ನ್ಯೂಯಾರ್ಕ್(ಮಾ.19): ನಗರ, ಗ್ರಾಮೀಣ ಸೇರಿದಂತೆ ಯಾವುದೇ ಮೂಲೆಯಲ್ಲಿ ಬಳಕೆಗಾರರಿಗೆ ಉದ್ದೇಶಿತ ಸ್ಥಳಗಳಿಗೆ ಪ್ರಯಾಣಿಸಲು ದಾರಿ ತೋರಿಸುವ ಗೂಗಲ್ ಮ್ಯಾಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಸುಮಾರು 12,000ಕ್ಕೂ ಹೆಚ್ಚು ಅಮೆರಿಕ, ಯುಕೆ, ಕೆನಡಾ, ಭಾರತ ಸೇರಿದಂತೆ ಕೆಲ ದೇಶದ ಬಳಕೆದಾರರು ಗೂಗಲ್ ಮ್ಯಾಪ್ ಸರಿಯಾಗಿ ಕೆಲಸ ಮಾಡದ ಕಾರಣ ಪರದಾಡಿದ್ದಾರೆ.
ಅಮೆರಿಕ, ಯುನೈಟೆಡ್ ಕಿಂಗ್ಡಮ್, ಕೆನಡಾ ಸೇರಿದಂತೆ ಕೆಲ ದೇಶದ ಬಳಕೆದಾರರಿಗೆ ಗೂಗಲ್ ಮ್ಯಾಪ್ ಸರಿಯಾಗಿ ದಾರಿ ತೋರಿಸಿಲ್ಲ. ಗೂಗಲ್ ಮ್ಯಾಪ್ ಕ್ಲಿಕ್ ಮಾಡಿದಾಗ ಏನನ್ನೂ ತೋರಿಸುತ್ತಿಲ್ಲ ಎಂದು ಬಳಕೆದಾರರು ದೂರು ನೀಡಿದ್ದಾರೆ. ಇನ್ನು ಅಮೆರಿಕದ 887 ಮಂದಿಗೆ ಗೂಗಲ್ ಸರ್ಚ್ ಎಂಜಿನ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.
undefined
ಲಂಡನ್‌ನ 2,000 ಬಳಕೆದಾರರು ದೂರು ನೀಡಿದ್ದರೆ, ಕೆನಾಡಾದ 1,763 ಮಂದಿ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಆದರೆ ಭಾರತದಲ್ಲಿ ಕೇವಲ 288 ಮಂದಿ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.
ನಿಮ್ಮ ನಗರದ ಜನನಿಬಿಡ ಪ್ರದೇಶಗಳ ಮಾಹಿತಿ ನೀಡುತ್ತದೆ ಗೂಗಲ್ ಮ್ಯಾಪ್ ಹೊಸ ಫೀಚರ್!
ಗೂಗಲ್ ಮ್ಯಾಪ್ ಕಾರ್ಯನಿರ್ವಹಣೆ ಸಮಸ್ಯೆಯಿಂದ ಹಲವರು ದಾರಿ ತಿಳಿಯದೆ ಪರದಾಡಿದ ಪರಿಸ್ಥಿ ನಿರ್ಮಾಣವಾಗಿದೆ. ಇನ್ನೂ ಕೆಲವರು ತಮ್ಮ ಪ್ರಯಾಣವನ್ನೇ ಮುಂದೂಡಿದ್ದಾರೆ. ಅರ್ಧದಲ್ಲಿ ಸಿಲುಕಿ ಒದ್ದಾಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಈ ಕುರಿತು ಸಾಮಾಜಿಕ ಜಾಲತಾಣಗಲ್ಲಿ ಮೇಮ್ಸ್ ಹರಿದಾಡುತ್ತಿದೆ. ಗೂಗಲ್ ಮ್ಯಾಪ್ ಡೌನ್ ಆಗಿರುವುದರಿಂದ ರಸ್ತೆ ಬದಿಗಳಲ್ಲಿನ ಮೈಲ್ಸ್ ಮಾರ್ಕ್, ರಸ್ತೆ ಕುರಿತು ಹಾಕಲಾಗಿರುವ ಬೋರ್ಡ್ ಸೇರಿದಂತೆ ಎಲ್ಲವನ್ನೂ ಗಮನಿಸಬೇಕು ಎಂದು ಟ್ರೋಲ್ ಮಾಡಲಾಗುತ್ತಿದೆ. ಎಲ್ಲರಲ್ಲಿ ದಾರಿ ಕೇಳಿ ಸಾಗಿದರೆ ಉದ್ದೇಶಿತ ಸ್ಥಳ ತಲುಪುವಾಗ ಕಾರ್ಯಕ್ರಮವೇ ಮುಗಿದು ಹೋಗಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಪ್ ಇಂಡಿಯಾ ಜತೆ ಇಸ್ರೋ ಒಪ್ಪಂದ
