆಯ್ಕೆಯನ್ನಾಗಿ ಮಾಡುತ್ತದೆ.

6,000mAh ಬ್ಯಾಟರಿಯೊಂದಿಗೆ ಬಜೆಟ್‌ ಬೆಲೆಯಲ್ಲಿ Samsung Galaxy M33 5G ಭಾರತದಲ್ಲಿ ಲಾಂಚ್

ಸ್ಯಾಮ್ ಸಂಗ್‌ನ ಸಿಗ್ನೇಚರ್ ಇನ್ಫಿನಿಟಿ ಒನ್ ಡಿಸೈನ್ ತೆಳುವಾದ ಮತ್ತು ಆಕರ್ಷಕವಾದ ನೋಟ ಒದಗಿಸುತ್ತದೆ, ಟಿವಿಯು ನೆಲದ ಮೇಲೆ ತೇಲುತ್ತಿರುವಂತೆ ಕಾಣಿಸುವಂತೆ ಮಾಡುತ್ತದೆ. 2022 ರ ಸ್ಯಾಮ್ ಸಂಗ್ ನಿಯೋ ಕ್ಯುಎಲ್ಇಡಿ 8ಕೆ ಯನ್ನು 90 ಡಬ್ಲ್ಯು6.2.4 ಚಾನೆಲ್ ಆಡಿಯೋ ಸಿಸ್ಟಮ್‌ನೊಂದಿಗೆ ನಿರ್ಮಿಸಲಾಗಿದ್ದು, ಇದು ಡಾಲ್ಬಿ ಆಟಮ್ಸ್ ಬೆಂಬಲದೊAದಿಗೆ ಕ್ಯು-ಸಿಂಫನಿ ಮತ್ತು ಆಬ್ಜೆಕ್ಟ್ ಟ್ರ‍್ಯಾಕಿಂಗ್ ಸೌಂಡ್ ಪ್ರೊ (ಓಟಿಎಸ್ ಪ್ರೋ) ಒಳಗೊಂಡಿರುವ ಅಂತಿಮ ೩ಆ ಸರೌಂಡ್ ಸೌಂಡ್ ಹೋಮ್ ಥಿಯೇಟರ್ ಅನುಭವ ನೀಡುತ್ತದೆ.

2022 ರ ನಿಯೋ ಕ್ಯುಎಲ್ಇಡಿ ಟಿವಿ ಲೈನ್-ಅಪ್ ಅನ್ನು ಮೋಷನ್ ಎಕ್ಸೆಲೆರೇಟರ್ ಟರ್ಬೋ ಪ್ರೋ ( 144 ಹೆಚ್ ಜೆಡ್ ವಿಆರ್‍ಆರ್ ನೊಂದಿಗೆ ಹೆಚ್ ಡಿ ಎಂ ಐ 2.1 ಪೋರ್ಟ್ಗಳೊಂದಿಗೆ) ಗೇಮರ್‌ಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೊಸ ಟಿವಿ ಸರಣಿ, ಹೊಸ ಗೇಮ್ ಬಾರ್ ಅನ್ನು ಸಹ ಒಳಗೊಂಡಿದ್ದು, ಇದು ಗೇಮರ್ ಗಳಿಗಾಗಿ ಆಟದ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಗರಿಷ್ಟಗೊಳಿಸಲು ಅನುಮತಿಸುತ್ತದೆ, ಅದರ ಜೂಮ್-ಇನ್ ಮೋಡ್ ಮತ್ತು ಅಲ್ಟ್ರಾ ವೈಡ್ ವ್ಯೂ (32:9) ಮತ್ತು ಹೆಚ್ಚಿನವುಗಳೊಂದಿಗೆ ಯಾವುದೇ ಬ್ಲೈಂಡ್ ಸ್ಪಾಟ್‌ಗಳನ್ನು ಬಿಡುವುದಿಲ್ಲ.

ಸ್ಯಾಮ್ ಸಂಗ್ ತನ್ನ ಉತ್ಪನ್ನಗಳು ಮತ್ತು ಅದರ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಅಭಿಯಾನಗಳ ಮೂಲಕ ಪರಿಸರವನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೆ, ಇತ್ತೀಚಿನ ಸೋಲಾರ್‍ಸೆಲ್ ರಿಮೋಟ್ ಈಗ ಸಂಪೂರ್ಣವಾಗಿ ಬ್ಯಾಟರಿ ಮುಕ್ತವಾಗಿದ್ದು, ನಿಮ್ಮ ಮನೆಯೊಳಗಿನ ಬೆಳಕಿನ ಮೂಲಕ ಚಾರ್ಜ್ ಮಾಡಬಹುದು.

