ಪತಿಯ ಜೀವ ಉಳಿಸಿದ ಆ್ಯಪಲ್ ವಾಚ್‌: ಸಿಇಒ ಟಿಮ್ ಕುಕ್‌ಗೆ ಕೃತಜ್ಞತೆ ಸಲ್ಲಿಸಿದ ಪತ್ನಿ!

Published : Mar 19, 2022, 09:46 AM ISTUpdated : Mar 19, 2022, 09:50 AM IST
ಪತಿಯ ಜೀವ ಉಳಿಸಿದ ಆ್ಯಪಲ್ ವಾಚ್‌:  ಸಿಇಒ ಟಿಮ್ ಕುಕ್‌ಗೆ ಕೃತಜ್ಞತೆ ಸಲ್ಲಿಸಿದ ಪತ್ನಿ!

ಸಾರಾಂಶ

ಇಸಿಜಿ ಅಪ್ಲಿಕೇಶನ್ Apple Watch Series 4, Series 5, Series 6, ಅಥವಾ Series 7 ನಲ್ಲಿನ ವಿದ್ಯುತ್ ಹೃದಯ ಸಂವೇದಕವನ್ನು ಬಳಸಿಕೊಂಡು ನಿಮ್ಮ ಹೃದಯ ಬಡಿತ ಮತ್ತು ಲಯವನ್ನು ರೆಕಾರ್ಡ್ ಮಾಡುತ್ತದೆ.

ಹರಿಯಾಣ (ಮಾ. 19):  ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾನವನ ಪ್ರತಿಯೊಂದು ಕಾರ್ಯದಲ್ಲೂ ಜತೆಯಾಗಿ ನಿಲ್ಲಬಲ್ಲ ಸಾವಿರಾರು ಸಾಧನಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ಮಾನವನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದ್ದರೆ ಇನ್ನೂ ಕೆಲವು ಮನುಷ್ಯರ ದಿನನಿತ್ಯದ ಜೀವನವನ್ನು ಸುಲಭಗೊಳಿಸುವಲ್ಲಿ ಸಹಾಯ ಮಾಡುತ್ತವೆ. ತಂತ್ರಜ್ಞಾನ ಅನೇಕ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಹೊರಹೊಮ್ಮಿದ ಅನೇಕ ಉದಾಹಣೆಗಳಿವೆ. ಈಗ ತನ್ನ ವಿಶಿಷ್ಟ ತಂತ್ರಜ್ಞಾನದ ಮೂಲಕ ಹೆಸರುವಾಸಿಯಾಗಿರುವ ಆ್ಯಪಲ್‌ನ ಸಾಧನವೊಂದು ಹರಿಯಾಣದ ವ್ಯಕ್ತಿಯೊಬ್ಬರ ಜೀವ ಉಳಿಸಿದೆ. 

ಹರಿಯಾಣದ ನಿವಾಸಿಯಾದ 34 ವರ್ಷದ ನಿತೇಶ್ ಚೋಪ್ರಾ ಇತ್ತೀಚೆಗೆ ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸಿದ್ದು ಅವರ ಕಥೆ ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಆಪಲ್ ಕಂಪನಿಯ ವಾಚ್ ಸಂಭಾವ್ಯ ಹೃದಯ ಸ್ತಂಭನದಿಂದ (Cardiac Arrest) ಮನುಷ್ಯನ ಜೀವವನ್ನು ಉಳಿಸಿದ ಕೀರ್ತಿಗೆ ಈಗ ಪಾತ್ರವಾಗಿದೆ. 