ಅತ್ಯುತ್ತಮ ಡಿಜಿಟಲ್ ನಕ್ಷೆ ಸೇವೆ ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಡಿಜಿಟಲ್ ಮ್ಯಾಪಿಂಗ್ ಸೇವೆ ನೀಡುವ ಖಾಸಗಿ ಸಂಸ್ಥೆ ಮ್ಯಾಪ್‌ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಗೂಗಲ್ ಅತ್‌ರ್ ಹಾಗೂ ಗೂಗಲ್ ಮ್ಯಾಪ್‌ಗೆ ಸಡ್ಡು ಹೊಡೆಯಲು ಮುಂದಾಗಿದೆ.
ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್
ಎರಡೂ ಸಂಸ್ಥೆಗಳೂ ಒಗ್ಗೂಡಿ ಉಪಗ್ರಹ ಚಿತ್ರ ಮತ್ತು ಭೂ ಅವಲೋಕನಾ ಅಂಕಿಅಂಶಗಳ ಆಧಾರದಲ್ಲಿ ನಿಖರ, ದೇಶೀಯ ನಕ್ಷೆ ಸೇವೆಯನ್ನು ನೀಡಲಿವೆ. ಈ ಮೂಲಕ ನಕ್ಷೆ ಸೇವೆಗೆ ವಿದೇಶಿ ಸಂಸ್ಥೆಗಳಿಗೆ ಅವಲಂಬಿತರಾಗುವುದಕ್ಕೆ ಪರಿಹಾರವಾಗಿ ಇಸ್ರೋ ಈ ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ. ‘ಆತ್ಮನಿರ್ಭರ ಭಾರತದ ಪರಿಕಲ್ಪನೆ ಹಿನ್ನೆಲೆಯಲ್ಲಿ ದೇಶೀಯ ಮ್ಯಾಪಿಂಗ್ ಸೇವೆ ನೀಡುವ ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದು ಮ್ಯಾಪ್ ಇಂಡಿಯಾ ಸಿಇಒ, ನಿರ್ದೇಶಕ ರೋಹನ್ ವರ್ಮಾ ತಿಳಿಸಿದ್ದಾರೆ.
ಭಾರತದಲ್ಲಿ ಗೂಗಲ್ 75 ಸಾವಿರ ಕೋಟಿ ರು. ಹೂಡಿಕೆ
ಭಾರತದಲ್ಲಿ 75 ಸಾವಿರ ಕೋಟಿ ರು. ಹೂಡಿಕೆ ಮಾಡುವ ಮಹತ್ವದ ನಿರ್ಧಾರವನ್ನು ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಪ್ರಕಟಿಸಿದ್ದಾರೆ. ‘ಗೂಗಲ್ ಫಾರ್ ಇಂಡಿಯಾ’ 6ನೇ ಸಮ್ಮೇಳನದಲ್ಲಿ ವಿಡಿಯೋ ಲಿಂಕ್ ಮೂಲಕ ಭಾಷಣ ಮಾಡಿದ ಪಿಚೈ ಮುಂದಿನ 5ರಿಂದ 7 ವರ್ಷದಲ್ಲಿ ಗೂಗಲ್ ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಹಣ ಹೂಡಲು ನಿರ್ಧರಿಸಿದೆ. ಇದರಲ್ಲಿ ಷೇರು ಹೂಡಿಕೆ, ಸಹಭಾಗಿತ್ವ, ಮೂಲಸೌಕರ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಹೂಡಿಕೆಗಳು ಸೇರಿವೆ’ ಎಂದರು.