'ಚಂದ್ರಯಾನ 2ರ ಹೃದಯ ಬಡಿತ ಪ್ರತಿ ಭಾರತೀಯನಿಗೂ ಕೇಳಿಸ್ತಿದೆ'

By Web Desk  |  First Published Sep 7, 2019, 12:45 PM IST

ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್| ಭಾರತ ವಿಫಲವಾಯ್ತು ಎಂದ ಪಾಕಿಸ್ತಾನ| ಸಂವಹನ ಕಳೆದುಕೊಂಡಿದ್ದೇವಷ್ಟೇ, ಮತ್ತೆ ಪ್ರಯತ್ನಿಸಿ ಗೆಲ್ಲುತ್ತೇವೆ ಅಂದ್ರ ಆನಂದ್ ಮಹೀಂದ್ರ| ಇಸ್ರೋ ಬೆನ್ನಿಗೆ ನಿಂತ ಭಾರತ


ನವದೆಹಲಿ[ಸೆ.07]: ಆರ್ಬಿಟರ್‌ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಇನ್ನೇನು ಚಂದ್ರನ ಅಂಗಳದ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಡಿತಗೊಂಡಿದೆ. ಹೀಗೆ ಅಂತಿಮ ಕ್ಷಣದಲ್ಲಿ ಸಿಗ್ನಲ್ ಕಡಿತಗೊಂಡಿರುವುದು ಇಸ್ರೋ ವಿಜ್ಞಾನಿಗಳಿಗೆ ನಿರಾಸೆಯುಂಟು ಮಾಡಿದೆ. ಹೀಗಿದ್ದರೂ ಇಸ್ರೋ ವಿಜ್ಞಾನಿಗಳ ಸಾಧನೆ ಅಸಾಮಾನ್ಯವಾದುದು. ಹೀಗಾಗಿ ಸದ್ಯ ಭಾರತೀಯ ವಿಜ್ಞಾನಿಗಳ ಈ ಅದ್ಭುತ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿಫಲತೆ ಎಂಬುವುದಿಲ್ಲ, ಇಲ್ಲಿ ಎಲ್ಲವೂ ಪ್ರಯೋಗ. ಹೀಗಾಗಿ ಕುಗ್ಗದಿರಿ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಭಾರತೀಯರೆಲ್ಲಾ ಒಕ್ಕೊರಲಿನಿಂದ ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. 

Video: ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!

Latest Videos

undefined

ಸದ್ಯ ಈ ವಿಚಾರದಲ್ಲಿ ಉದ್ಯಮಿ ಆನಂದ್ ಮಹೀಂದ್ರಾರ ಟ್ವೀಟ್ ಒಂದು ಭಾರೀ ವೈರಲ್ ಆಗುತ್ತಿದೆ. ಚಂದ್ರಯಾನ 2 ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ಭಾರತವನ್ನು ಅಪಹಾಸ್ಯ ಮಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದಂತಿದೆ. ಚಂದ್ರಯಾನ 2ಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು 'ಸಂವಹನ ನಿಂತಿಲ್ಲ. ಪ್ರತಿಯೊಬ್ಬ ಭಾರತೀಯ ಚಂದ್ರಯಾನ 2ರ ಹೃದಯ ಬಡಿತವನ್ನು ಆಲಿಸುತ್ತಿದ್ದಾನೆ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲವೆಂದಾದರೆ, ಮತ್ತೆ ಪ್ರಯತ್ನಿಸಿ ಎನ್ನುತ್ತಿರುವ ಭಾರತೀಯರ ಮಾತುಗಳೇ ಇದಕ್ಕೆ ಸಾಕ್ಷಿ' ಎಂದಿದ್ದಾರೆ.

ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!

ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನೆಲೆಯಿಂದ 2019ರ ಜುಲೈನಲ್ಲಿ ಚಂದ್ರಯಾನ 2 ಉಡಾವಣೆಯಾಗಿತ್ತು. ಅಂದಿನಿಂದ ಉದ್ಯಮಿ ಆನಂದ್ ಮಹೀಂದ್ರಾ ಪ್ರತಿಯೊಂದೂ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಈ ಸಂಬಂಧ ಮೊದಲ ಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರಾ 'ಉಸಿರುಗಟ್ಟುವಂತಿದ್ದ ವಾತಾವರಣದಲ್ಲಿ ಎಲ್ಲರಂತೆ ನಾನು ಕೂಡಾ ವಿಜ್ಞಾನಿಗಳು ನಗುಮೊಗದಿಂದ ಪರಸ್ಪರ ಶುಭ ಕೋರುವುದನ್ನು ನೋಡಲಿಚ್ಛಿಸಿದ್ದೆ. ನಾನು ನಮ್ಮ ವಿಜ್ಞಾನಿಗಳೊಂದಿಗಿದ್ದೇನೆ. ಅವರ ಪರಿಶ್ರಮಕ್ಕೆ ನನ್ನದೊಂದು ಸಲಾಂ' ಎಂದಿದ್ದರು.

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!

click me!