ಬೆಲೆ ಮತ್ತು ಲಭ್ಯತೆ
ನಿಯೋ ಕ್ಯುಎಲ್ಇಡಿ ೮ಕೆ ಟಿವಿಗಳು ಕ್ಯುಎನ್೯೦೦ಬಿ(೮೫-ಇಂಚು), ಕ್ಯುಎನ್೮೦೦ಬಿ(65- ಮತ್ತು 75-ಇಂಚು), ಕ್ಯುಎನ್೭೦೦ಬಿ(65-ಇಂಚು) ಮಾದರಿಗಳಲ್ಲಿ ಲಭ್ಯವಿದೆ ಮತ್ತು ರೂ 3,24,990 ಬೆಲೆಯಿಂದ ಪ್ರಾರಂಭವಾಗುತ್ತದೆ. ನಿಯೋ ಕ್ಯುಎಲ್ಇಡಿ ಟಿವಿಗಳು ಕ್ಯುಎನ್95ಬಿ(55- 65ಇಂಚು), ಕ್ಯುಎನ್೯೦ಬಿ (85-, 75-, 65-, 55-, 50-ಇಂಚು), ಕ್ಯುಎನ್೮೫ಬಿ (55-, 65-ಇಂಚು) ಮಾದರಿಗಳ ಬೆಲೆ ರೂ. 1,14,990 ರಿಂದ ಪ್ರಾರಂಭವಾಗಲಿದೆ. ಈ ಟಿವಿಗಳು ಸ್ಯಾಮ್ ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್‌ಸಂಗ್ ಶಾಪ್ ಸೇರಿದಂತೆ ಎಲ್ಲಾ ಸ್ಯಾಮ್‌ಸಂಗ್ ರಿಟೇಲ್ ಸ್ಟೋರ್‌ಗಳು, ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ಗಳಲ್ಲಿ ಲಭ್ಯವಿರುತ್ತವೆ.

ವಾರಂಟಿ
ನಿಯೋ ಕ್ಯುಎಲ್ಇಡಿ ಟಿವಿಗಳನ್ನು ಖರೀದಿಸುವ ಗ್ರಾಹಕರಿಗೆ 10 ವರ್ಷಗಳ ಸ್ಕ್ರೀನ್ ಬರ್ನಿಂಗ್ ರಹಿತ ವಾರಂಟಿ ನೀಡಲಾಗುತ್ತದೆ.

ಸ್ಯಾಮ್ ಸಂಗ್ ನ ನಿಯೋ ಕ್ಯುಎಲ್ಇಡಿ ಟೆಲಿವಿಷನ್ ಗಳು
2022 ರ ಸಾಲಿನೊಂದಿಗೆ, ಸ್ಯಾಮ್ ಸಂಗ್ ತನ್ನ ನಿಯೋ ಕ್ಯುಎಲ್‌ಇಡಿ ಟೆಲಿವಿಷನ್‌ಗಳನ್ನು ಅಂತಿಮ ವೀಕ್ಷಣೆಯ ಅನುಭವಕ್ಕಾಗಿ ವಿನ್ಯಾಸಗೊಳಿಸಿ ಪ್ರೀಮಿಯಂ ವೈಶಿಷ್ಟ್ಯಗಳ ಪರಿಪೂರ್ಣ ಮಿಶ್ರಣದೊಂದಿಗೆ ಪರಿಚಯಿಸುತ್ತದೆ. ನಿಯೋ ಕ್ಯುಎಲ್‌ಇಡಿ ಅತ್ಯಾಧುನಿಕ ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೋ ಜೊತೆಗೆ ಪ್ರಬಲ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ ೮ಕೆ ಮತ್ತು ನೈಜ ಡೆಪ್ತ್ ವಿಸ್ತಾರಕದೊಂದಿಗೆ ಲಭ್ಯವಿದೆ. ಸ್ಯಾಮ್ ಸಂಗ್‌ನ ೨೦೨೨ ರ ನಿಯೋ ಕ್ಯುಎಲ್‌ಇಡಿ ಟಿವಿಗಳು ಸ್ಮಾರ್ಟ್ ಮತ್ತು ಬುದ್ಧಿವಂತ ವೈಶಿಷ್ಟ್ಯಗಳು ಮತ್ತು ಬಳಕೆದಾರ ಇಂಟರ್‌ಫೇಸ್‌ನೊAದಿಗೆ ಸುಸಜ್ಜಿತವಾಗಿದೆ, ಸ್ಯಾಮ್‌ಸಂಗ್ ಟಿವಿಗಳು ವಿಷಯವನ್ನು ವೀಕ್ಷಿಸಲು, ಸಾಧನಗಳನ್ನು ನಿಯಂತ್ರಿಸಲು, ಆಟಗಳನ್ನು ಆಡಲು, ಕೆಲಸ ಮಾಡಲು ಪ್ರಮುಖವಾಗಿ ನೆರವಾಗುತ್ತದೆ.