ಇದನ್ನೂ ಓದಿ: ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ Apple Watch

ಮಾರ್ಚ್ 12 ರಂದು, ಚೋಪ್ರಾ ಅವರು ತಮ್ಮ ಎದೆಯಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದರು ಮತ್ತು ಆಪಲ್ ವಾಚ್ ಮೂಲಕ ಅವರ ಇಸಿಜಿಯನ್ನು ಮೇಲ್ವಿಚಾರಣೆ ಮಾಡಿದ್ದರು. ಈ ವೇಳೆ ಆ್ಯಪಲ್ ವಾಚ್‌ ಅನಿಯಮಿತ ಹೃದಯದ ಲಯ (Afib) ಎಚ್ಚರಿಕೆಯನ್ನು ತೋರಿಸಿದೆ. ಈ ಬಳಿಕ  ನಿತೇಶ್ ಮತ್ತು ಅವರ ಹೆಂಡತಿ ನೇಹಾ ತಕ್ಷಣ ಹತ್ತಿರದ ಆಸ್ಪತ್ರೆಗೆ ಧಾವಿಸಿ, ಅಲ್ಲಿ ಅವರು ತಮ್ಮ ಆ್ಯಪಲ್ ವಾಚ್‌ನಿಂದ  ಪಡೆದ ಇಸಿಜಿ ವರದಿಯನ್ನು ವೈದ್ಯರಿಗೆ ತೋರಿಸಿದ್ದಾರೆ. 

ಆಂಜಿಯೋಗ್ರಫಿ ಚಿಕಿತ್ಸೆ:  ಆ್ಯಪಲ್ ವಾಚ್‌ ಫಲಿತಾಂಶಗಳನ್ನು ಗಮನಿಸಿ, ವೈದ್ಯರು ಇಸಿಜಿ ಮಾಡಿದ್ದಾರೆ. ವೈದ್ಯರು ನಡೆಸಿದ ಇಸಿಜಿ ಪರೀಕ್ಷೆಗಳು ಆ್ಯಪಲ್ ವಾಚ್‌ ನೀಡಿದ್ದ ಫಲಿತಾಂಶಗಳನ್ನು ದೃಢಪಡಿಸಿವೆ. ಅದೇ ಸಂಜೆ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಆಂಜಿಯೋಗ್ರಫಿಯನ್ನು ಮಾಡಿದ್ದಾರೆ.  ಚಿಕಿತ್ಸೆ ವೇಳೆ ಚೋಪ್ರಾ ಅವರ ಮುಖ್ಯ ಪರಿಧಮನಿ ಸಂಪೂರ್ಣವಾಗಿ ಬ್ಲಾಕ್‌ ಆಗಿತ್ತು ಎಂದು ತಿಳಿದುಬಂದಿದ್ದು, ಇದು ಸಂಭಾವ್ಯ ಹೃದಯ ಸ್ತಂಭನಕ್ಕೆ ಕಾರಣವಾಗಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. 

ಇಸಿಜಿ ವರದಿ ಬಂದ ತಕ್ಷಣವೇ, 34 ವರ್ಷ ವಯಸ್ಸಿನ ನಿತೇಶ್‌ಗೆ  ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಅದು ಅವರ ಜೀವವನ್ನು ಉಳಿಸಿತು. "30 ರ ದಶಕದ ಆರಂಭದಲ್ಲಿ ಯುವಕನಿಗೆ ಅಂತಹ ಅಸಹಜತೆ ಇರಬಾರದು ಎಂದು ನಾವು ವಾಚ್‌ನ ವರದಿಯನ್ನು ನಿರ್ಲಕ್ಷಿಸಿದ್ದೇವು. ಆದರೆ ಮಾರ್ಚ್ 12ರ ಶನಿವಾರದಂದು ನಮ್ಮ ಕೊನೆಯ ವರದಿ ಹಿಂದಿನ ಎಚ್ಚರಿಕೆಗಳಿಗೆ ಅನುಗುಣವಾಗಿತ್ತು ಮತ್ತು ನನ್ನ ಹೃದಯದ ಆರೋಗ್ಯದಲ್ಲಿ ಏನೋ ಸಮಸ್ಯೆಯಿದೆ ಮತ್ತು ನಾವು ಆಸ್ಪತ್ರೆಗೆ ಧಾವಿಸಬೇಕು ಎಂದು ನಮಗೆ ನಂಬುವಂತೆ ಮಾಡಿತು, ”ಎಂದು ನಿತೇಶ್ ವಿವರಿಸಿದ್ದಾರೆ

