Moto G51 4G RAM ಮತ್ತು 64GB ಸ್ಟೋರೇಜ್ ಒಂದೇ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆ 14,999 ರೂ. ಮತ್ತೊಂದೆಡೆ, Redmi Note 11T 5G ಬೇಸ್ 6GB RAM ಮತ್ತು 64GB ಸ್ಟೋರೇಜ್ ಮಾದರಿ ಬೆಲೆ ರೂ 16,999 ರಿಂದ ಪ್ರಾರಂಭವಾಗುತ್ತದೆ.
Moto G51 ಮೊಟೊರೊಲಾದ ಹೊಸದಸಾಗಿ ಬಿಡುಗಡೆ ಮಾಡಿರುವ 5Gಮೊಬೈಲ್. ಇದು ಮಾರುಕಟ್ಟೆಯಲ್ಲಿ Redmi Note 11T 5G ಸ್ಪರ್ಧೆ ನೀಡಬಲ್ಲ ಸ್ಮಾರ್ಟ್‌ಫೋನ್ ಆಗಿದೆ. Moto G51 ಮತ್ತು Redmi Note 11T 5G ಗಳ ಸ್ಪೇಸಿಫೀಕೇಶನ್ ಹೋಲಿಕೆ ಇಲ್ಲಿದೆ. ಇದರಿಂದ ಯಾವ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆ ಎಂಬುದನ್ನು ನೀವು ತಿಳಿದುಕೊಳ್ಳಬಹದು. Moto ಜಾಗತಿಕವಾಗಿ ಈಗಾಗಲೇ ಹಲವಾರು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈಗ ಈ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. Moto G31 ಬಿಡುಗಡೆಯ ನಂತರ, ಕಂಪನಿಯು Moto G51 ಅನ್ನು ದೇಶದಲ್ಲಿ ಪರಿಚಯಿಸಿದೆ. ಕೈಗೆಟಕುವ ಬೆಲೆಯ 5G ಸ್ಮಾರ್ಟ್‌ಫೋನ್ ಇದಾಗಿದ್ದು ಆರಂಭಿಕ ಬೆಲೆ ರೂ 14,999 ಕ್ಕೆ ಲಭ್ಯವಿದೆ. ಇದು Redmi Note 11T 5G ಯ ನಿಕಟ ಪ್ರತಿಸ್ಪರ್ಧಿಯಾಗಿದ್ದು ಇದರ ಬೆಲೆ 16,999 ರೂ. ಆಗಿದೆ.
ಎರಡೂ ಸ್ಮಾರ್ಟ್‌ಫೋನ್‌ಗಳ ಭಾರತದ ಬೆಲೆ:
undefined
Moto G51 ಅನ್ನು ಒಂದೇ 4G RAM ಮತ್ತು 64GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆ 14,999 ರೂ. ಮತ್ತೊಂದೆಡೆ, Redmi Note 11T 5G ಬೇಸ್ 6GB RAM ಮತ್ತು 64GB ಸ್ಟೋರೇಜ್ ಮಾದರಿ ರೂ 16,999 ರಿಂದ ಪ್ರಾರಂಭವಾಗುತ್ತದೆ. 6GB RAM ಮತ್ತು 128GB ಸ್ಟೋರೇಜ್ ಮಾದರಿ ಬೆಲೆ 17,999 ರೂ. ಜತಗೆ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ರೂ 19,999 ಬೆಲೆಗೆ ಲಭ್ಯವಿದೆ.
Features and Specifications:
Dimensions and weight: Moto G51 ಅಳತೆ 170.47 x 76.54 x 9.13 mm ಮತ್ತು 205 ಗ್ರಾಂ ತೂಕವಿದೆ. Redmi Note 11T ಸ್ವಲ್ಪ ಚಿಕ್ಕದಾಗಿದ್ದು ಮತ್ತು ಹಗುರವಾಗಿದೆ. ಇದು 163.6 x 75.8 x 8.8 mm ಅಳತೆ ಮತ್ತು 195 ಗ್ರಾಂ ತೂಕವಿದೆ.