ಸ್ಮಾರ್ಟ್ ಹಬ್
ಸ್ಯಾಮ್ ಸಂಗ್ ನ 2022ರ ನಿಯೋ ಕ್ಯುಎಲ್ಇಡಿ ಟಿವಿ ಅನಿಯಮಿತ ಮನರಂಜನೆಗಾಗಿ ಒಂದೇ ತಾಣವಾಗಿದೆ. ಹೊಸ ಶ್ರೇಣಿಯ ಟೆಲಿವಿಷನ್‌ಗಳು ಒಂದೇ ಸ್ಕ್ರೀನ್ ನಲ್ಲಿ ಎಲ್ಲಾ ವಿಷಯ, ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಸೆಟ್ಟಿಂಗ್‌ಗಳೊAದಿಗೆ ನವೀಕರಿಸಿದ ಹೋಮ್ ಸ್ಕ್ರೀನ್‌ನೊಂದಿಗೆ ಬರುತ್ತದೆ. ಸ್ಯಾಮ್‌ಸಂಗ್ ಟಿವಿ ಪ್ಲಸ್ ವೈಶಿಷ್ಟ್ಯವು ಚಂದಾದಾರಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ ಏಕೆಂದರೆ ಇದು ಬಳಕೆದಾರರಿಗೆ ದೈನಂದಿನ ಡೋಸ್ ಮನರಂಜನೆ, ಸುದ್ದಿ, ಕ್ರೀಡೆಗಳು ಮತ್ತು ಹೆಚ್ಚಿನವುಗಳಿಗಾಗಿ ೪೫+ ಉಚಿತ ಸ್ಥಳೀಯ ಮತ್ತು ಜಾಗತಿಕ ಟಿವಿ ಚಾನೆಲ್‌ಗಳನ್ನು ಆನಂದಿಸಲು ನೆರವಾಗುತ್ತದೆ.

ಗೇಮರ್ ಗಳ ಸ್ವರ್ಗ
ಸ್ಯಾಮ್ ಸಂಗ್ ನಿಯೋ ಕ್ಯುಎಲ್‌ಇಡಿ ಶ್ರೇಣಿಯ ಟೆಲಿವಿಷನ್‌ಗಳು ಟೆಲಿವಿಷನ್ ಗಿಂತ ಹೆಚ್ಚು ಆಧುನಿಕವಾಗಿದೆ; ಇದು ಪ್ರತಿಯೊಬ್ಬ ಆಟಗಾರನ ಕನಸಾಗಿದೆ. 2022ರ  ನಿಯೋ ಕ್ಯುಎಲ್‌ಇಡಿ ಶ್ರೇಣಿಯು ಆಟಗಾರರಿಗೆ ಸ್ವಲ್ಪವೂ ವಿಳಂಬವಿಲ್ಲದೆ ನಯವಾದ ಮತ್ತು ಸುಗಮ ಚಲನೆಯನ್ನು ಹೊಂದಲು ಅನುಮತಿಸುತ್ತದೆ. ಗೇಮ್ ಬಾರ್ ಆಟಗಾರರಿಗೆ ಗೇಮಿಂಗ್ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಆಟದ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಗರಿಷ್ಟಗೊಳಿಸಲು ಅನುಮತಿಸುತ್ತದೆ. ಅಲ್ಲದೇ, ಜೂಮ್-ಇನ್ ಮೋಡ್ ಮತ್ತು ಅಲ್ಟ್ರಾ-ವೈಡ್ ವ್ಯೂ ಜೊತೆಗೆ ಇನ್ನು ಮುಂದೆ ಯಾವುದೇ ಬ್ಲೈಂಡ್ ಸ್ಪಾಟ್‌ಗಳಿಲ್ಲ. ಇವೆಲ್ಲವೂ ಸಾಧ್ಯ ಮೋಷನ್ ಎಕ್ಸಿಲೆರೇಟರ್ ಟರ್ಬೋ ಪ್ರೋ ಇದು ನಿಯೋ ಕ್ಯುಎಲ್ಇಡಿ ಯನ್ನು ಗೇಮರ್ ಗಳಿಗೆ ಹೊಂದಿಸಲಾಗಿದೆ.

