Warning: Google Chrome ಬಳಸುತ್ತಿದರೆ ಮಿಸ್ ಮಾಡದೇ ಅಪ್ಡೇಟ್ ಮಾಡಿ: ಕೇಂದ್ರದ ಸಲಹೆ!

By Kannadaprabha News  |  First Published Dec 14, 2021, 10:21 AM IST

*ಗೂಗಲ್‌ನ ಬ್ರೌಸರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ
*ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ ಪ್ರತಿಕ್ರಿಯೆ
*ತಕ್ಷಣ ಕ್ರೋಮ್‌  ಅಪ್‌ಡೇಟ್‌ ಮಾಡಿ: ಕೇಂದ್ರದ ಸಲಹೆ
 


ನವದೆಹಲಿ(ಡಿ. 14) : ಗೂಗಲ್‌ನ ಬ್ರೌಸರ್‌ ಎಂಜಿನ್‌ ಕ್ರೋಮ್‌ನಲ್ಲಿ (Google Chrome) ಕೆಲ ಅಪಾಯಕಾರಿ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರೋಮ್‌ ಅನ್ನು ಅಪ್‌ಡೇಟ್‌ (Update) ಮಾಡಿಕೊಳ್ಳುವಂತೆ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕ್ರೋಮ್‌ ಬ್ರೌಸರ್‌ನಲ್ಲಿ ಹಲವಾರು ದುರ್ಬಲ ಅಂಶಗಳಿದ್ದು, ಅದರ ಮೂಲಕ ಬಳಕೆದಾರರ ಕಂಪ್ಯೂಟರ್‌ ಹ್ಯಾಕ್‌ (Computer Hack) ಮಾಡಿ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ. ಜೊತೆಗೆ ಇದರ ಮೂಲಕ ಕಂಪ್ಯೂಟರ್‌ಗಳಿಗೆ ಮಾಲ್‌ವೇರ್‌ಗಳನ್ನು ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. 

ಹೀಗಾಗಿ ಕ್ರೋಮ್‌ ಅಪ್‌ಡೇಟ್‌ ಮಾಡಿಕೊಳ್ಳಿ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ವಿಭಾಗದ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ (CERT-In) ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಗೂಗಲ್‌, ಈ ದೋಷಗಳನ್ನು ಪರಿಹರಿಸಿ ನೂತನ ಆವೃತ್ತಿ ಬಿಡುಗಡೆ ಮಾಡಿದ್ದು, ಇದರಲ್ಲಿ ಭದ್ರತೆಗೆ ಸಂಬಂಧಿಸಿ 22 ಪರಿಹಾರಗಳನ್ನು ನೀಡಲಾಗಿದೆ ಎಂದಿದೆ. ವಿಂಡೋಸ್ (Windows), ಮ್ಯಾಕ್ (Mac) ಮತ್ತು ಲಿನಕ್ಸ್‌ಗಾಗಿ (Linux) ಕ್ರೋಮ್ ಸ್ಟೇಬಲ್ ಚಾನಲ್ ಅನ್ನು 96.0.4664.93 ಗೆ ಅಪ್ಡೇಟ್‌ ಮಾಡಲಾಗಿದೆ ಎಂದು ಗೂಗಲ್  ಘೋಷಿಸಿದೆ. ಈ ಹೊಸ ಅಪ್ಡೇಟ್‌ ಈಗಾಗಲೇ ಬಳಕೆದಾರರಿಗೆ ಲಭ್ಯವಿದೆ.  

Latest Videos

undefined

ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!

ಅಮೆರಿಕದಲ್ಲಿ(US) ಹಣದುಬ್ಬರ ಶೇ.7ಕ್ಕೆ ತಲುಪಿರೋ ಹಿನ್ನೆಲೆಯಲ್ಲಿ ಗೂಗಲ್(Google) ಸಂಸ್ಥೆ ತನ್ನ ಕಾರ್ಯನಿರ್ವಾಹಕರ (executive) ವೇತನದಲ್ಲಿ(Salary) ಹೊಂದಾಣಿಕೆ ಮಾಡಲು ಕ್ರಮಗಳನ್ನು ಕೈಗೊಳ್ಳುತ್ತಿರೋ ಬಗ್ಗೆ ವರದಿಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ (Inflation) 1990ರ ಬಳಿಕ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಸಿಎನ್ ಬಿಸಿ(CNBC) ತನಗೆ ದೊರೆತಿರೋ ಗೂಗಲ್ ಮೀಟಿಂಗ್ ನ ಧ್ವನಿ ಸುರುಳಿ ಹಾಗೂ ಮೆಮೋ(Memo) ಆಧರಿಸಿ ಈ ಸುದ್ದಿಯನ್ನು ವರದಿ ಮಾಡಿದೆ. ಆದ್ರೆ ವೇತನದಲ್ಲಿನ ಈ ಹೊಂದಾಣಿಕೆ ಅಮೆರಿಕದ ಎಲ್ಲ ಭಾಗದಲ್ಲೂ ಏಕರೂಪದಲ್ಲಿರೋದಿಲ್ಲ. 2020ರಲ್ಲಿ ಕಂಪನಿಯ ಯೋಜನೆಗಳ ಕುರಿತು ಚರ್ಚಿಸಲು ಗೂಗಲ್ ವಿಶೇಷ ಸಭೆ ಆಯೋಜಿಸಿತ್ತು. 

ಈ ಆಡಿಯೋನಲ್ಲಿ ಸಿಇಒ(CEO) ಸುಂದರ್ ಪಿಚೈ (Sundar Pichai)'ಅಮೆರಿಕದ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿದ್ದು, ಕೆಲವು ಕಂಪನಿಗಳು ವೇತನ ಹೊಂದಾಣಿಕೆಗೆ ಮುಂದಾಗಿವೆ. ಹೀಗಾಗಿ ಗೂಗಲ್ ಗೂ ಇಂಥ ಯಾವುದಾದ್ರೂ ಯೋಚನೆ ಇದೆಯಾ?' ಎಂದು ಪ್ರಶ್ನಿಸುತ್ತಿರೋದು ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಗೂಗಲ್ ಉಪಾಧ್ಯಕ್ಷ ಫ್ರಾಂಕ್ ವ್ಯಾಗ್ನರ್ (Frank Wagner),'ಕಂಪನಿಯ ಉನ್ನತ ಮ್ಯಾನೇಜರ್ ಗಳು ಈ ಸಂಬಂಧ ಮ್ಯಾನೇಜರ್ ಗಳಿಗೆ ಪತ್ರ ನೀಡಲಿದ್ದು, ಮುಂದಿನ ವರ್ಷಕ್ಕೆ ಪರಿಹಾರದ ಹಣವನ್ನು ಹೆಚ್ಚಿಸೋದಾಗಿ ತಿಳಿಸಿದರು̤ 

ಇದನ್ನೂ ಓದಿ:

1) Wireless over Wire: ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌: ಇಂಟೆಲ್‌ ಹೊಸ ತಂತ್ರಜ್ಞಾನ!

2) Moto G51 vs Redmi Note 11T 5G ಯಾವ ಫೋನ್ ಉತ್ತಮ? ಇಲ್ಲಿದೆ ಕ್ಯಾಮೆರಾದಿಂದ ಕಾರ್ಯಕ್ಷಮತೆಯವರೆಗಿನ ಮಾಹಿತಿ!

3) Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

click me!