Wireless over Wire: ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌: ಇಂಟೆಲ್‌ ಹೊಸ ತಂತ್ರಜ್ಞಾನ!

Published : Dec 14, 2021, 06:43 AM IST
Wireless over Wire: ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌: ಇಂಟೆಲ್‌  ಹೊಸ ತಂತ್ರಜ್ಞಾನ!

ಸಾರಾಂಶ

*ಇಂಟೆಲ್‌ ಇಂಡಿಯಾದಿಂದ ಹೊಸ ತಂತ್ರಜ್ಞಾನ ಆವಿಷ್ಕಾರ *ಜಾರಿಗೆ ಬಂದರೆ ಹಳ್ಳಿ ಮನೆಗೂ ಸುಲಭ ಬ್ರಾಡ್‌ಬ್ಯಾಂಡ್‌ *ಜನರಿಗೆ ವೇಗದ ಇಂಟರ್ನೆಟ್‌ ಸಂಪರ್ಕ ಸುಲಭ

ಬೆಂಗಳೂರು (ಡಿ. 14): ಇಂಟರ್ನೆಟ್‌ ಸೇವೆ (Interaet) ನೀಡಿಕೆಯಲ್ಲಿ ಕ್ರಾಂತಿಕಾರಿ ಎನ್ನಬಹುದಾದ ನೂತನ ಆವಿಷ್ಕಾರವೊಂದನ್ನು ಇಂಟೆಲ್‌ ಇಂಡಿಯಾ ಕಂಪನಿ ಮಾಡಿದ್ದು, ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌ ಕೂಡ ಪೂರೈಕೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇದಕ್ಕೆ ‘ವೊವ್‌’ (ವೈರ್‌ಲೆಸ್‌ ಓವರ್‌ ವೈರ್‌ -Wireless over Wire) ಎಂದು ಹೆಸರಿಡಲಾಗಿದೆ.ವಿದ್ಯುತ್‌ನ ಜೊತೆಜೊತೆಗೇ ಇಂಟರ್ನೆಟ್‌ ಕೂಡ ಪೂರೈಕೆ ಮಾಡುವ ಈ ತಂತ್ರಜ್ಞಾನ ಯಶಸ್ವಿಯಾಗಿ ಜಾರಿಗೆ ಬಂದರೆ ದೇಶದ ಕುಗ್ರಾಮದ ಮನೆಗಳಿಗೂ ಸುಲಭವಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ದೊರೆಯಲಿದೆ. ಅದು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯನ್ನು ಇನ್ನೊಂದು ಸ್ತರಕ್ಕೆ ಒಯ್ಯಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಟೆಲಿಫೋನ್‌ ಲೈನ್‌ನಲ್ಲಿ (Telephone Line) ಧ್ವನಿ ಮತ್ತು ಇಂಟರ್ನೆಟ್‌ ಅನ್ನು ಒಟ್ಟೊಟ್ಟಿಗೇ ಕೊಂಡೊಯ್ಯುವ ತಂತ್ರಜ್ಞಾನ ಬಳಸಲಾಗುತ್ತದೆ. ಅದೇ ರೀತಿ ಎಲೆಕ್ಟ್ರಿಕ್‌ ಕೇಬಲ್‌ನಲ್ಲಿ (Electric Cable) ವಿದ್ಯುತ್‌ ಮತ್ತು ಇಂಟರ್ನೆಟ್‌ ಅನ್ನು ಒಟ್ಟಿಗೇ ಸಾಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಸದ್ಯ ದೇಶದ ಬಹುತೇಕ ಗ್ರಾಮ ಪಂಚಾಯತ್‌ಗಳವರೆಗೆ ಆಪ್ಟಿಕಲ್‌ ಫೈಬರ್‌ ಕೇಬಲ್‌ (Optical Foibre Cable) ಮೂಲಕ ವೇಗದ ಬ್ರಾಡ್‌ಬ್ಯಾಂಡ್‌ ಪೂರೈಸುವ ವ್ಯವಸ್ಥೆಯಿದೆ. ಅಲ್ಲಿಂದ ಹಳ್ಳಿಯ ಮನೆಗಳಿಗೆ ಇಂಟರ್ನೆಟ್‌ ತಲುಪಿಸುವುದು ದುಬಾರಿಯಾಗುತ್ತಿದೆ. ವಿದ್ಯುತ್‌ ಲೈನ್‌ನಲ್ಲೇ ಬ್ರಾಡ್‌ಬ್ಯಾಂಡ್‌ ಕೂಡ ಪೂರೈಸಬಹುದು ಎಂದಾದರೆ ಇಂಟರ್ನೆಟ್‌ ಇನ್ನಷ್ಟುಅಗ್ಗವಾಗಬಹುದು ಮತ್ತು ಜನರಿಗೆ ವೇಗದ ಇಂಟರ್ನೆಟ್‌ ಸಂಪರ್ಕ ಸುಲಭವಾಗಿ ಲಭಿಸಬಹುದು ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಂಟೆಲ್‌ ಇಂಡಿಯಾ ಮುಖ್ಯಸ್ಥೆ ನಿವೃತಿ ರೈ, ‘ನಮ್ಮ ದೇಶದಲ್ಲಿ ಹೆಚ್ಚುಕಮ್ಮಿ ಎಲ್ಲಾ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವಿದೆ. ವಿದ್ಯುತ್‌ ಲೈನ್‌ನಲ್ಲೇ ಇಂಟರ್ನೆಟ್‌ ಪೂರೈಸುವ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಅದರಿಂದ, ಎಲ್ಲೆಲ್ಲಿಗೆ ವಿದ್ಯುತ್‌ ತಲುಪುತ್ತದೆಯೋ ಅಲ್ಲಿಗೆಲ್ಲ ಇಂಟರ್ನೆಟ್‌ ತಲುಪಿಸಲು ಸಾಧ್ಯವಾಗಲಿದೆ. ದೇಶದ 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್‌ ಲಭಿಸಿದರೆ ಇಡೀ ದೇಶ ಜಾಗತಿಕ ಮಾರುಕಟ್ಟೆಯ ಸಂಪರ್ಕಕ್ಕೆ ಬರಲಿದೆ. ಅದರಿಂದ ಭಾರತ ಬೆಳೆಯುತ್ತದೆ, ಜೊತೆಗೇ ನಾವೂ ಬೆಳೆಯುತ್ತೇವೆ’ ಎಂದು ಹೇಳಿದ್ದಾರೆ.