ಜೀವನ ನೀಡಿದಕ್ಕಾಗಿ ಧನ್ಯವಾದ: ಮನುಷ್ಯನ ಜೀವವನ್ನು ಉಳಿಸಿದ್ದಕ್ಕಾಗಿ ದಂಪತಿಗಳು ಆ್ಯಪಲ್‌ಗೆ ತುಂಬಾ ಕೃತಜ್ಞರಾಗಿದ್ದಾರೆ. ಆ್ಯಪಲ್‌ನ ಸಿಇಒ ಟಿಮ್ ಕುಕ್‌ಗೆ ಪತ್ರ ಬರೆದಿರುವ ನೇಹಾ, “ನೀವು ಒದಗಿಸಿದ ತಂತ್ರಜ್ಞಾನದಿಂದ ನಾವು ಆಸ್ಪತ್ರೆಗೆ ತಲುಪಿದ್ದೇವೆ ಮತ್ತು ನನ್ನ ಪತಿ ಈಗ ಆರೋಗ್ಯವಾಗಿದ್ದಾರೆ. ನಾನು ನಿಮಗೆ ಬಹಳಷ್ಟು ಪ್ರೀತಿ ಮತ್ತು ಸಂತೋಷವನ್ನು ಬಯಸುತ್ತೇನೆ ಮತ್ತು ನನ್ನ ಪತಿಗೆ ಅವರ ಜೀವನವನ್ನು ನೀಡಿದಕ್ಕಾಗಿ ಧನ್ಯವಾದಗಳು." ಎಂದು ಹೇಳಿದ್ದಾರೆ

ಇದನ್ನೂ ಓದಿ: Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!

ನೇಹಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಟಿಮ್, “ನೀವು ವೈದ್ಯಕೀಯ ಗಮನವನ್ನು ಪಡೆದಿರುವುದಕ್ಕೆ ಮತ್ತು ನಿಮಗೆ ಬೇಕಾದ ಚಿಕಿತ್ಸೆಯನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಚೆನ್ನಾಗಿರಿ. ಬೆಸ್ಟ, ಟಿಮ್" ಎಂದು ಹೇಳಿದ್ದಾರೆ. 

ಇಸಿಜಿ ಅಪ್ಲಿಕೇಶನ್: ಇಸಿಜಿ ಅಪ್ಲಿಕೇಶನ್ Apple Watch Series 4, Series 5, Series 6, ಅಥವಾ Series 7 ನಲ್ಲಿನ ವಿದ್ಯುತ್ ಹೃದಯ ಸಂವೇದಕವನ್ನು ಬಳಸಿಕೊಂಡು ನಿಮ್ಮ ಹೃದಯ ಬಡಿತ ಮತ್ತು ಲಯವನ್ನು ರೆಕಾರ್ಡ್ ಮಾಡಬಹುದು ಮತ್ತು ನಂತರ ಅನಿಯಮಿತ ಲಯದ ಒಂದು ರೂಪವಾದ ಹೃತ್ಕರ್ಣದ ಕಂಪನ (AFib) ಗಾಗಿ ರೆಕಾರ್ಡಿಂಗ್  ಪರಿಶೀಲಿಸಬಹುದು.

ಇಸಿಜಿ ಅಪ್ಲಿಕೇಶನ್ ನಿಮ್ಮ ಹೃದಯ ಬಡಿತವನ್ನು ಮಾಡುವ ವಿದ್ಯುತ್ ನಾಡಿಗಳನ್ನು ಪ್ರತಿನಿಧಿಸುವ ಎಲೆಕ್ಟ್ರೋಕಾರ್ಡಿಯೋಗ್ರಾಮನ್ನು ದಾಖಲಿಸುತ್ತದೆ. ಇಸಿಜಿ ಅಪ್ಲಿಕೇಶನ್ ನಿಮ್ಮ ಹೃದಯ ಬಡಿತವನ್ನು ಪಡೆಯಲು ಮತ್ತು ನಿಮ್ಮ ಹೃದಯದ ಮೇಲಿನ ಮತ್ತು ಕೆಳಗಿನ ಕೋಣೆಗಳು ಲಯದಲ್ಲಿದೆಯೇ ಎಂದು ನೋಡಲು ಈ ನಾಡಿಗಳನ್ನು ಪರಿಶೀಲಿಸುತ್ತದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