ನಿಯೋ ಕ್ಯುಎಲ್ಇಡಿ ಯೊಂದಿಗೆ ಇತರ ಸಾಧನಗಳನ್ನು ನಿಯಂತ್ರಿಸಿ
2022 ರ ಸ್ಯಾಮ್ ಸಂಗ್ ನಿಯೋ ಕ್ಯುಎಲ್‌ಇಡಿ ಪೂರ್ವನಿರ್ಮಿತ ಐಒಟಿ ಯಂತಹ ಇತರ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ಟಿವಿಯೊಂದಿಗೆ ನಿಮ್ಮ ಮನೆಯನ್ನು ಸ್ಮಾರ್ಟ್ ರೀತಿಯಲ್ಲಿ ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ. ಸ್ಲಿಮ್ ಫಿಟ್ ಕ್ಯಾಮ್‌ನೊಂದಿಗೆ ವೀಡಿಯೋ ಕರೆ, ಬಹು ಧ್ವನಿ ಸಹಾಯಕ, ಒಂದೇ ಸಮಯದಲ್ಲಿ ಟಿವಿ ಮತ್ತು ಸ್ಮಾರ್ಟ್ಫೋನ್ ವಿಷಯಗಳನ್ನು ಆನಂದಿಸಲು ಮಲ್ಟಿ-ವ್ಯೂ ಇತ್ಯಾದಿಗಳು ಸ್ಮಾರ್ಟ್ ಟಿವಿಯ ಇತರ ಕೆಲವು ವೈಶಿಷ್ಟ್ಯಗಳಾಗಿವೆ.

₹20,000-45,000 ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮಾರುಕಟ್ಟೆ ಪಾಲು 40% ಕ್ಕೆ ಹೆಚ್ಚಿಸುವ ಗುರಿ: ಸ್ಯಾಮ್‌ಸಂಗ್

ವಿನ್ಯಾಸ: ಸ್ಮಾರ್ಟರ್ ವಿನ್ಯಾಸಕ್ಕಾಗಿ ಕನಿಷ್ಟ ವಿಧಾನ
ಸ್ಯಾಮ್‌ಸಂಗ್‌ನ 2022 ರ ನಿಯೋ ಕ್ಯುಎಲ್ಇಡಿ ಇನ್ಫಿನಿಟಿ ಸ್ಕ್ರೀನ್, ಇನ್ಫಿನಿಟಿ ಒನ್ ಡಿಸೈನ್ ಮತ್ತು ಲಗತ್ತಿಸಬಹುದಾದ ಸ್ಲಿಮ್ ಒನ್ ಕನೆಕ್ಟ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವೈಶಿಷ್ಟ್ಯಗಳು ಟೆಲಿವಿಷನ್ ಗೆ ಕೇಬಲ್ ಕಟ್ಟರ್ ಇಲ್ಲದೆ ತೆಳ್ಳಗಿನ ಮತ್ತು ನಯವಾದ ವಿನ್ಯಾಸವನ್ನು ಹೊಂದಲು ಅವಕಾಶ ನೀಡಿದೆ. ಇದರೊಂದಿಗೆ, ಇಂಜಿನಿಯರ್‌ಗಳು ನಿಯೋ ಕ್ಯುಎಲ್‌ಇಡಿಗಳಿಗಾಗಿ ಕನಿಷ್ಠ ವಿನ್ಯಾಸವನ್ನು ನೀಡಿದ್ದು, ನಿಮ್ಮ ಜಾಗವನ್ನು ಸಂಪೂರ್ಣವಾಗಿ ನವೀಕರಿಸಲು ಗಮನ ಸೆಳೆಯುವ ಕಪ್ಪು ಅಂಚಿನ ಶುದ್ಧ ಚಿತ್ರದ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ತಯಾರಕರು ಪರಿಸರ ಸ್ನೇಹಿ ಸೋಲಾರ್ ಸೆಲ್ ರಿಮೋಟ್ ನೀಡಿದ್ದು, ಅದು ಕೊಠಡಿಯ ಬೆಳಕಿನಿಂದ ಸ್ವತಃ ಚಾರ್ಜ್ ಆಗುತ್ತದೆ. ಒಂದು ಕೈಯಲ್ಲಿ ರಿಮೋಟ್ ಅನ್ನು ಸುಲಭವಾಗಿ ನಿರ್ವಹಿಸಲು  ಕನಿಷ್ಠ ಕೀಗಳೊಂದಿಗೆ ಬರುತ್ತದೆ ಮತ್ತು ವಾಯ್ಸ್ ಕಂಟ್ರೋಲ್ ಕಮ್ಯಾಂಡ್, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಸ್ಯಾಮ್‌ಸಂಗ್ ಟಿವಿ ಪ್ಲಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ಗಾಗಿ ಮೀಸಲಾದ ಕೀಗಳನ್ನು ಹೊಂದಿದೆ.

ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೋ
ಹೊಸ ಶ್ರೇಣಿಯ ನಿಯೋ ಕ್ಯುಎಲ್‌ಇಡಿ ಟಿವಿಗಳು ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೊ (ಕ್ವಾಂಟಮ್ ಮಿನಿ ಎಲ್‌ಇಡಿಯೊಂದಿಗೆ) ಮತ್ತು ವರ್ಧಿತ ಕಾಂಟ್ರಾಸ್ಟ್ನೊAದಿಗೆ ತೀಕ್ಷ್ಣವಾದ ವಿವರಗಳಿಗಾಗಿ ಶೇಪ್ ಅಡಾಪ್ಟಿವ್ ಲೈಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. 1/40  ನೇ ಗಾತ್ರದ ಸಾಮಾನ್ಯ ಎಲ್‌ಇಡಿಯೊಂದಿಗೆ, ಕ್ವಾಂಟಮ್ ಮಿನಿ ಎಲ್‌ಇಡಿ ಬಣ್ಣಗಳು ಮತ್ತು ಆಳವಾದ ಕಪ್ಪು ಬಣ್ಣದೊಂದಿಗೆ ಅತ್ಯುತ್ತಮ ಹೊಳಪನ್ನು ನೀಡುತ್ತದೆ ಮತ್ತು ಚಿತ್ರ ಮಸುಕಾಗುವುದನ್ನು ಕಡಿಮೆ ಮಾಡುತ್ತದೆ. ಶೇಪ್ ಅಡಾಪ್ಟಿವ್ ಲೈಟ್ ಕಂಟ್ರೋಲ್ ಚಿತ್ರದಲ್ಲಿನ ವಿವಿಧ ವಸ್ತುಗಳನ್ನು ನಿಖರವಾಗಿ ವಿಶ್ಲೇಷಿಸುತ್ತದೆ ಮತ್ತು ಅದಕ್ಕನುಗುಣವಾಗಿ ಲೈಟ್ ಗಳನ್ನು ನಿಯಂತ್ರಿಸುತ್ತದೆ, ಹಾಗೂ ತಡೆರಹಿತ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ ೮ಏ ಜೊತೆಗೆ ರಿಯಲ್ ಡೆಪ್ತ್ ಎನ್ಹಾನ್ಸರ್
ಅತ್ಯಾಧುನಿಕ ಪ್ರೊಸೆಸರ್ ಮತ್ತು ವಿಷಯವನ್ನು 8ಕೆ ಮತ್ತು 4ಕೆ ಗುಣಮಟ್ಟಕ್ಕೆ ಹೆಚ್ಚಿಸುವ ಸಾಮರ್ಥ್ಯದೊಂದಿಗೆ ಸುಸಜ್ಜಿತವಾಗಿದೆ, 2022 ರ ನಿಯೋ ಕ್ಯುಎಲ್ಇಡಿ ಶ್ರೇಣಿಯು ಎಐ ಆಧಾರಿತ ಗಾಢ ಕಲಿಕೆಯೊಂದಿಗೆ ನೀವು ವೀಕ್ಷಿಸುವ ಎಲ್ಲದರಲ್ಲೂ ಸ್ಪಷ್ಟತೆ ಮತ್ತು ಗಾಢತೆಯನ್ನು ನೀಡುತ್ತದೆ.

click me!