ಕರೆಂಟ್‌ ಲೈನ್‌ನಲ್ಲಿಇಂಟರ್ನೆಟ್‌ ಹೇಗೆ?

- ಸದ್ಯ ಫೋನ್‌ ಲೈನ್‌ನಲ್ಲಿ ಧ್ವನಿ ಹಾಗೂ ಇಂಟರ್ನೆಟ್‌ ಪ್ರತ್ಯೇಕ ಸಿಗ್ನಲ್‌ ರೂಪದಲ್ಲಿ ರವಾನೆಯಾಗುತ್ತಿವೆ

- ಇದೇ ರೀತಿಯಲ್ಲಿ ವಿದ್ಯುತ್‌ ಲೈನ್‌ನಲ್ಲಿ ವಿದ್ಯುತ್‌ ಹಾಗೂ ಇಂಟರ್ನೆಟ್‌ ಸಾಗಿಸಲು ಸಾಧ್ಯವಿದೆ

- ಲೋಯರ್‌-ಫ್ರೀಕ್ವೆನ್ಸಿ ಸಿಗ್ನಲ್‌ಗಳು ವಿದ್ಯುತ್ತನ್ನು, ಹೈ-ಫ್ರೀಕ್ವೆನ್ಸಿ ಸಿಗ್ನಲ್‌ಗಳು ಇಂಟರ್ನೆಟ್ಟನ್ನು ಸಾಗಿಸುತ್ತವೆ

- ಇದನ್ನು ಸ್ವೀಕರಿಸುವ ಜಾಗದಲ್ಲಿ ಪವರ್‌ ಔಟ್‌ಲೆಟ್‌ಗಳನ್ನು ಕೊಂಚ ಮಾರ್ಪಾಡು ಮಾಡಬೇಕಾಗುತ್ತದೆ

- ಅಲ್ಲಿಂದ ವಿದ್ಯುತ್‌ ಮೀಟರ್‌ಗೆ ವಿದ್ಯುತ್ತನ್ನು, ಡೇಟಾ ಉಪಕರಣಕ್ಕೆ ಇಂಟರ್ನೆಟ್ಟನ್ನು ಪಡೆಯಬಹುದು

ಅಗತ್ಯ ವಸ್ತು ಪೂರೈಕೆಗೆ ಡ್ರೋನ್ ಡೆಲಿವರಿ ಆರಂಭಿಸಲಿರುವ ಸ್ಪೈಸ್‌ಜೆಟ್!

 

ಪ್ರತಿಷ್ಟಿತ ವಿಮಾನಯಾನ ಕಂಪನಿ ಸ್ಪೈಸ್‌ಜೆಟ್ (SpiceJet) ಶೀಘ್ರದಲ್ಲೇ ವೈದ್ಯಕೀಯ ಮತ್ತು ಅಗತ್ಯ ಪೂರೈಕೆಗಳಿಗಾಗಿ ಡ್ರೋನ್ ವಿತರಣಾ ಸೇವೆಗಳನ್ನು (Drone Delivery) ಪರಿಚಯಿಸಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಶನಿವಾರ ಹೇಳಿದ್ದಾರೆ. ತನ್ನ ಲಾಜಿಸ್ಟೀಕ್ ಪ್ಲಾಟ್‌ಫಾರ್ಮ್  'SpiceXpres' ಸೇವೆಗಳನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಡ್ರೋನ್ ವಿತರಣಾ ಸೇವೆಯನ್ನು ಪರಿಚಯಿಸಲಗಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

0-5 ಕೆಜಿ, 5-10 ಕೆಜಿ ಮತ್ತು 10-25 ಕೆಜಿ ಸೇರಿದಂತೆ ವಿವಿಧ ಪೇಲೋಡ್‌ಗಳ ಕಸ್ಟಮೈಸ್ ಮಾಡಿದ ಡ್ರೋನ್‌ಗಳನ್ನು ಪರಿಚಯಿಸಲು ಕಂಪನಿ ಪ್ಲಾನ್‌ ಮಾಡಿದೆ. ಹಾಗಾಗಿ ಲಾಜಿಸ್ಟಿಕ್ಸ್‌ ಕೇಕ್ಷತ್ರದಲ್ಲಿ ಇದು ಗಣನೀಯ ಬದಲಾವಣೆ ತರುವ ಸಾಧ್ಯತೆಗಳಿವೆ. ಡೆಲಿವರಿ ಕ್ಷೇತ್ರದಲ್ಲಿ ಡ್ರೋನ್‌ ಅಳವಡಿಕೆಯಿಂದ ಗ್ರಾಹಕರಿಗೆ ಸರಿಯಾಸ ಸಮಯದಲ್ಲಿ ಡೆಲಿವರಿ ನೀಡಲು ಸಾಧ್ಯವಾಗಲಿದೆ.
ಸ್ಪೈಸ್‌ಜೆಟ್ ಈ ಯೋಜನೆಯ ಆರಂಭಿಕ ಹಂತದಲ್ಲಿ ಕೇವಲ ವಿತರಕರು ಮತ್ತು ಫುಲ್‌ಫಿಲ್‌ಮೆಂಟ್ ಕೇಂದ್ರಗಳಿಗೆ ಡೆಲಿವರಿ ಮಾಡಲಿದೆ. ಭವಿಷ್ಯದಲ್ಲಿ ಗ್ರಾಹಕರ ಮನೆಗಳಿಗೆ ನೇರವಾಗಿ ಡೆಲಿವರಿ ಮಾಡುವುದಾಗಿ ಕಂಪನಿ ತಿಳಿಸಿದೆ.

ಇದನ್ನೂ ಓದಿ:

1)Paperless Government: Dubai ವಿಶ್ವದ ಮೊದಲ ಕಾಗದರಹಿತ ಸರ್ಕಾರ : ಯುವರಾಜ ಶೇಖ್‌ ಹಮದ್‌!

2)ISRO Agreement With Oppo: ನ್ಯಾವಿಗೇಷನ್ ಸೇವೆಗಾಗಿ ಚೀನಾ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದ!

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?