Display: Moto G51 ಮತ್ತು Redmi Note 11T 5G ಎರಡೂ IPS LCD ಪ್ಯಾನೆಲ್ ಅನ್ನು ಹೊಂದಿದೆ. ಆದಾಗ್ಯೂ, Note 11T ಯ 6.6-ಇಂಚಿನ ಪ್ಯಾನೆಲ್‌ಗೆ ಹೋಲಿಸಿದರೆ Moto G51 6.8-ಇಂಚಿನ ಡೊಡ್ಡ ಡಿಸ್ಪ್ಲೇ ಹೊಂದಿದೆ. ಅಲ್ಲದೆ Note 11T 5G ನಲ್ಲಿ 90Hz ಡಿಸ್ಪ್ಲೇ ಹೊಂದಿದ್ದರೆ Moto G51 120Hz ಡಿಸ್ಪ್ಲೇಯನ್ನು ಹೊಂದಿದೆ.
Processor: Moto G51 Snapdragon 480+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದರೆ, Redmi Note 11T 5G Dimesity 810 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
RAM: Moto G51 ಒಂದೇ 4GB RAM ಮಾದರಿಯಲ್ಲಿ ಬರುತ್ತದೆ. ಮತ್ತೊಂದೆಡೆ, Redmi Note 11T ಅನ್ನು 6GB ಮತ್ತು 8GB RAM ಮಾದರಿಗಳಲ್ಲಿ ನೀಡಲಾಗುತ್ತದೆ. ಇದು 3GB ಹೆಚ್ಚುವರಿ ವರ್ಚುವಲ್ RAM ಅನ್ನು ನೀಡುವ RAM ಬೂಸ್ಟರ್ ವೈಶಿಷ್ಟ್ಯವನ್ನು ಹೊಂದಿದೆ.
Storage: Moto G51 ಒಂದೇ 64GB ಸಂಗ್ರಹಣೆ ಆಯ್ಕೆಯನ್ನು ಹೊಂದಿದೆ. Redmi Note 11T 64GB ಮತ್ತು 128GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ.
Moto G51 vs Redmi Note 11T 5G: Camera
Rear Camera: Moto G51 ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ, ಆದರೆ Redmi Note 11T ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. Moto G51 ನ ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಒಳಗೊಂಡಿದೆ.
ಆದರೆ, Redmi Note 11T 50-ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
Front camera: Moto G51 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಆದರೆ Redmi Note 11T ಮುಂಭಾಗದಲ್ಲಿ HD ಗುಣಮಟ್ಟದ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Moto G51 vs Redmi Note 11T 5G: Other Features
Battery: Moto G51 ನಲ್ಲಿ 33W ವೇಗದ ಚಾರ್ಜಿಂಗ್ ಅನ್ನು ಒದಗಿಸಲಾಗಿದೆ ಆದರೆ Redmi Note 11T 5G ನಲ್ಲಿ 20W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ.
Software: Moto G51 ಮತ್ತು Redmi Note 11T 5G Android 11 ಚಾಲಿತವಾಗಿವೆ.
Connectivity and security: ಎರಡು ಸ್ಮಾರ್ಟ್‌ಫೋನ್‌ಗಳು 5G, GPS, WiFi, Bluetooth, Type-C ಪೋರ್ಟ್ ಬೆಂಬಲಿಸುತ್ತವೆ. ಜತೆಗೆ ಎರಡೂ ಸಾಧನಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ.
Colours: Moto G51 - Bright silver ಮತ್ತು Indigo Blue ಬಣ್ಣಗಳಲ್ಲಿ ಲಭ್ಯವಿದೆ. Redmi Note 11T Aquamarine Blue, Stardust White ಮತ್ತು Matte Black ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ:
1)Social Media Hacking: ನಿಮ್ಮ ಸೋಷಿಯಲ್ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!
2)Robot Wants To be A Mother: : ಎಂದಿರನ್ ಕಥೆಗಿಂತ ಕಮ್ಮಿ ಇಲ್ಲ, ರೋಬೋಟ್‌ಗೆ ಅಮ್ಮನಾಗೋ ಆಸೆ
3)Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme